ಮಂಗಳೂರು: ಯಕ್ಷಗಾನದಿಂದಾಗಿ ಕಲೆ, ಸಾಹಿತ್ಯಗಳನ್ನು ಓದಿ ಮನನ ಮಾಡಿಕೊಳ್ಳುವುದರಿಂದ ಆತ್ಮಸ್ಥೈರ್ಯ ವೃದ್ಧಿಸುತ್ತದೆ. ಓದುವ, ಲೋಕದ ವಿಚಾರಗಳನ್ನು ಮನನ ಮಾಡಿಕೊಳ್ಳುವ ವೈಚಾರಿಕ ಶಕ್ತಿ ಉದ್ದೀಪನಗೊಳ್ಳುತ್ತದೆ. ರಾಷ್ಟ್ರಹಿತಕ್ಕಾಗಿ ಚಿಂತಿಸುವ ಶಕ್ತಿ ಜಾಗ್ರತವಾಗುತ್ತದೆ. ನಾನು ಕಸಾಪದ ಅಧ್ಯಕ್ಷನಾಗಿದ್ದಾಗಲೂ ಈ ವಿಚಾರಗಳ ಬಗ್ಗೆ ಸಾಕಷ್ಟು ಅವಕಾಶಗಳನ್ನು ನೀಡುತ್ತಿದ್ದೆ. ಯಕ್ಷಗಾನದಂತಹ ಸಾಗರೋಲ್ಲಂಘನ ಕಲೆಯನ್ನು ನಂಬಿ ಎಷ್ಟೋ ಕಲಾವಿದರು ಬದುಕು ಕಟ್ಟಿಕೊಂಡಿದ್ದಾರೆ" ಎಂದು ಎಸ್.ಪ್ರದೀಪ ಕುಮಾರ್ ಕಲ್ಕೂರ ಹೇಳಿದರು.
ಅವರು ಕದ್ರಿಯಲ್ಲಿ ನಡೆಯುತ್ತಿರುವ ಸರಯೂ ಸಪ್ತಾಹದ ದ್ವಿತೀಯ ದಿನದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಝೀ-ಕನ್ನಡ ಸರಿಗಮಪ ಸೀಸನ್-19ರ ಸಂಗೀತ ಕಾರ್ಯಕ್ರಮದಲ್ಲಿ ದ್ವಿತೀಯ ರನ್ನರ್ಸ್ ಅಪ್ ಆಗಿ ಮೂಡಿ ಬಂದ ಶಾರದಾ ವಿದ್ಯಾಲಯದ ವಿದ್ಯಾರ್ಥಿನಿ ಕು|| ತನುಶ್ರೀಯವರನ್ನು ನ್ಯಾಯವಾದಿಗಳೂ, ಧಾರ್ಮಿಕ ಮುಂದಾಳೂ ಆಗಿರುವ ಜಗದೀಶ ಶೇಣವ ಗೌರವಿಸಿದರು.
ಕಾರ್ಯಕ್ರಮ ನಿರೂಪಕ ಸುಧಾಕರ ರಾವ್ ಪೇಜಾವರ್, ಭಾರತೀ ಪ್ರಮೋದ್, ಪ. ರಾಮಕೃಷ್ಣರಾವ್, ಬಾಲಕೃಷ್ಣ ಶೆಟ್ಟಿ, ನಾಗರಾಜ ಖಾರ್ವಿ ಉಪಸ್ಥಿತರಿದ್ದರು.
ಬೆಳಿಗ್ಗೆಯಿಂದ ಸಾಯಂಕಾಲದವರೆಗೆ ಆಹ್ವಾನಿತ ಮಹಿಳಾ ತಂಡಗಳಿಂದ" ಮಹಿಳಾ ಯಕ್ಷಗಾನ ತಾಳಮದ್ದಳೆ ಸಂಭ್ರಮ ನಡೆಯಿತು. ಸಭಾ ಕಾರ್ಯಕ್ರಮದ ಬಳಿಕ ಗುರುದಕ್ಷಿಣಿ ಎಂಬ ಯಕ್ಷಗಾನ ಪ್ರದರ್ಶನಗೊಂಡಿತು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ