ಗಮನ ಸೆಳೆಯುತ್ತಿರುವ ಗುಲಾಬಿ ಮತಗಟ್ಟೆ

Upayuktha
0


ಭಾರತದಲ್ಲಿ ಚುನಾವಣೆ ಅಂದ್ರೆ ದೊಡ್ಡ ಹಬ್ಬದಂತೆ. ಅದರಲ್ಲೂ ಲೋಕಸಭೆ ಚುನಾವಣೆಗೆ ಇಡೀ ದೇಶವೇ ಸಿದ್ದವಾಗಿರುತ್ತದೆ. ದೇಶವು ಇದೀಗ ಮತ್ತೆ ಚುನಾವಣೆಯೊಳಗೆ ಮುಳುಗಿದೆ. ಈ ಬಾರಿಯ ಚುನಾವಣೆಯಲ್ಲಿ ಸದ್ದು ಮಾಡುತ್ತಿರುವ ವಿಷಯಗಳಲ್ಲಿ ' ಗುಲಾಬಿ ಮತಗಟ್ಟೆ' ಗಳು ಕೂಡ ಸೇರಿದೆ.



ಏನಿದು ಗುಲಾಬಿ ಮತಗಟ್ಟೆ ? 

ಚುನಾವಣೆಯ ಸಂದರ್ಭದಲ್ಲಿ ಮತ ಪ್ರಮಾಣ ಹೆಚ್ಚು ಮಾಡಲು ಚುನಾವಣಾ ಆಯೋಗ ಹಲವಾರು ಕಾರ್ಯಕ್ರಮಗಳನ್ನು ಆಯೋಜನೆ ಮಾಡುತ್ತದೆ. ಅದರ ಜೊತೆಯಲ್ಲಿ ಚುನಾವಣೆಯ ದಿನವೂ ಮತದಾನವಾಗುವ ಸ್ಥಳವನ್ನು ವಿಶೇಷವಾಗಿ ಅಲಂಕಾರ ಮಾಡಿ, ಮತದಾರರನ್ನು ಸೆಳೆಯುವ ಪ್ರಯತ್ನ ಮಾಡಲಾಗುತ್ತದೆ. 


ಹೀಗೆ ಮತದಾರರನ್ನು ಸೆಳೆಯುವ ಒಂದು ಪ್ರಯತ್ನ ' ಗುಲಾಬಿ ಮತಗಟ್ಟೆ '. ಇದನ್ನು ' ಸಖಿ ಮತಗಟ್ಟೆ ' ಎಂದೂ ಕರೆಯುತ್ತಾರೆ. 


ಹೌದು, ಪುರುಷ ಮತದಾರರಿಗಿಂತ ಮಹಿಳಾ ಮತದಾರರ ಸಂಖ್ಯೆ ಹೆಚ್ಚಿರುವ ಮತಗಟ್ಟೆಗಳನ್ನು ' ಗುಲಾಬಿ ಮತಗಟ್ಟೆ ' ಎಂದು ಗುರುತಿಸಲಾಗುತ್ತದೆ. ಆ ಮತಗಟ್ಟೆಯನ್ನು ಗುಲಾಬಿ ಬಣ್ಣದ ಶಾಮಿಯಾನ, ಗುಲಾಬಿ ಬಣ್ಣದ ಹೂಗಳು, ಗುಲಾಬಿ ಬಣ್ಣದ ಕರ್ಟನ್, ಗುಲಾಬಿ ನೆಲಹಾಸು, ಗುಲಾಬಿ ಬಣ್ಣದ ಪರದೆ , ಗುಲಾಬಿ ಬಣ್ಣದ ಬಲೂನು ಸೇರಿದಂತೆ ವಿಶೇಷವಾಗಿ ಅಲಂಕರಿಸಲಾಗುತ್ತದೆ.  ವೋಟಿಂಗ್ ಕಂಪಾರ್ಟ್ಮೆಂಟ್, ಗೋಡೆಯ ಬಣ್ಣ ಸೇರಿದಂತೆ ಸಂಪೂರ್ಣ ಮತಗಟ್ಟೆಗೆ ಗುಲಾಬಿ ಬಣ್ಣದ ಸ್ಪರ್ಶ ನೀಡುತ್ತಾರೆ. ಗುಲಾಬಿ ಮತಗಟ್ಟೆಯಲ್ಲಿ ಕಾರ್ಯನಿರ್ವಹಿಸುವ‌ ಎಲ್ಲಾ ಚುನಾವಣಾ ಅಧಿಕಾರಿಗಳು ಮಹಿಳೆಯರೇ ಆಗಿದ್ದು , ಅವರು ಕೂಡ ಗುಲಾಬಿ ಬಣ್ಣದ ಬಟ್ಟೆಯಲ್ಲಿ ಮತದಾರರನ್ನು ಸ್ವಾಗತಿಸುತ್ತಾರೆ. ರಾಜಕೀಯ ಪಕ್ಷಗಳ ಏಜೆಂಟರನ್ನಾಗಿ ಕೂಡ ಮಹಿಳೆಯರೇ ಇರುವಂತೆ ವಿನಂತಿಸಲಾಗಿದೆ. 


2014ರ ಲೋಕಸಭಾ ಚುನಾವಣೆಯ ವೇಳೆಯಲ್ಲಿ ಶೇ. 65.63 ಮಹಿಳೆಯರು ಮತದಾನ ಮಾಡಿದ್ದು, ಶೇ. 67.09 ಪುರುಷರು ಮತ ಚಲಾಯಿಸಿದ್ದಾರೆ. ಭಾರತದ 29 ರಾಜ್ಯಗಳಲ್ಲಿ 16 ರಾಜ್ಯಗಳಲ್ಲಿ ಪುರುಷ ಮತದಾರರಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಮಹಿಳೆಯರು ಮತದಾನ ಮಾಡಿದ್ದರು. ಒಟ್ಟು 260 ಮಿಲಿಯನ್ ಮಹಿಳಾ ಮತದಾರರು ಮತ ಚಲಾಯಿಸಿದ್ದರು.  ಆ ಸಂಖ್ಯೆಯನ್ನು ಇನ್ನಷ್ಟು ಜಾಸ್ತಿ ಮಾಡುವ ಮೂಲಕ ಮತದಾನ ಪ್ರಮಾಣ ಹೆಚ್ಚು ಮಾಡಲು ಚುನಾವಣಾ ಆಯೋಗ ' ಗುಲಾಬಿ ಮತಗಟ್ಟೆ'ಯ ಪ್ರಯತ್ನ ಮಾಡಿದೆ. 


ಲಿಂಗ ಸಮಾನತೆಯನ್ನು ಚುನಾವಣಾ ಪ್ರಕ್ರಿಯೆಯಲ್ಲೂ ಸಾಧಿಸಿ ತೋರಿಸುವ ಉದ್ದೇಶದಿಂದ ಚುನಾವಣಾ ಆಯೋಗ ಗುಲಾಬಿ ಮತಗಟ್ಟೆ ಸ್ಥಾಪಿಸಿದೆ. 


ಚುನಾವಣೆಯ ವೇಳೆ ಮಹಿಳಾ ಮತದಾರರು ಮತದಾನ ಮಾಡಲು ಪ್ರೋತ್ಸಾಹ ನೀಡಲು 'ಗುಲಾಬಿ ಮತಗಟ್ಟೆ'ಯ ಮೂಲಕ ಮಹಿಳಾ ಮತದಾರರನ್ನು ಆಕರ್ಷಿಸುವ  ಮೂಲಕ ಮಹಿಳಾ ಮತದಾನ ಹೆಚ್ಚು ಮಾಡುವ ಪ್ರಯತ್ನವನ್ನು ಚುನಾವಣಾ ಆಯೋಗ ಮಾಡುತ್ತಿದೆ. 

- ಸಂಜಯ್ ಚಿತ್ರದುರ್ಗ



 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  


إرسال تعليق

0 تعليقات
إرسال تعليق (0)
Maruti Suzuki Festival of Colours
Maruti Suzuki Festival of Colours
To Top