ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯದ 42 ನೇ ವಾರ್ಷಿಕ ಘಟಿಕೋತ್ಸವ ಸಮಾರಂಭ ವನ್ನು ಜೂನ್ 15, 2024 ನೇ ಶನಿವಾರ ಮಧ್ಯಾಹ್ನ 12.15 ಕ್ಕೆ ವಿವಿಯ ಆವರಣದಲ್ಲಿರುವ ಮಂಗಳಾ ಸಭಾಂಗಣದಲ್ಲಿ ನಡೆಸಲಾಗುವುದು.
ಕರ್ನಾಟಕದ ರಾಜ್ಯಪಾಲ, ಮಂಗಳೂರು ವಿವಿಯ ಕುಲಾಧಿಪತಿಗಳೂ ಆಗಿರುವ ಶ್ರೀ ಥಾವರ್ ಚಂದ್ ಗೆಹ್ಲೋಟ್ ಅಧ್ಯಕ್ಷತೆ ವಹಿಸಲಿದ್ದು, ಉನ್ನತ ಶಿಕ್ಷಣ ಸಚಿವ ಡಾ. ಸುಧಾಕರ್ ಉಪಸ್ಥಿತರಿರಲಿದ್ದಾರೆ. ಡೈರೆಕ್ಟರ್ ಜನರಲ್ ರಿಸರ್ಚ್ ಆಂಡ್ ಇನ್ಫಾರ್ಮೇಷನ್ ಸಿಸ್ಟಂ ಫಾರ್ ಡೆವಲಪಿಂಗ್ ಕಂಟ್ರೀಸ್ (RIS) ಪ್ರೊ. ಸಚಿನ್ ಚತುರ್ವೇದಿ ಇವರು ಅತಿಥಿಗಳಾಗಿ ಘಟಿಕೋತ್ಸವ ಭಾಷಣ ಮಾಡಲಿದ್ದಾರೆ. ಘಟಿಕೋತ್ಸವ ಕುರಿತ ಎಲ್ಲಾ ವಿವರಗಳನ್ನು ವಿಶ್ವವಿದ್ಯಾನಿಲಯದ ಅಧಿಕೃತ ಜಾಲತಾಣ https://www.mangaloreuniversity.ac.in/ ನಲ್ಲಿ ಪ್ರಕಟಿಸಲಾಗುವುದು. ಎಂದು ಕುಲಸಚಿವರ ಪ್ರಕಟಣೆ ತಿಳಿಸಿದೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ