ಶ್ರೀ ಶಾಂಕರ ತತ್ವಪ್ರಸಾರ ಅಭಿಯಾನ, ಸಾಮರಸ್ಯ ಸಮಾಜ ಜಾಗೃತಿ ಕಾರ್ಯಕ್ರಮ

Upayuktha
0

ಬಂಟ್ವಾಳ: ಶಂಕರಾಚಾರ್ಯರ ಅದ್ವೈತ ಸಿದ್ಧಾಂತದಂತೆ ಎಲ್ಲರಲ್ಲೂ ಪರಮಾತ್ಮನನ್ನು ಕಾಣಬೇಕು. ಎಲ್ಲರೂ ದೇವರ ಅಂಶಗಳೇ ಆಗಿದ್ದಾರೆ ಎಂದು ಸಾರಿದ ಶಂಕರಾಚಾರ್ಯರು ಧರ್ಮ ರಕ್ಷಣೆಗೆ ಹೊಸ ಮಾರ್ಗವನ್ನು ಹಾಕಿಕೊಟ್ಟು ಎಲ್ಲಾ ರೀತಿಯ ಭೇದಭಾವ ಅಳಿಸಿ ಸಾಮರಸ್ಯದ ಸಮಾಜ ನಿರ್ಮಾಣಕ್ಕೆ ಹರಿಕಾರರಾಗಿದ್ದಾರೆ‌ ಎಂದು ಧಾರ್ಮಿಕ ಪರಿಷತ್ತು ಜಿಲ್ಲಾ ಸದಸ್ಯ ಜಗನ್ನಾಥ ಚೌಟ ಬದಿಗುಡ್ಡೆ ಅಭಿಪ್ರಾಯ ಪಟ್ಟರು.


ಅವರು ಬಿ.ಸಿ.ರೋಡಿನ ಅನ್ನಪೂರ್ಣೇಶ್ವರೀ ದೇವಸ್ಥಾನದ ವಠಾರದಲ್ಲಿ ಸನಾತನ ಹಿಂದೂ ಧರ್ಮದ ಪುನರುತ್ಥಾನದ ಮಹಾಶಕ್ತಿಯಾಗಿ ಅವತರಿಸಿದ ಆಚಾರ್ಯ ಶಂಕರ ಭಗವತ್ಪಾದರ ಜಯಂತ್ಯುತ್ಸವದ ಅಂಗವಾಗಿ  ಬಂಟ್ವಾಳ ತಾಲೂಕಿನ ಹಲವೆಡೆಗಳಲ್ಲಿ ಶ್ರೀ ಶಂಕರ ತತ್ವಪ್ರಸಾರ ಅಭಿಯಾನ ಶೃಂಗೇರಿ ಮಠ, ಅಖಿಲ ಕರ್ನಾಟಕ ಹಿರಿಯರ ಸೇವಾ ಪ್ರತಿಷ್ಠಾನ, ಶ್ರೀ ಶಂಕರ ಸೇವಾ ಪ್ರತಿಷ್ಠಾನ ಕೋಟೆಕಾರು ಇವರ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಲಾದ ಶ್ರೀ ಶಾಂಕರ ತತ್ವಪ್ರಸಾರ ಅಭಿಯಾನದ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆ ಮಾಡಿ ಮಾತನಾಡಿದರು.


ಅನ್ನಪೂರ್ಣೇಶ್ವರಿ ದೇವಸ್ಥಾನದ ಆಡಳಿತ ಮಂಡಳಿ‌ ಅಧ್ಯಕ್ಷ ಭುವನೇಶ್ ಪಚ್ಚಿನಡ್ಕ, ರೊಟೇರಿಯನ್ ಪ್ರಕಾಶ ಕಾರಂತ, ಶ್ರೀಶಂಕರ ಸೇವಾ ಪ್ರತಿಷ್ಠಾನ ಬಂಟ್ವಾಳ ತಾಲೂಕು ಸಂಚಾಲಕ ಎ.ಕೃಷ್ಣ ಶರ್ಮ,  ಪದಾಧಿಕಾರಿಗಳಾದ ಶಿವರಾಮ ರಾವ್ ಬೈರಿಕಟ್ಟೆ, ಜಗದೀಶ ಹೊಳ್ಳ ಬಿ.ಸಿ.ರೋಡು ಉಪಸ್ಥಿತರಿದ್ದರು. ಉಪಾಧ್ಯಕ್ಷ ಜಯಾನಂದ ಪೆರಾಜೆ ಸ್ವಾಗತಿಸಿ, ಪ್ರಸ್ತಾವನೆಗೈದರು. ಪ್ರಧಾನ ಕಾರ್ಯದರ್ಶಿ ರಾಜಾರಾಮ ಐತಾಳ್ ಕಂದೂರು ವಂದಿಸಿದರು.


ಮೇ 23ರಿಂದ ಜೂನ್ 2ರವರೆಗೆ ಸಮಾಜ ಜಾಗೃತಿ ಕಾರ್ಯಕ್ರಮ, ಧಾರ್ಮಿಕ ಸಭೆ, ಉಪನ್ಯಾಸ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಮೇ 23ಕ್ಕೆ ಮಂಗಳಪದವು ಅಯ್ಯಪ್ಪ ಭಜನಾ ಮಂದಿರ, ಮೇ24 ಸೇವಾಂಜಲಿ ಪ್ರತಿಷ್ಠಾನ ಪರಂಗಿಪೇಟೆ, ಮೇ25 ವೆಂಕಟರಮಣ ಭಜನಾ ಮಂದಿರ ಕಡಂಬು ವಿಟ್ಲ, ಮೇ26 ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಕಣಿಯೂರು ಕನ್ಯಾನ, ಜೂನ್ 1ರಂದು ಅಶ್ವತ್ಥನಾರಾಯಣ ಭಜನಾ ಮಂದಿರ ಬೈರಿಕಟ್ಟೆ ಅಳಿಕೆ, ಜೂನ್ 2 ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಬಂಟ್ವಾಳದಲ್ಲಿ ಸಂಪನ್ನಗೊಳ್ಳಲಿದೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top