ಪೂಜಾ ಕೇಂದ್ರಗಳ ವೈಭವದಿಂದ ಭಕ್ತರಿಗೆ ಮನಃಶ್ಶಾಂತಿ: ಎನ್. ಸುಬ್ರಾಯ ಭಟ್

Upayuktha
0

ಮಂಗಳೂರು: ದೇವಸ್ಥಾನಗಳು ಸಮಾಜದ ಸಾತ್ವಿಕತೆಯ ಪ್ರತಿಬಿಂಬಗಳಾಗಿ ಭಕ್ತರಿಗೆ ಸಂತಸ ಮತ್ತು ಶಾಂತಿಯನ್ನೊದಗಿಸುವ ಕೇಂದ್ರಗಳಾಗಿವೆ ಮತ್ತು ಅಲ್ಲಿನ ವೈಭವ ಹೆಚ್ಚಿದಷ್ಟೂ ದೇವರ ಅನುಗ್ರಹ ಪ್ರಾಪ್ತಿಯ ಮೂಲಕ ಭಕ್ತರ ನೆಮ್ಮದಿ ಹೆಚ್ಚುತ್ತದೆ ಎಂದು ಕನ್ನಡ ಸಾಹಿತ್ಯ ಪರಿಷತ್ತು ಮಂಗಳೂರು ತಾಲೂಕು ಘಟಕದ ಪದಾಧಿಕಾರಿ ಎನ್. ಸುಬ್ರಾಯ ಭಟ್ ಹೇಳಿದರು.


ಅವರು ನಗರದ ಗೌರಿಮಠ ರಸ್ತೆ ಶ್ರೀ ಮಹಾ ಮಾರಿಯಮ್ಮ ದೇವಸ್ಥಾನ ಜಾತ್ರಾ ಮಹೋತ್ಸವದಲ್ಲಿ ಧಾರ್ಮಿಕ ಭಾಷಣ ಮಾಡಿದರು. ಜಾತ್ರಾ ಮಹೋತ್ಸವದ ಅಂಗವಾಗಿ ಏಕತೆಗಾಗಿ ಕ್ರೀಡೆ ಎಂಬ ಧ್ಯೇಯ ವಾಕ್ಯದೊಂದಿಗೆ ವಿವಿಧ ಕ್ರೀಡಾಸ್ಪರ್ಧೆಗಳು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಿದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ಇದರಿಂದ ಪರಿಸರದ ಭಕ್ತಜನ ಅಮ್ಮನ ಆಶ್ರಯದಲ್ಲಿ ಒಂದೇ ಮನೆಯ ಮಕ್ಕಳಂತಾಗಿದ್ದಾರೆ ಎಂದು ವಿವರಿಸಿದರು.


ಕ್ರೀಡಾಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಟ್ರಸ್ಟಿಗಳು ಹಾಗೂ ಪದಾಧಿಕಾರಿಗಳಾದ ಕನಕರಾಜ್ ಎಂ., ಪಿ ಸಿ ತಂಗವೇಲು ಶೆಟ್ಟಿ, ಪಿ.ಗೋಪಾಲಕೃಷ್ಣ ಶೆಟ್ಟಿ, ಸರೋಜಾ, ರಾಜೇಶ್ ಉಪಸ್ಥಿತರಿದ್ದರು. ಪಿ.ಸಿ. ಗುರುಸ್ವಾಮಿ ನಿರೂಪಿಸಿದರು. ಆ ಬಳಿಕ ಅನ್ನ ಸಂತರ್ಪಣೆ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
To Top