ರಂಗ ಚಂದಿರ ಟ್ರಸ್ಟ್ ಆಯೋಜನೆ, ಕಾಸರಗೋಡು ಚಿನ್ನಾ ನಿರ್ದೇಶನ
ಬೆಂಗಳೂರು: ರಂಗ ಚಂದಿರ ಟ್ರಸ್ಟ್ ಬೆಂಗಳೂರು ಆಯೋಜಿಸಿರುವ ನಾಟಕಕಾರ ಡಾ. ಡಿ.ಕೆ ಚೌಟರ ನೆನಪಿನ ಅಂಗವಾಗಿ ಕಾಸರಗೋಡು ಚಿನ್ನಾ ನಿರ್ದೇಶನದ ಎರಡು ನಾಟಕಗಳ ಪ್ರದರ್ಶನ ಜೂನ್ 1ರಂದು ಸಂಜೆ 5:00 ಗಂಟೆಗೆ ಸರಿಯಾಗಿ ಕನ್ನಡ ಭವನದ ನಯನ ಸಭಾಂಗಣದಲ್ಲಿ ನಡೆಯಲಿದೆ. ಚಲನಚಿತ್ರ ನಟರಾದ ಸುಂದರ್ ರಾಜ್ ಅವರು ಉದ್ಘಾಟನೆ ಮಾಡಲಿದ್ದಾರೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಿಯೋಜಿತ ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷ ಕೆ.ವಿ. ನಾಗರಾಜ್ ಮೂರ್ತಿ ಅವರು ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಡಾ. ನಾ ದಾಮೋದರ್ ಶೆಟ್ಟಿ, ಶಶಿಧರ ಅಡಪ, ಆರ್ ನರೇಂದ್ರಬಾಬು ಭಾಗವಹಿಸಲಿದ್ದಾರೆ.
ಕಾರ್ಯಕ್ರಮದ ನಂತರ ರಂಗ ಚಿನ್ನಾರಿ ಕಾಸರಗೋಡು ತಂಡದಿಂದ (ಗಡಿನಾಡು ರಂಗ ತಂಡವನ್ನು ಪ್ರೋತ್ಸಾಹಿಸಿ) "ಒಬ್ಬ ಇನ್ನೊಬ್ಬ" ಮತ್ತು "ಸಿದ್ಧತೆ" ಎಂಬ ಎರಡು ನಾಟಕಗಳು ಪ್ರದರ್ಶನ ಕಾಣಲಿವೆ ಎಂದು ರಂಗ ಚಂದಿರ ಕಾರ್ಯದರ್ಶಿ ಜಿಪಿಓ ಚಂದ್ರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ