ನನ್ನ ಬಾಳೊಂದು ವಿಚಿತ್ರ ಕನಸೇನೋ ಎಂಬಂತೆ ಇತ್ತು ಅವರ ಪ್ರಸ್ತಾಪ.
ಅದೇನೆಂದರೆ ನಾನು ಪ್ಯಾರಿಸಿಗೆ ಹೋಗಿ ಕೆಲಸ ಹುಡುಕುವ ಬದಲು ಅವರ ಮಕ್ಕಳಿಗೆ ಇಂಗ್ಲಿಷ್ ಪಾಠ ಹೇಳಿ ಕೊಟ್ಟುಕೊಂಡು ಅವರ ಹೆಂಡತಿಗೆ ಒಂಟಿತನ ಕಾಡದಂತೆ ಅವಳ ಜೊತೆ ಇದ್ದುಕೊಂಡು ಅವಳಿಗೆ ಮನೆ ಕೆಲಸದಲ್ಲಿ ಸಹಾಯ ಮಾಡುವುದು.
ನಾನು ಒಪ್ಪಿದರೆ ರೋಮ್ ನಗರದಲ್ಲಿ ನನ್ನ ಫ್ಲೈಟ್ ಒಂದು ದಿನದ ಮಟ್ಟಿಗೆ ಸ್ಟಾಪ್ ಓವರ್ ತೆಗೆದುಕೊಂಡು ಅವರ ಮನೆಗೆ ಕರೆದುಕೊಂಡು ಹೋಗಲು ಅವರ ಹೆಂಡತಿ ಕಾರು ತರುತ್ತಾಳೆ.
ಅವರ ಮನೆಯಲ್ಲಿ ಬಟ್ಟೆ ಒಗೆಯಲು ಪಾತ್ರೆ ತೊಳೆಯಲು ಮಶೀನ್‌ಗಳು.ಕಸ ಗುಡಿಸಲು ವ್ಯಾಕ್ಯೂಮ್ ಕ್ಲೀನರ್ ಎಂದು ಹೇಳಿದರು. ಹೀಗೆ ನನ್ನನ್ನು ಒಪ್ಪಿಸಿ ಅಷ್ಟರಲ್ಲಿ ಅವರು ಎಲ್ಲರಿಗೂ ಊಟ ಬಿಸಿ ಮಾಡಲು ಸಮಯ ಬಂದು ಎದ್ದು ಹೋದರು.
ಅವರು ಹೋದ ಕೂಡಲೇ ಮತ್ತೊಬ್ಬ ಸ್ಟೀವರ್ದೆಸ್ ಮಹಿಳೆ ಬಂದು ಪಕ್ಕದಲ್ಲಿ ಕುಳಿತು ಮಾತನಾಡಿಸಿದಳು. ನೀವು ಅವರ ಮನೆಗೆ ಹೋಗದಿದ್ದರೆ ನನ್ನ ಅತ್ತೆಯ ಜೊತೆ ಇದ್ದುಕೊಂಡು ಅವರಿಗೆ ಸಂಗಾತಿಯಾಗಿರಿ ಎಂದು ಕೇಳಿದರು.
ಇಷ್ಟರಲ್ಲೇ ನನ್ನ ಅತ್ತೆ ಮದುವೆ ಮಾಡಿಕೊಳ್ಳುತ್ತಾರೆ ಎಂದೂ ಹೇಳಿದರು. ನಾನು ಒಪ್ಪಿಕೊಂಡೆ. ಮುಂದಿನದು ಯಾರಿಗೆ ಗೊತ್ತು?
ರೋಮ್ ಬಂದಾಗ ನನ್ನನ್ನು ನನ್ನ ಸಾಮಾನು ಸಮೇತ ಇಳಿಸಿ ತಮ್ಮ ಕಾರಿನಲ್ಲಿ ಕರೆದುಕೊಂಡು ಹೋದರು. ದಾರಿ ಉದ್ದಕ್ಕೂ ಅವರ ಹೆಂಡತಿ ಮಾತನಾಡುತ್ತಾ ಸ್ನೇಹ ಬೆಳೆಸಿದಳು. ತನ್ನ ಬಂಗಾರದ ಕೂದಲು ನಿಜವಾದ್ದಲ್ಲ, ಬಣ್ಣ ಹಾಕಿರುವುದು ಎಂದು ಹೇಳಿಕೊಂಡಳು.
ಗಂಡನಿಗೆ ಕಾರು ನಡೆಸಲು ಬಿಡದೆ ತಾನೆ ವೇಗವಾಗಿ ಓಡಿಸುತ್ತಾ ಮನೆ ಸೇರಿದಳು. ನನ್ನನ್ನು ಕಂಡ ಅಕ್ಕಪಕ್ಕದವರ ಕುತೂಹಲ. ಎಲ್ಲ ಸುತ್ತಿಕೊಂಡು ವಿಚಾರಿಸಿ ಕೊಂಡರು.
ಮನೆಗೆ ಹೋದ ಕೂಡಲೇ ಟೆನ್ನಿಸ್ ಆಡಲು ಹೋದ ಆಂಟೋನಿಯೊ ಸ್ಪಾಗೆಟ್ಟಿ ಸಿದ್ಧವಾದಾಗ ಊಟಕ್ಕೆ ಹಾಜರಾದ. ನನಗೆಂದು ಸಸ್ಯಾಹಾರಿ ಅಡುಗೆ ಮಾಡಿದ್ದರು. ಸ್ಪಾಗೆಟ್ಟಿ ಮೇಲೆ ಟೊಮೆಟೊ ಸಾಸ್ ಹಾಕಿದ್ದರು. ನಾನು ಅದನ್ನು ಕಲೆಸಿ ತಿನ್ನಲು ಹೋದರೆ ಹಾಗೆ ಕಲೆಸಬಾರದು ಎಂದು ಹೇಳಿಕೊಟ್ಟರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ