‘ಫಲಪ್ರದ’- ಹಲಸು ಸ್ನೇಹಿ ಕೂಟದ ಹಿನ್ನೋಟದ ಹೆಜ್ಜೆಗಳು

Upayuktha
0



ಬಂಟ್ವಾಳ: ಬಂಟ್ವಾಳ ತಾಲೂಕಿನ ಉಬರು-ಮುಳಿಯ ‘ಹಲಸು ಸ್ನೇಹಿ ಕೂಟ’ವು 2011ರಿಂದ ಸಕ್ರಿಯ. ಹಲಸು, ಗೆಡ್ಡೆ, ತರಕಾರಿ, ಮಾವು, ಕಾಡುಮಾವು, ಪುನರ್ಪುಳಿ, ಚಳಿಗಾಲದ ತರಕಾರಿ, ಸಿರಿಧಾನ್ಯ, ಸೊಪ್ಪು ತರಕಾರಿಗಳು, ಹಣ್ಣುಗಳ ಫಲಾಹಾರ.. ಹೀಗೆ ಅನ್ಯಾನ್ಯ ಕಾರ್ಯಕ್ರಮಗಳನ್ನು ಒಂದು ಗ್ರಾಮ ಮಟ್ಟದ ವ್ಯಾಪ್ತಿಯಲ್ಲಿ ನಡೆಸಿದೆ.


ಹಲಸು ಮತ್ತು ಮಾವಿನ ‘ರುಚಿ ನೋಡಿ ತಳಿ ಆಯ್ಕೆ’ ಮೂಲಕ ಸುಮಾರು ಐವತ್ತಕ್ಕೂ ಮಿಕ್ಕಿ ತಳಿಗಳು ಅಭಿವೃದ್ಧಿಗೊಂಡು ಕೃಷಿಕರ ತೋಟದಲ್ಲಿ ಬೆಳೆದಿವೆ. ಹಲಸಿನ ತೋಟಗಳು ಎದ್ದಿವೆ. ಮೌಲ್ಯವರ್ಧಿತ ಉತ್ಪನ್ನಗಳು ಸಿದ್ಧಗೊಂಡಿವೆ. ಸುಮಾರು ಇಪ್ಪತ್ತು ಕಿಲೋಮೀಟರ್ ವ್ಯಾಪ್ತಿಯಲ್ಲಿ ಬರುವ ಉತ್ತಮ ಹಲಸು-ಮಾವುಗಳನ್ನು ‘ಕೃಷಿಕರೇ’ ಆಯ್ಕೆ ಮಾಡಿರುವುದು ವಿಶೇಷ.


ಸಂಪರ್ಕಕ್ಕೆ ಬಂದ ಅನೇಕ ಮನೆಗಳಲ್ಲಿ ಹಲಸು, ಮಾವು, ಸಿರಿಧಾನ್ಯ.. ಹೀಗೆ ಖಾದ್ಯಗಳಿಗೆ ಮೊದಲ ಮಣೆ. ಸದ್ದಿಲ್ಲದೆ ದಶಕಕ್ಕೂ ಮಿಕ್ಕಿ ಕಲಾಪಗಳನ್ನು ನಡೆಸುವುದ ಮೂಲಕ ಕೃಷಿ, ಕೃಷಿಕರ ಆಸಕ್ತಿಗಳನ್ನು ಜೀವಂತವಿಟ್ಟಿದೆ.


ಹನ್ನೊಂದು ವರುಷದ ‘ಹಲಸು ಸ್ನೇಹಿ ಕೂಟ’ದ ಕಲಾಪಗಳ ವಿವರಗಳು, ಆಯ್ಕೆಯಾದ ತಳಿಗಳು, ವಿಷಯ ತಜ್ಞರ ಮಾತುಗಳು ‘ಫಲಪ್ರದ’ ಪುಸ್ತಕದ ಹೂರಣಗಳು. ಪುಸ್ತಕದ ಲೇಖಕ: ನಾ. ಕಾರಂತ ಪೆರಾಜೆ. ಹಲಸು ಸ್ನೇಹಿ ಕೂಟದ ಪ್ರಕಾಶನ.


ಪುತ್ತೂರಿನ ಜೈನ್ ಭವನದಲ್ಲಿ ಮೇ 24, ಶುಕ್ರವಾರ, ಅಪರಾಹ್ಣ ಗಂಟೆ 4ಕ್ಕೆ ನಡೆಯುವ ಹಲಸು ಹಬ್ಬದ ಉದ್ಘಾಟನಾ ಸಮಾರಂಭದಲ್ಲಿ ಅಡಿಕೆ ಪತ್ರಿಕೆಯ ಪ್ರಕಾಶಕ ಪಡಾರು ರಾಮಕೃಷ್ಣ ಶಾಸ್ತ್ರಿಯವರು ‘ಫಲಪ್ರದ’ವನ್ನು ಅನಾವರಣಗೊಳಿಸಲಿದ್ದಾರೆ. ಪುತ್ತೂರಿನ ಶಾಸಕ ಅಶೋಕ ಕುಮಾರ್ ರೈ, ಕ್ಯಾಂಪ್ಕೋ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿ, ಡಾ.ದಿನಕರ ಅಡಿಗ, ಬಲರಾಮ ಆಚಾರ್ಯ, ಮುಳಿಯ ವೆಂಕಟಕೃಷ್ಣ ಶರ್ಮ ಇವರೆಲ್ಲರ ಶುಭಸೇಸೆಯೊಂದಿಗೆ ‘ಫಲಪ್ರದ’ ಪುಸ್ತಕ ಅನಾವರಣಗೊಳ್ಳಲಿದೆ. 

ಹಲಸು ಮೇಳವು ಮೇ 24 ರಿಂದ 26ರ ತನಕ ನಡೆಯಲಿದೆ. 


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top