ಸುರತ್ಕಲ್‌: ಗೋವಿಂದ ದಾಸ ಕಾಲೇಜಿನ ವಿದ್ಯಾರ್ಥಿ ಸೆನೆಟ್ ವಾರ್ಷಿಕೋತ್ಸವ

Upayuktha
0

 


ಸುರತ್ಕಲ್‌: ವಿದ್ಯಾರ್ಥಿಗಳು ತರಗತಿಯಲ್ಲಿ ಬೋಧಿಸುವ ಪಾಠ ಪ್ರವಚನಗಳೊಂದಿಗೆ ಮೃದು ಕೌಶಲ್ಯಗಳ ಬಗ್ಗೆಯೂ ಜ್ಞಾನವನ್ನು ಹೆಚ್ಚಿಸಿಕೊಳ್ಳಬೇಕು. ಜೀವನದಲ್ಲಿ ಶಿಸ್ತು, ಸಮಯ ಪ್ರಜ್ಞೆಯೊಂದಿಗೆ ಹಿರಿಯರಿಗೆ ಗೌರವ ನೀಡುವುದನ್ನು ವಿದ್ಯಾರ್ಥಿ ದೆಸೆಯಿಂದಲೇ ಬೆಳೆಸಿಕೊಳ್ಳುವುದು ಪ್ರತಿಯೊಬ್ಬ ವಿದ್ಯಾರ್ಥಿಯ ಕರ್ತವ್ಯವಾಗಿದೆ. ಮಹಿಳಾ ಪ್ರಾತಿನಿಧ್ಯತೆಯೊಂದಿಗೆ ಗೋವಿಂದ ದಾಸ ಕಾಲೇಜು ಅಭಿವೃದ್ದಿ ಹೊಂದುತ್ತಿರುವುದು ಶ್ಲಾಘನೀಯವಾಗಿದೆ ಎಂದು ನಿವೃತ್ತ ರಾಜ್ಯ ಎನ್.ಎಸ್.ಎಸ್. ಅಧಿಕಾರಿ ಮತ್ತು ಸರಕಾರದ ಪದನಿಮಿತ್ತ ಜಂಟಿ ಕಾರ್ಯದರ್ಶಿ ಡಾ. ಗಣನಾಥ ಶೆಟ್ಟಿ ಎಕ್ಕಾರು ನುಡಿದರು. ಅವರು ಗೋವಿಂದ ದಾಸ ಕಾಲೇಜಿನ ಮತ್ತು ವಿದ್ಯಾರ್ಥಿ ಸೆನೆಟ್‌ನ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.


ಅಧ್ಯಕ್ಷತೆ ವಹಿಸಿದ್ದ ಹಿಂದೂ ವಿದ್ಯಾದಾಯಿನೀ ಸಂಘ (ರಿ), ಸುರತ್ಕಲ್‌ನ ಅಧ್ಯಕ್ಷ ಹೆಚ್. ಜಯಚಂದ್ರ ಹತ್ವಾರ್ ಮಾತನಾಡಿ, ಗೋವಿಂದ ದಾಸ ಕಾಲೇಜು ಅತ್ಯುತ್ತಮ ಅಧ್ಯಾಪಕರನ್ನು ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳನ್ನು ಹೊಂದಿದ್ದು ಶೈಕ್ಷಣಿಕ, ಸಾಂಸ್ಕೃತಿಕ ಮತ್ತು ಕ್ರೀಡಾ ಚಟುವಟಿಕೆಗಳಲ್ಲಿ ಸದಾ ಮುಂಚೂಣಿಯಲ್ಲಿದೆ. ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ವಿದ್ಯಾರ್ಥಿಗಳು ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನಗಳನ್ನು ಪಡೆದಿದ್ದಾರೆ ಎಂದರು.


ಕಾಲೇಜಿನ ಪ್ರಾಚಾರ್ಯ ಪ್ರೊ. ಪಿ. ಕೃಷ್ಣಮೂರ್ತಿ ಕಾಲೇಜಿನ ವಾರ್ಷಿಕ ವರದಿಯನ್ನು ಮಂಡಿಸಿದರು. ನಿವೃತ್ತ ಪ್ರಾಧ್ಯಾಪಕ ಪ್ರೊ. ಮಾರ್ಸೆಲ್ ಲೂಯೀಸ್ ಮಸ್ಕರೇನ್ಹಸ್, ನಿವೃತ್ತ ಉಪ ಪ್ರಾಂಶುಪಾಲ ಮತ್ತು ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಪ್ರೊ. ರಮೇಶ್ ಭಟ್ ಎಸ್.ಜಿ., ಮತ್ತು ಪಿ.ಹೆಚ್.ಡಿ ಪದವಿ ಪಡೆದ ಉಪನ್ಯಾಸಕಿ ಕ್ಯಾ. ಡಾ. ಸುಧಾ ಯು. ಅವರನ್ನು ಅಭಿನಂದಿಸಲಾಯಿತು.


ಗಣರಾಜ್ಯೋತ್ಸವದ ಅಂಗವಾಗಿ ನವದೆಹಲಿಯಲ್ಲಿ ನಡೆದ ರಾಷ್ಟ್ರೀಯ ಪಥ ಸಂಚನಲದಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ ಹಿತಾ ಉಮೇಶ್ ಮತ್ತು ವಿವೇಕ್ ಎನ್. ಶೆಟ್ಟಿಯವರನ್ನು ಗೌರವಿಸಲಾಯಿತು. 


ಪಂಜಾಬ್‌ನ ಲೂಧಿಯಾನದ ಪಂಜಾಬ್ ಕೃಷಿ ವಿಶ್ವವಿದ್ಯಾನಿಲಯದಲ್ಲಿ ಭಾರತೀಯ ವಿ.ವಿಗಳ ಒಕ್ಕೂಟದ ಆಶ್ರಯದಲ್ಲಿ ನಡೆದ 37ನೇ ರಾಷ್ಟ್ರೀಯ ಅಂತರ್ ವಿ.ವಿ. ಯುವಜನೋತ್ಸವದಲ್ಲಿ ಮಂಗಳೂರು ವಿ.ವಿಯನ್ನು ಪ್ರತಿನಿಧಿಸಿ ಪ್ರಹಸನ (ಸ್ಕಿಟ್) ಸ್ಪರ್ಧೆಯಲ್ಲಿ ತೃತೀಯ ರಾಷ್ಟ್ರೀಯ ಪ್ರಶಸ್ತಿಯನ್ನು ಪಡೆದ ತಂಡದ ಸದಸ್ಯರನ್ನು ಮತ್ತು ರಾಷ್ಟ್ರಮಟ್ಟದ ಯೋಗ ಸ್ಪರ್ಧೆಯಲ್ಲಿ ಭಾಗವಹಿಸಿದ ಮೋಕ್ಷಾ ಎನ್. ಅಮೀನ್‌ರನ್ನು ಸನ್ಮಾನಿಸಲಾಯಿತು.


ಕಾಲೇಜಿನ ಆಡಳಿತಾತ್ಮಕ ನಿರ್ದೇಶಕ ಪ್ರೊ. ಗೋಪಾಲ ಎಂ. ಗೋಖಲೆ ಸ್ವಾಗತಿಸಿದರು

ಉಪಪ್ರಾಚಾರ್ಯ ಪ್ರೊ. ನೀಲಪ್ಪ ವಿ. ದಾನಿಗಳ ಪಟ್ಟಿಯನ್ನು ಓದಿದರು. ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಡಾ. ಸೌಮ್ಯ ಪ್ರವೀಣ್ ವಿಶೇಷ ಬಹುಮಾನಿತರ ಪಟ್ಟಿಯನ್ನು ವಾಚಿಸಿದರು. ಪ್ರಾಧ್ಯಾಪಕಿಯರಾದ ಡಾ. ವಿಜಯಲಕ್ಷ್ಮಿ ಮತ್ತು ಡಾ. ಆಶಾಲತಾ ಸನ್ಮಾನಿತರ ಪಟ್ಟಿಯನ್ನು ವಾಚಿಸಿದರು. 


ಗೀತಾ ಕೆ., ಶರ್ಮಿತಾ ಯು, ಶ್ರೀದೇವಿ, ಹರ್ಷಾರಾಣಿ, ಡಾ. ಪ್ರಶಾಂತ್ ಎಂ.ಡಿ., ಡಾ. ಗಣೇಶ ಆಚಾರ್ಯ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರ ಪಟ್ಟಿಯನ್ನು ವಾಚಿಸಿದರು.  ಶ್ರುತಿ ಶೆಟ್ಟಿ ವಂದಿಸಿದರು. ಪೂರ್ವಿ ಕಾರ್ಯಕ್ರಮ ನಿರೂಪಿಸಿದರು.


ವಿದ್ಯಾರ್ಥಿ ಸೆನೆಟ್‌ನ ಕಾರ್ಯದರ್ಶಿಗಳಾದ ಸೌಪರ್ಣಿಕಾ ನಾಯಕ್ ಎಸ್, ಪಲ್ಲವಿ, ಶ್ರದ್ಧಾ ಸುವರ್ಣ, ತುಷಾರ್ ಜಿ ಉಪ ಕಾರ್ಯದರ್ಶಿಗಳಾದ ಸ್ಮಿತಾ, ನೇಹಾ ಡಿ ಕೋಟ್ಯಾನ್,  ದಿಯಾ, ರವಿ ಹೊನ್ನಿ, ಸ್ವಾತಿ ಬಿ. ಶೆಟ್ಟಿ, ಮನಿಶಾ, ಪ್ರಕಾಶ್ ನಾಯಕ್ ಸೆನೆಟ್ ಮತ್ತು ವಿವಿಧ ಸಂಘಗಳ ವಿದ್ಯಾರ್ಥಿ ಪದಾಧಿಕಾರಿಗಳು ಉಪಸ್ಥಿತರಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
To Top