ಆರೋಗ್ಯವಂತ ಸಮಾಜ ನಿರ್ಮಾಣದಲ್ಲಿ ಸಮಾಜ ಸೇವಾ ಸಂಸ್ಥೆಗಳ ಪಾತ್ರ ಮಹತ್ವ: ಡಾ. ಕಿಶೋರ್ ಕುಮಾರ್

Upayuktha
0



ಸುರತ್ಕಲ್‌: ಆರೋಗ್ಯವಂತ ಸಮಾಜದ ನಿರ್ಮಾಣದಲ್ಲಿ ಸಮಾಜ  ಸೇವಾ ಸಂಸ್ಥೆಗಳ ಪಾತ್ರ ಮಹತ್ವದ್ದಾಗಿದೆ. ಶಿಕ್ಷಣ ಕೇಂದ್ರಗಳ ಆವರಣಗಳು ಕಲಿಕೆಗೆ ಪೂರಕವಾಗಿ ಚೇತೋಹಾರಿಯಾಗಿ ಕಾಣಬೇಕು. ಸುರತ್ಕಲ್‌ನ ಇನ್ನರ್‌ವೀಲ್ ಕ್ಲಬ್ ಆಕರ್ಷಕವಾದ ಹೂದೋಟದ ನಿರ್ಮಾಣವನ್ನು ಸುರತ್ಕಲ್ ಜಿಲ್ಲಾ ತರಬೇತಿ ಕೇಂದ್ರದ ಆವರಣದಲ್ಲಿ ರೂಪಿಸಿ ಕೊಟ್ಟಿರುವುದು ಶ್ಲಾಘನೀಯವಾಗಿದೆ ಎಂದು ರಾಜ್ಯ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ತರಬೇತಿ ಕೇಂದ್ರ, ಸುರತ್ಕಲ್‌ನ ಪ್ರಾಂಶುಪಾಲ  ಡಾ. ಕಿಶೋರ್ ಕುಮಾರ್ ನುಡಿದರು.


 ಅವರು ಸುರತ್ಕಲ್ ಇನ್ನರ್‌ವೀಲ್ ಕ್ಲಬ್‌ನ ಶಾಶ್ವತ ಯೋಜನೆಯಾಗಿ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ತರಬೇತಿ ಕೇಂದ್ರ ಸುರತ್ಕಲ್‌ಗೆ ಕೊಡುಗೆಯಾಗಿ ನೀಡಿದ ಹೂದೋಟವನ್ನು ಉದ್ಘಾಟಿಸಿ ಮಾತನಾಡಿದರು.


ಮುಖ್ಯ ಅತಿಥಿಗಳಾಗಿದ್ದ ಗೋವಿಂದ ದಾಸ ಕಾಲೇಜು, ಸುರತ್ಕಲ್‌ನ ಪ್ರಾಚಾರ್ಯ ಪ್ರೊ. ಪಿ. ಕೃಷ್ಣಮೂರ್ತಿ ಮಾತನಾಡಿ ಇನ್ನರ್‌ವೀಲ್ ಕ್ಲಬ್ ಸುರತ್ಕಲ್ ಹಲವಾರು ಸಮಾಜಮುಖಿ ಕಾರ್ಯಕ್ರಮಗಳನ್ನು ನಿರಂತರವಾಗಿ ಆಯೋಜಿಸುತ್ತಿದೆ. ನೂರಾರು ಜನರು ಇದರ ಪ್ರಯೋಜನಗಳನ್ನು ಪಡೆದುಕೊಂಡಿದ್ದಾರೆ ಎಂದರು.


ಇನ್ನರ್ ವೀಲ್ ಕ್ಲಬ್ ಸುರತ್ಕಲ್‌ನ ಅಧ್ಯಕ್ಷೆ ಸಾವಿತ್ರಿ ರಮೇಶ್ ಭಟ್ ಕ್ಲಬ್‌ನ ಕಾರ್ಯಚಟುವಟಿಕೆಗಳ ಮಾಹಿತಿ ನೀಡಿ ಸ್ವಾಗತಿಸಿದರು.


ಗೋವಿಂದ ದಾಸ ಕಾಲೇಜಿನ ನಿವೃತ್ತ ಉಪಪ್ರಾಂಶುಪಾಲ ಪ್ರೊ. ರಮೇಶ್ ಭಟ್ ಎಸ್.ಜಿ., ಲಲಿತಕಲಾ ಸಂಘದ ಸಂಯೋಜಕ ವಿನೋದ್ ಶೆಟ್ಟಿ, ಇನ್ನರ್‌ವೀಲ್ ಕ್ಲಬ್‌ನ  ಕಾರ್ಯದರ್ಶಿ ಮಾಲತಿ ಸಚ್ಚಿದಾನಂದ ಸದಸ್ಯೆಯರಾದ ಭಾಗ್ಯಲಕ್ಷ್ಮೀ ಭಟ್, ಶೈಲಾ ಮೋಹನ್, ವಸಂತಿ ರಾವ್, ಡಾ. ಶಶಿಕಲಾ ಭಟ್, ನಳಿನಿ ರಾವ್, ಭಾರತಿ, ಸುಮಿತ್ರಾ ಆರ್. ಕುಂದರ್ ಹಾಗೂ ಜಿಲ್ಲಾ ತರಬೇತಿ ಕೇಂದ್ರದ ಅಧಿಕಾರಿ ರಿಚರ್ಡ್ ಪಿಂಟೋ ಮತ್ತಿತರರು ಉಪಸ್ಥಿತರಿದ್ದರು.



 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top