ಮುಡಿಪು: 'ಕಥಾ ಬಿಂದು ಪ್ರಕಾಶನ' ಸಂಸ್ಥೆಯ ಆಸರೆಯಲ್ಲಿ ಭಾನುವಾರ (ಮೇ 26) ಮುಡಿಪುವಿನ 'ಭಾರತಿ' ಶಾಲೆಯ ಸಭಾಂಗಣದಲ್ಲಿ ನಡೆದ 'ಸಾಹಿತ್ಯ ಸಂಭ್ರಮ' ಕಾರ್ಯಕ್ರಮದಲ್ಲಿ 8 ಕೃತಿಗಳು ಬಿಡುಗಡೆಗೊಂಡಿವೆ.
ಕ.ಸಾ.ಪ ಮಾಜಿ ರಾಜ್ಯಾಧ್ಯಕ್ಷ, ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು, ಬೆಂಗಳೂರು ಇವರ ಅಧ್ಯಕ್ಷತೆಯಲ್ಲಿ ಈ ಕಾರ್ಯಕ್ರಮ ನಡೆಯಿತು. 'ಕನ್ನಡ ಸಾಹಿತ್ಯಕ್ಕೆ ಸೇವೆಯನ್ನು ಸಲ್ಲಿಸುವಲ್ಲಿ ಇಂತಹ ಸಾಹಿತ್ಯ ಸಂಭ್ರಮ ಕಾರ್ಯಕ್ರಮ, ಕೃತಿ ಅನಾವರಣ ಹಾಗೂ ಕವಿಗೋಷ್ಠಿಗಳು ಮಹತ್ವದ ಪಾತ್ರವನ್ನು ವಹಿಸುತ್ತವೆ, ಎಂದರು. ಕಾರ್ಯಕ್ರಮವನ್ನು ಉದ್ಘಾಟಿಸಿದ ಯುಗ ಪುರುಷ ಪತ್ರಿಕೆಯ ಸಂಪಾದಕ ಭುವನಾಭಿರಾಮ ಉಡುಪರು, 'ಕನ್ನಡದ ನುಡಿ ಸೇವೆ ಮಾಧ್ಯಮಗಳ ಮೂಲಕ ಸಾಕಷ್ಟು ಬೆಳೆಯುತ್ತಿದೆ. ಇದನ್ನು ಪ್ರಕಟಿಸಲು ಇಂತಹ ಸಂಘಟನೆ ನೆರವು ನೀಡುತ್ತಿರುವುದು ಸ್ವಾಗತಾರ್ಹ ಎಂದರು.
ಗುಣಾಜೆ ರಾಮಚಂದ್ರ ಭಟ್ಟರ 'ಭಾವ ತುಂಗೆಯಲಿ ತೇಲಿ 'ಕವನ ಸಂಕಲನ, ಪಂಕಜಾ ರಾಮ ಭಟ್ಟರ 'ಚಿಣ್ಣರ ಲೋಕ', 'ಕಥಾ ಗುಚ್ಛ', 'ಉಯ್ಯಾಲೆ', ಸುಧಾ ಎನ್. ತೇಲ್ಕರ್ ಅವರ 'ಕಿರು ಗೆಜ್ಜೆಯ ಹಾಡು', ಸಂತೋಷ್ ರಾವ್ ಪೆರ್ಮುಡ ಅವರ 'ಮನದಂಗಳ', ವೇ. ಮೂ. ಶಶಿಧರ ಸ್ವಾಮಿ ಅವರ 'ಕರುನಾಡ ಸಿರಿಗಂಧ' ಉಷಾ ಉಡುಪಿ ಅವರ 'ಕಾನನ ಕುಸುಮ' ಎಂಬ ಕೃತಿಗಳನ್ನು ಅನಾವರಣಗೊಳಿಸಲಾಯಿತು.
ಈ ಸಂದರ್ಭದಲ್ಲಿ ಸುರತ್ಕಲ್ ಗೋವಿಂದ ದಾಸ ಕಾಲೇಜಿನ ಪ್ರಾಂಶುಪಾಲ ಪ್ರೊ.ಪಿ.ಕೃಷ್ಣಮೂರ್ತಿ ಮಾತನಾಡುತ್ತಾ 'ಪ್ರಸಕ್ತ ಸಂದರ್ಭದಲ್ಲಿ ಕವಿಗಳು ಸಾಮಾಜಿಕ ಜಾಲ ತಾಣದ ಸಾಹಿತ್ಯಿಕ ಬಳಗಗಳನ್ನು ಸದುಪಯೋಗ ಪಡಿಸಿಕೊಂಡು ಛಂದೋ ವೈವಿಧ್ಯದ ರಚನೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಕವಿತೆ ನಮ್ಮೊಳಗಿನ ಅರಿವಿನ ಶೋಧನೆಯಾಗಿದ್ದು ಕವಿ ಗುಣಾಜೆಯವರು 'ಭಾವಪ್ರಧಾನ ಕವಿತೆಗಳನ್ನು ಬರೆಯುತ್ತಾ ಅಪರೂಪದ ಛಂದೋಪ್ರಕಾರದಲ್ಲಿ ಕವನಿಸುತ್ತಿದ್ದು ಕಾವ್ಯ ಲೋಕಕ್ಕೆ ವಿಶಿಷ್ಟ ಕೊಡುಗೆಯಾಗಿದೆ' ಎಂದು ಅನಿಸಿಕೆ ವ್ಯಕ್ತಪಡಿಸಿದರು.
ಹಿರಿಯ ಕವಿ ವಿ.ಬಿ. ಕುಳಮರ್ವರ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ ನಡೆಯಿತು. 'ರವಿ ಕಾಣದ್ದನ್ನು ಕವಿಗಳು ಕಂಡು ಕಾವ್ಯ ರಚಿಸುತ್ತಾರೆ. ಚೆನ್ನಾಗಿ ಬರೆಯಲು ತಲಸ್ಪರ್ಶಿಯಾದ ಭಾಷಾ ಜ್ಞಾನ, ಪಕ್ವ ಜೀವನಾನುಭವ ಅಗತ್ಯ ಎಂದು ಅವರು ನುಡಿದರು.
ಗುಣಾಜೆ ರಾಮಚಂದ್ರ ಭಟ್, ಪಂಕಜಾ ರಾಮ ಭಟ್, ಬಿ.ಸತ್ಯವತಿ ಎಸ್. ಭಟ್ ಕೊಳಚಪ್ಪು, ಕೊಳ್ಚಪ್ಪುಗೋವಿಂದ ಭಟ್ಟ, ಪುಷ್ಪ ಪ್ರಸಾದ್, ಎನ್. ಸುಬ್ರಾಯ ಭಟ್, ಗೋಪಾಲಕೃಷ್ಣ ಶಾಸ್ತ್ರಿ, ಸೌಮ್ಯಾ ಗೋಪಾಲ್, ಪರಿಮಳ ಮಹೇಶ್ ರಾವ್, ಶೈಲಜಾ ಕೇಕಣಾಜೆ, ಭಾರತಿ ರಘು, ಭಾರತಿ ಸುರತ್ಕಲ್, ವಿಜಯ ಕಾನ, ಕಾನ ಸುಂದರ ಭಟ್, ಸೌಮ್ಯಾ ಶೆಟ್ಟಿ, ಅಪೂರ್ವ ಕಾರಂತ, ವಿದ್ಯಾಶ್ರೀ ಅಡೂರು, ವಿದ್ಯಾ ಬೇಕಲ್, ಸುನೀತಾ ಪ್ರದೀಪ್ ಕುಮಾರ್, ಶಾಂತಾ ಪುತ್ತೂರು, ವಿನುತಾ ರಜತ್ ಗೌಡ ತಮ್ಮ ಸ್ವರಚಿತ ಕವನಗಳನ್ನು ವಾಚಿಸಿದರು.
ಭಾರತಿ ಶಾಲೆಯ ಸಂಚಾಲಕ ಕೊಡಕ್ಕಲ್ ಸುಬ್ರಹ್ಮಣ್ಯ ಭಟ್ ಉಪಸ್ಥಿತರಿದ್ದು ಸಂದರ್ಭೋಚಿತವಾಗಿ ಮಾತನಾಡಿದರು. ಕಥಾ ಬಿಂದು ಸಂಸ್ಥೆಯ ಪಿ.ವಿ. ಪ್ರದೀಪ್ ಕುಮಾರ್ ಈ ಕಾರ್ಯಕ್ರಮ ಆಯೋಜಿಸಿದರು. ವಿನುತಾ ರಜತ್ ಗೌಡ ಪ್ರಾರ್ಥಿಸಿದರು. ಪ್ರಮೀಳಾ ರಾಜ್ ಭಾವ ಗೀತೆ ಹಾಡಿದರು. ವಿದ್ಯಾಶ್ರೀ ಅಡೂರ್ ನಿರೂಪಿಸಿದರು.
ವರದಿ: ಗುಣಾಜೆ ರಾಮಚಂದ್ರ ಭಟ್
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ