ಮೇ 31: ಮಸ್ಕತ್‌ನಲ್ಲಿ "ಶ್ರೀ ದೇವೀ ಮಹಾತ್ಮೆ" ಚಾರಿತ್ರಿಕ ಯಕ್ಷಗಾನ

Upayuktha
0



ಮಂಗಳೂರು: ಮೇ 31ರ ಶುಕ್ರವಾರ ಬಿರುವ ಜವನೆರ್ ಮಸ್ಕತ್ ಮತ್ತು ಇನ್ಸ್ಪಿರೇಷನ್ ಡಿಸೈನ್ ಇವರ ಸಹ ಪ್ರಯೋಜಕತ್ವದಲ್ಲಿ ಕಟೀಲು ಶ್ರೀ ದುರ್ಗಾಪರಮೇಶ್ವರಿ ದಶವತಾರ ಯಕ್ಷಗಾನ ಕಲಾ ಮಂಡಳಿಯ ಆರು ಮೇಳಗಳ ಆಯ್ದ ಕಲಾವಿದರು ಮಸ್ಕತ್‌ನಲ್ಲಿ ಶ್ರೀ ದೇವಿ ಮಹಾತ್ಮೆ ಎಂಬ ಪುಣ್ಯ ಕಥಾಭಾಗವನ್ನು ಆಡಿಸಿ ತೋರಿಸಲಿದ್ಧಾರೆ.


ಒಮಾನ್ ದೇಶದ ಮಸ್ಕತ್ ನ ರುವಿಯಲ್ಲಿರುವ ಅಫಾಲಾಜ್ ಹೋಟೆಲ್‌ನಲ್ಲಿ ಮಧ್ಯಾಹ್ನ 12ರಿಂದ ರಾತ್ರಿ 8 ರ ತನಕ ಪುಷ್ಪಾಲಂಕಾರ ದಿಂದ ಶೋಭಿಸುವ ಸಂಪ್ರದಾಯಕ ರಂಗಸ್ಥಳದಲ್ಲಿ ವಿಜೃಂಭಣೆಯ ಬಯಲಾಟ ಪ್ರದರ್ಶನವನ್ನು ಏರ್ಪಡಿಸಲಾಗಿದೆ ಎಂದು ಬಿರುವ ಜವಾನೆರ್ ಸಂಘಟನೆಯ ಗುರುಪ್ರಸಾದ್ ರಾಮ ಅಮೀನ್ ನಾನಿಲ್ ಅವರು ತಿಳಿಸಿದ್ದಾರೆ.


ಭಾಗವಹಿಸುವ ಕಲಾವಿದರು

ಬಲಿಪ ಶಿವಶಂಕರ್ ಭಟ್, ದೇವಿಪ್ರಸಾದ್ ಆಳ್ವ ಅವರು ಭಾಗವತರಾಗಿ, ದಯಾನಂದ ಶೆಟ್ಟಿಗಾರ, ಭಾಸ್ಕರ್ ಭಟ್ ಕಟೀಲು, ರಾಮಪ್ರಕಾಶ ಕಲ್ಲೂರಾಯ ಚೆಂಡೆ ಮದ್ದಳೆ ವಾದಕರಾಗಿ ಹಿಮ್ಮೇಳದಲ್ಲಿ ಸಹಕರಿಸಲಿದ್ದಾರೆ.


ಮುಮ್ಮೇಳದಲ್ಲಿ ವೇಷಧಾರಿಗಳಾಗಿ ಸುಣ್ಣಂಬಳ ವಿಶ್ವೇಶ್ವರ ಭಟ್, ವಿಷ್ಣು ಶರ್ಮ ವಾಟೆಪಡ್ಪು, ಡಾ|ವಾದಿರಾಜ್ ಕಲ್ಲೂರಾಯ, ಪ್ರಶಾಂತ್ ಶೆಟ್ಟಿ ನೆಲ್ಯಾಡಿ, ಡಾ|ಮಹೇಶ್ ಕುಮಾರ್, ಬಾಲಕೃಷ್ಣ ಗೌಡ ಮಿಜಾರು, ಮೋಹನ್ ಕುಮಾರ್ ಅಮ್ಮುಂಜೆ, ಅರುಣ್ ಕೋಟ್ಯಾನ್, ಗಣೇಶ್ ಶೆಟ್ಟಿ ಕನ್ನಡಿಕಟ್ಟೆ, ಗಣೇಶ್ ಚಂದ್ರಮಂಡಲ, ರವಿರಾಜ ಪೆಣೆಯಾಲೆ, ಹರಿನಾರಾಯಣ ಭಟ್, ಕೃಷ್ಣ ಪ್ರಸಾದ್, ಅರಳ ಗಣೇಶ, ಡಾ|ಶ್ರುತಕೀರ್ತಿರಾಜ, ಸಂಜೀವ ಶೇರಂಕಲ್ಲು, ಮೋನಪ್ಪ ದೇವಾಡಿಗ, ಉಮೇಶ ಕುಪ್ಪೆಪದವು, ರವಿ ಪೂಜಾರಿ, ಪ್ರೇಮರಾಜ್ ಕೊಯಿಲ, ರಾಜೇಶ್ ಆಚಾರ್ಯ, ಅಕ್ಷಯ್ ಭಟ್, ರಕ್ಷಿತ್ ಪೂಜಾರಿ, ನಿಖಿಲ್ ಶೆಟ್ಟಿ, ಹಾಗೂ ಮಸ್ಕತ್ ನಲ್ಲಿರುವ ಹವ್ಯಾಸಿ ಕಲಾವಿದೆ ವಿದೂಷಿ ಶ್ರೀಮತಿ ತೀರ್ಥ ಕಟೀಲ್ ಭಾಗವಹಿಸಲಿದ್ದಾರೆ. ರಮೇಶ್ ಕುಲಶೇಖರ ವೇಷ ಭೂಷಣ ವ್ಯವಸ್ಥೆ ಮಾಡಲಿದ್ದಾರೆ.


ಬಿರುದು ಗೌರವ: ಹಿರಿಯ ಅರ್ಥಧಾರಿ, ವೇಷಧಾರಿ, ಪ್ರಬಂಧಕ ಶ್ರೀ ಸುಣ್ಣoಬಳ ವಿಶ್ವೇಶ್ವರ ಭಟ್ ಅವರಿಗೆ "ಯಕ್ಷ ಸಿರಿ" ಹಾಗೂ ವೇಷಧಾರಿ, ಅರ್ಥ ಧಾರಿ, ಉಪನ್ಯಾಸಕ, ನಿರೂಪಕ ಡಾ. ವಾದಿರಾಜ ಕಲ್ಲೂರಾಯರಿಗೆ "ಯುವ ಸಿರಿ" ಬಿರುದು ನೀಡಿ ಗೌರವಿಸಲಾಗುವುದು.


ಈ ಕಾರ್ಯಕ್ರಮದಲ್ಲಿ ಕರಾವಳಿಯ ಶಾಂತಾ ರಾಮ ಅಮೀನ್ ನಾನಿಲ್ ಹಳೆಯಂಗಡಿ, ಸುಚೇತನಾ ಕೆ ಅಂಚನ್, ಸೂರ್ಯಕಾಂತ್ ಜಯ ಸುವರ್ಣ, ಮಿತ್ರ ಹೆರಾಜೆ, ಮೋಹನ್ ದಾಸ ಸಾಲಿಯಾನ್ ಪಚ್ಚನಾಡಿ, ಆನಂದ ಸನಿಲ್, ಗಂಗಾಧರ್ ಪೂಜಾರಿ  ವಿಶೇಷ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.


ಸಾಮಾಜಿಕ ಸೇವಾ ಚಟುವಟಿಕೆಗಳೊಂದಿಗೆ ಸಾಂಸ್ಕೃತಿಕ ಕಲಾ ಚಟುವಟಿಕೆಗಳಿಗೂ ಪ್ರೋತ್ಸಾಹ ನೀಡುವ ಬಿರುವ ಜವನೆರ್ ಸಂಘಟನೆ ಈ ಪೂರ್ವದಲ್ಲಿ ಎರಡು ಬಾರಿ ಶ್ರೀ ಶನೀಶ್ವರ ಮಹಾತ್ಮೆ ಹಾಗೂ ಒಮ್ಮೆ ಶ್ರೀ ಸತ್ಯ ನಾರಾಯಣ ವೃತ ಮಹಾತ್ಮೆ ಪೂಜಾ ಸಹಿತ ಯಕ್ಷಗಾನ ತಾಳಮದ್ದಳೆಯನ್ನು ಶ್ರೀ ಶನೀಶ್ವರ ಭಕ್ತವೃಂದ ಪಕ್ಷಿಕೆರೆ, ಮಂಗಳೂರು ತಂಡ  ಮೂಲಕ ನಡೆಸಿದೆ. ಕಳೆದ ವರ್ಷ ನಡೆದ ಸ್ವಾಮಿ ಕೊರಗಜ್ಜ ತಾಳಮದ್ದಳೆಯೂ ಜನ ಮೆಚ್ಚುಗೆ ಪಡೆದಿತ್ತು. ಕಲ್ಲಡ್ಕ ವಿಠ್ಠಲ್ ನಾಯ್ಕ್ ಅವರ ಗೀತಾ ಸಾಹಿತ್ಯ ಸಂಭ್ರಮವನ್ನೂ ಮಸ್ಕಟ್ ಶ್ರೀ ಕೃಷ್ಣ ದೇವಸ್ಥಾನದಲ್ಲಿ ಆಯೋಜಿಸಿ ಕರಾವಳಿಯ ಕಲಾವಿದರಿಗೆ ಪ್ರೋತ್ಸಾಹ ನೀಡಿದೆ.


ದೇವೀ ಮಹಾತ್ಮೆ ಯಕ್ಷಗಾನ ಪ್ರದರ್ಶನಕ್ಕೆ ಉಚಿತ ಪ್ರವೇಶ ಇದ್ದು ಪೂರ್ವಾಹ್ನ 11 ರಿಂದ ಪ್ರಸಾದ ಭೋಜನ ಇದೆ. ಸಂಜೆ ಉಪಹಾರ ಹಾಗೂ ರಾತ್ರಿ ಭೋಜನ ಪೊಟ್ಟಣ ವ್ಯವಸ್ಥೆಯನ್ನೂ ಮಾಡಲಾಗಿದೆ.


ಸುದ್ದಿಗೋಷ್ಠಿಯಲ್ಲಿ ಗುರುಪ್ರಸಾದ್, ರಾಮ ಅಮೀನ್ ನಾನಿಲ್, ಸುಹಾನ್ ಹೇಮಚಂದ್ರ, ಗಂಗಾಧರ್ ಪೂಜಾರಿ, ಕದ್ರಿ ನವನೀತ ಶೆಟ್ಟಿ ಮತ್ತು ಡಾ. ವಾದಿರಾಜ ಕಲ್ಲೂರಾಯ ಉಪಸ್ಥಿತರಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  


Post a Comment

0 Comments
Post a Comment (0)
To Top