ಉಪಯುಕ್ತ ನ್ಯೂಸ್‌ನಲ್ಲಿ ಕನ್ನಡ ಸಾಹಿತ್ಯ ಲೋಕದ ಧ್ರುವತಾರೆಗಳ ಕಿರು ಪರಿಚಯದ ಅಂಕಣ ಪ್ರತಿ ಗುರುವಾರ

Upayuktha
0



ವಿಜಯನಗರ ಜಿಲ್ಲೆಯ ಹರಪನಹಳ್ಳಿಯ ನಿವೃತ್ತ ಮ್ಯಾಜಿಸ್ಟ್ರೇಟ್ ರಾಯಸಂ ತಿರುಮಲ ರಾವ್ ಅವರ ಮಗನಾಗಿರುವ ಶ್ರೀಧರ್ ರಾಯಸಂ 25- 8- 1947ರಂದು ಜನಿಸಿದರು. ಕನ್ನಡದ ಖ್ಯಾತ ಹಾಸ್ಯ ಸಸಾಹಿತಿ ಬೀchi ಅವರ ವಂಶಸ್ಥರು. ಬಿಎಸ್ಸಿ, ಹಿಂದಿ ವಿಶಾರದ, ಜೊತೆಗೆ ಬ್ಯಾಂಕ್ ಪರೀಕ್ಷೆ (CAIIB)ಬರೆದು ಬ್ಯಾಂಕ್ ಉದ್ಯೋಗಿಯಾಗಿ ನಿವೃತ್ತರಾಗಿದ್ದಾರೆ. ದಾಸ ಸಾಹಿತ್ಯ ಪುಸ್ತಕಗಳನ್ನು ಕನ್ನಡ ಭಾಷೆಯಲ್ಲಿ ಬರೆದು ಪ್ರಕಟಿಸಿದ್ದಾರೆ.


ಸೋದೆ ವಾದಿರಾಜ ಮಠದಲ್ಲಿ 18 ವರ್ಷಗಳಿಂದ ಹರಿಕಥಾಮೃತಸಾರ, ರಾಮಾಯಣ ಮಧ್ವಾಚಾರ್ಯರು, ವಾದಿರಾಜರು, ರುಕ್ಮಿಣೀಶವಿಜಯ, ತೀರ್ಥಪ್ರಬಂಧ, ವೈಕುಂಠವರ್ಣನೆ, ಸಾರಸಭಾರತಿವಿಲಾಸ, ದಾಸ ಸಾಹಿತ್ಯ ಸಂಬಂಧಿತ ಪ್ರಶ್ನೆಗಳನ್ನು  ಒಳಗೊಂಡ ರಸಪ್ರಶ್ನೆಗಳನ್ನು ನಡೆಸಿಕೊಟ್ಟಿದ್ದಾರೆ. ಇತ್ತೀಚೆಗೆ ಬಳ್ಳಾರಿಯಲ್ಲಿ ದಾಸ ಸಾಹಿತ್ಯದ ಕುರಿತು ರಸಪ್ರಶ್ನೆ ಕಾರ್ಯಕ್ರಮ ನಡೆಸಿಕೊಟ್ಟರು. ಬೆಂಗಳೂರಿನ ಭಂಡಾರಕೇರಿಮಠದಲ್ಲಿ ಶ್ರೀ ಗುರು ವಿಜಯಗೀತೆ ಕುರಿತು ರಸಪ್ರಶ್ನೆ ಕಾರ್ಯಕ್ರಮ ನಡೆಸಿಕೊಟ್ಟರು.


ಅವರು ಕರ್ಮವೀರ ಪತ್ರಿಕೆಯಲ್ಲಿ ದಾಸ ಸಾಹಿತ್ಯ ಸಂಬಂಧಿತ ಲೇಖನಗಳನ್ನು ಬರೆಯುತ್ತಿದ್ದಾರೆ. ಸಪ್ತಗಿರಿ, ಪರಿಮಳಾ, ಅನಂತಪ್ರಕಾಶ, ಬೋಧಿವೃಕ್ಷ ಪತ್ರಿಕೆ, ತತ್ವಮಲ್ಲಿಕಾ, ಸಂಯುಕ್ತ ಕರ್ನಾಟಕ,  ದ್ವೈತ ದುಂಧುಭಿ ಮುಂತಾದ ಪತ್ರಿಕೆಗಳಲ್ಲಿ ಲೇಖನಗಳನ್ನು ಪ್ರಕಟಿಸಿದ್ದಾರೆ. ಬೆಂಗಳೂರಿನಲ್ಲಿ ನಡೆದ ದಾಸ ಸಾಹಿತ್ಯ ಸಮಾರಂಭದಲ್ಲಿ ಕಲ್ಯಾಣ ಕರ್ನಾಟಕ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ. ಇತ್ತೀಚೆಗೆ ಅವರು ಅಕ್ಷರ ಐಸಿರಿ ಮ್ಯಾಗ್‌ಝೀನ್ ಮೂಲಕ 2023 ರ ವರ್ಷದ ವ್ಯಕ್ತಿ ಪ್ರಶಸ್ತಿಯನ್ನು ಪಡೆದರು. ಹೊಸಪೇಟೆಯಲ್ಲಿ ಇವರಿಗೆ ಭಾರ್ಗವ ಪ್ರಶಸ್ತಿ ಲಭಿಸಿದೆ. ತಿರುವನಂತಪುರದ ಮಲಯಾಳಂ ಸಂಘದಿಂದ ಕಥಾರಂಗಂ ಪ್ರಶಸ್ತಿ, ಬೆಂಗಳೂರು ಬಿಬಿಎಂಪಿಯಿಂದ ಕೆಂಪೇಗೌಡ ಪ್ರಶಸ್ತಿ (ವಾರ್ಡ್ ಮಟ್ಟ) ಲಭಿಸಿದೆ. ಶ್ರೀಧರ್ ರಾಯಸಂ ಅವರು ಆಧ್ಯಾತ್ಮಿಕ ಮತ್ತು ಧಾರ್ಮಿಕ ವಿಷಯಗಳಲ್ಲಿ ಆಸಕ್ತಿ ಹೊಂದಿದ್ದು, ಕಾರ್ಯಕ್ರಮ, ಚರ್ಚೆ ಇತ್ಯಾದಿ ನಡೆಸಿಕೊಡುತ್ತಿದ್ದಾರೆ. ವಿವಿಧ ನಿಯತಕಾಲಿಕೆಗಳಿಗೆ ಎಲ್ಲಾ ರೀತಿಯ ಲೇಖನಗಳನ್ನು ಬರೆಯುತ್ತಿದ್ದಾರೆ.


ಉಪಯುಕ್ತ ನ್ಯೂಸ್‌ ಬಳಗದಲ್ಲಿ ಇತ್ತೀಚೆಗೆ 150 ಸರಣಿಗಳಲ್ಲಿ ಪ್ರಕಟವಾದ ಶ್ರೀರಾಮ ಕಥಾ ಲೇಖನ ಅಭಿಯಾನದಲ್ಲಿ ಶ್ರೀಧರ ರಾಯಸಂ ಅವರು ಬರೆದ ಲೇಖನವೂ ಪ್ರಕಟವಾಗಿತ್ತು.


ಇದೀಗ ಪ್ರತಿ ಗುರುವಾರದಂದು ಉಪಯುಕ್ತ ನ್ಯೂಸ್‌ ಡಿಜಿಟಲ್ ಮಾಧ್ಯಮದಲ್ಲಿ (ಉಪಯುಕ್ತ.ಕಾಂ ಮತ್ತು ಉಪಯುಕ್ತ ಇ-ಪೇಪರ್) ಶ್ರೀಧರ ರಾಯಸಂ ಅವರ 'ಲೇಖಾ ಲೋಕ' ಅಂಕಣ ಬರಹಗಳು ಪ್ರಕಟವಾಗಲಿವೆ. ಈ ಅಂಕಣದಲ್ಲಿ ಅವರು ಕನ್ನಡ ಸಾಹಿತ್ಯ ಲೋಕದ ಧ್ರುವತಾರೆಗಳ ಕಿರು ಪರಿಚಯ ಮಾಡಿಕೊಡಲಿದ್ದಾರೆ.


 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top