ಶ್ರೀ ವಿಜಯ ದಾಸರ ಜೀವನ ಮತ್ತು ಸಾಹಿತ್ಯ: ಮೇ 26ರಂದು ವಿಚಾರ ಸಂಕಿರಣ

Chandrashekhara Kulamarva
0

ಬೆಂಗಳೂರು: ಚಾಮರಾಜಪೇಟೆಯ ರಾಷ್ಟ್ರೀಯ ವೇದ ವಿಜ್ಞಾನ ಸಂಸ್ಥೆ ಟ್ರಸ್ಟ್‌ ವತಿಯಿಂದ ಶ್ರೀ ವಿಜಯದಾಸರ ಜೀವನ ಮತ್ತು ಸಾಹಿತ್ಯ ಕುರಿತ ವಿಚಾರ ಸಂಕಿರಣ ಮೇ 26ರಂದು ಭಾನುವಾರ ಸಂಜೆ 4 ಗಂಟೆಗೆ ಚಾಮರಾಜಪೇಟೆ ರಾಘವೇಂದ್ರ ಕಾಲೋನಿಯ ಶ್ರೀ ಶ್ರೀಪಾದರಾಜ ಸಭಾ ಭವನದಲ್ಲಿ ನಡೆಯಲಿದೆ.


ಈ ಕಾರ್ಯಕ್ರಮಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗವಿದೆ. ಕಾರ್ಯಕ್ರಮವು ಖ್ಯಾತ ಹರಿದಾಸ ವಿದ್ವಾಂಸ ಡಾ. ಅರಳುಮಲ್ಲಿಗೆ ಪಾರ್ಥಸಾರಥಿ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆ. ರಾಷ್ಟ್ರೀಯ ವೇದ ವಿಜ್ಞಾನ ಸಂಸ್ಥೆ ಟ್ರಸ್ಟ್‌ನ ಕಾರ್ಯದರ್ಶಿ ವಿದ್ವಾನ್ ಹೆಚ್. ಜಿ. ಲಕ್ಷ್ಮೀನಾರಾಯಣ, ಹರಿದಾಸ ಚಿಂತಕರಾದ ಡಾ. ಎಸ್‌.ಎಲ್‌ ಮಂಜುನಾಥ್, ಡಾ. ವಾದಿರಾಜು ಆರ್., ಹಾಗೂ ಡಾ. ವಾಸುದೇವ ಅಗ್ನಿಹೋತ್ರಿ ಸೇಡಂ ಅವರು ಉಪಸ್ಥಿತರಿರುತ್ತಾರೆ.


ಶ್ರೀ ವಿಜಯರಾಯರು ವರ್ಣಿಸಿರುವ ತೀರ್ಥಕ್ಷೇತ್ರಗಳು ಎಂಬ ವಿಷಯದ ಕುರಿತು ಡಾ. ಎಸ್. ಆರ್ ರಾಘವೇಂದ್ರಾಚಾರ್ ಪ್ರಬಂಧ ಮಂಡಿಸಲಿದ್ದಾರೆ. ಶ್ರೀಕೃಷ್ಣ ತುಳಸಿ ಭಜನಾ ಮಂಡಳಿಯಿಂದ ದಾಸವಾಣಿ ಕಾರ್ಯಕ್ರಮವೂ ನಡೆಯಲಿದೆ.


ಶ್ರೀ ವಿಜಯದಾಸರ ಕೃತಿಗಳಲ್ಲಿ ನಿಂದಾಸ್ತುತಿಗಳು ವಿಷಯದಲ್ಲಿ ಡಾ. ಬಿ.ಎಂ ವಾಣಿಶ್ರೀ ಪ್ರಬಂಧ ಮಂಡಿಸಲಿದ್ದಾರೆ. ಡಾ. ಆನಂದಾಚಾರಿ, ಡಾ. ಸುಧಾ ಎಲ್, ಡಾ. ವಿದ್ಯಾರಾವ್ ಸಮಗ್ರ ಕಾರ್ಯಕ್ರಮದ ನಿರ್ವಹಣೆ ಮಾಡಲಿದ್ದಾರೆ.


Post a Comment

0 Comments
Post a Comment (0)
To Top