ಬದುಕಿನ ಪರಿಪೂರ್ಣತೆಗೆ ಸಾಹಿತ್ಯದ ಓದು ಅಗತ್ಯ: ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು

Upayuktha
0


ಸುರತ್ಕಲ್: ಬದುಕಿನ ಪರಿಪೂರ್ಣತೆಗೆ ಸಾಹಿತ್ಯದ ಓದು ಅಗತ್ಯ,  ಮನೋರಂಜನೆಯೊಂದಿಗೆ ಜ್ಞಾನದ ವಿಸ್ತರಣೆಗೆ ಕಾರಣವಾಗುವ ಸಾಹಿತ್ಯಾಭಿರುಚಿಯನ್ನು ಪ್ರತಿಯೊಬ್ಬರು ಮೂಡಿಸಿಕೊಳ್ಳಬೇಕು ಎಂದು ಯುವ ಸಾಹಿತಿ ಹಾಗೂ  ಸುರತ್ಕಲ್ ಎಂ.ಆರ್.ಪಿ.ಎಲ್ ಸಂಸ್ಥೆಯ ಸಹಾಯಕ ಮೇಲ್ವಿಚಾರಕ ಅಧಿಕಾರಿ ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು ನುಡಿದರು. ಅವರು ಸುರತ್ಕಲ್ ರೋಟರಿ ಕ್ಲಬ್ ಆಯೋಜಿಸಿದ್ದ ಸಾಹಿತ್ಯ ಮತ್ತು ಬದುಕು ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.


ಭಾವನಾತ್ಮಕ ಕೌಶಲ್ಯ ಇಂದಿನ ಅಗತ್ಯವಾಗಿದ್ದು ಈ ನಿಟ್ಟಿನಲ್ಲಿ ಸಾಮಾಜಿಕ ಸೇವೆ ಸಂಸ್ಥೆಗಳ ಕಾರ್ಯ ಮಹತ್ತರದ್ದಾಗಿದೆಂದರು.


ಕೃಷ್ಣರಾಜ ತಂತ್ರಿ ಯು.ಎಸ್.ಎ ಮಾತನಾಡಿ ಮಕ್ಕಳ ಹಂತದಲ್ಲಿಯೇ ಓದಿನ ಅಭಿರುಚಿ ಬೆಳೆಸುವ ಕಾರ್ಯ ನಡೆಯ ಬೇಕಾಗಿದ್ದು ಭಾವನೆಗಳ ಅಭಿವ್ಯಕ್ತಿಗೆ ಸಾಹಿತ್ಯ ಮಾಧ್ಯಮ ಉಪಯುಕ್ತವಾಗಿದೆಂದರು.


ಸುರತ್ಕಲ್ ರೋಟರಿ ಕ್ಲಬ್ ಅಧ್ಯಕ್ಷ ಯೋಗಿಶ್ ಕುಳಾಯಿ ಅಧ್ಯಕ್ಷತೆ ವಹಿಸಿದ್ದರು.


ಪ್ರೊ. ಕೃಷ್ಣಮೂರ್ತಿ ಆಶಯನುಡಿಗಳನ್ನಾಡಿದರು. ರೋಟರಿ ಕ್ಲಬ್ ಕಾರ್ಯದರ್ಶಿ ಎಂ.ರಮೇಶ ರಾವ್ ಕರ‍್ಯಕ್ರಮ ಸಂಯೋಜಿಸಿದರು. ನಿಯೋಜಿತ ಅಧ್ಯಕ್ಷ ಸಂದೀಪ್ ರಾವ್ ಇಡ್ಯಾ ಮತ್ತಿತರರು ಉಪಸ್ಥಿತರಿದ್ದರು.



 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
To Top