ವಿಶ್ವವಿದ್ಯಾನಿಲಯ ಪರೀಕ್ಷೆಯಲ್ಲಿ ವಿವೇಕಾನಂದ ಕಾಲೇಜಿಗೆ ರ‍್ಯಾಂಕ್

Upayuktha
0


ಪುತ್ತೂರು: ಮಂಗಳೂರು ವಿಶ್ವವಿದ್ಯಾನಿಲಯ ನಡೆಸಿದ 2022-2023 ರ ಸಾಲಿನ ಪದವಿ ಪರೀಕ್ಷೆಗಳಲ್ಲಿ ಇಲ್ಲಿನ ವಿವೇಕಾನಂದ ಪದವಿ ಕಾಲೇಜಿಗೆ ಮೂರು ರ‍್ಯಾಂಕ್‌ಗಳು ಲಭ್ಯವಾಗಿವೆ. ಬಿಎಸ್ಸಿ ಪರೀಕ್ಷೆಯಲ್ಲಿ ಪಿಎಂಸಿ ವಿಭಾಗದಲ್ಲಿ ಶರಧಿ ಎಸ್.ಕೆ 4200 ರಲ್ಲಿ 4087 ಅಂಕಗಳನ್ನು ಪಡೆದುಕೊಂಡು ಐದನೇಯ ರ‍್ಯಾಂಕನ್ನು ಪಡೆದುಕೊಂಡಿದ್ದಾರೆ.ಇವರು ವಿಟ್ಲದ ಕೇಶವಯ್ಯ ಎಸ್ ಹಾಗೂ ಶಶಿಕಲಾ ದಂಪತಿಗಳ ಪುತ್ರಿ. ಕಲಾ ವಿಭಾಗದ ಪರೀಕ್ಷೆಯಲ್ಲಿ ಎಚ್‌ಇಪಿ ವಿಭಾಗದಲ್ಲಿ  ಸೃಜನಿ ಎಸ್.ಆರ್  4200 ರಲ್ಲಿ 3748 ಅಂಕ ಪಡೆದುಕೊಂಡು ಐದನೇಯ ರ‍್ಯಾಂಕನ್ನು ಗಳಿಸಿಕೊಂಡಿದ್ದಾರೆ. ಇವರು ಕಡಬದ ರಾಮಚಂದ್ರ ಹಾಗೂ ಭವಾನಿ ದಂಪತಿ ಪುತ್ರಿ. ಕಲಾ ವಿಭಾಗದ ಪರೀಕ್ಷೆಯಲ್ಲಿ  ಎಚ್‌ಇಪಿ ಯ ಇನ್ನೋರ್ವ ವಿದ್ಯಾರ್ಥಿ  ವೀರೇಶ 4200 ರಲ್ಲಿ 3726 ಅಂಕ ಪಡೆದು ಒಂಭತ್ತನೇಯ ರ‍್ಯಾಂಕನ್ನು ಗಳಿಸಿದ್ದಾರೆ. ಇವರು ರಾಯಚೂರಿನ ಮಾನ್ವಿ ತಾಲೂಕಿನ ನಾರಾಯಣಪ್ಪ ಹಾಗೂ ಹನುಮಂತಿ ದಂಪತಿಗಳ ಪುತ್ರ.


ವಿದ್ಯಾರ್ಥಿಗಳ ಈ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ ಹಾಗೂ ಪ್ರಾಂಶುಪಾಲರು, ಉಪನ್ಯಾಸಕ ಹಾಗೂ ಉಪನ್ಯಾಸಕೇತರ ವೃಂದ ಹಾಗೂ ವಿದ್ಯಾರ್ಥಿಗಳು ಶುಭ ಹಾರೈಸಿದ್ದಾರೆ. 



 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top