ಉಪ್ಪಿನಂಗಡಿ ಗೃಹರಕ್ಷಕದಳ ಪ್ರವಾಹ ರಕ್ಷಣಾ ತಂಡಕ್ಕೆ ಹೊಸ ರಬ್ಬರ್ ದೋಣಿ, ಪೆಟ್ರೋಲ್ ಇಂಜಿನ್ ಹಸ್ತಾಂತರ

Upayuktha
0



ಮಂಗಳೂರು: ಮಳೆಗಾಲದ ಸಮಯದಲ್ಲಿ ಜಿಲ್ಲಾಡಳಿತ ಆದೇಶದಂತೆ ಕರ್ತವ್ಯ ನಿರ್ವಹಿಸುವ ಗೃಹರಕ್ಷಕದಳ ಪ್ರವಾಹ ರಕ್ಷಣಾ ತಂಡಕ್ಕೆ ಗೃಹರಕ್ಷಕದಳ ಕೇಂದ್ರ ಕಚೇರಿಯಿಂದ ಮಂಜೂರಾದ ಹೊಸ ರಬ್ಬರ್ ದೋಣಿ ಹಾಗೂ ಹೊಸ ಪೆಟ್ರೋಲ್ ಚಾಲಿತ ಇಂಜಿನ್ ಯಂತ್ರವನ್ನು ಜಿಲ್ಲಾ ಗೃಹರಕ್ಷಕದಳ ಕಚೇರಿ ಮಂಗಳೂರಿನಲ್ಲಿ ಜಿಲ್ಲಾ ಗೃಹರಕ್ಷಕದಳ ಕಮಾಂಡೆಂಟ್ ಡಾ.ಮುರಲೀ ಮೋಹನ್ ಚೂಂತಾರು ರವರು ಉಪ್ಪಿನಂಗಡಿ ಗೃಹರಕ್ಷಕದಳ ಪ್ರಭಾರ ಘಟಕಾಧಿಕಾರಿ ದಿನೇಶ್ ರವರಿಗೆ ಹಸ್ತಾಂತರ ಮಾಡಿದರು ಈ ಸಂದರ್ಭದಲ್ಲಿ  ಸೇಕ್ಷನ್ ಲೀಡರ್ ಜನಾರ್ದನ ಆಚಾರ್ಯ , ಮಂಜುನಾಥ್,ಆರೀಸ್, ದಿವಾಕರ್, ಸುನೀಲ್ ಉಪಸ್ಥಿತರಿದ್ದರು.


  • ಈ ರಬ್ಬರ್ ಪೆಟ್ರೋಲ್ ಚಾಲಿತ ಇಂಜಿನ್ ದೋಣಿಯಲ್ಲಿ 10 ಜನರನ್ನೂ ಕೊಂಡೊಯ್ಯಬಹುದಾದ ಸಾಮರ್ಥ್ಯ ಹೊಂದಿರುತ್ತದೆ.
  • ಉಪ್ಪಿನಂಗಡಿ ಗೃಹರಕ್ಷಕದಳ ಪ್ರವಾಹ ರಕ್ಷಣಾ ತಂಡದಲ್ಲಿ ಇಗ 2ರಬ್ಬರ್ ದೋಣಿ ಹಾಗೂ ಪೆಟ್ರೋಲ್ ಚಾಲಿತ ಇಂಜಿನ್, ಇನ್ನೊಂದು ಸೀಮೆಎಣ್ಣೆ ಚಾಲಿತ ಇಂಜಿನ್ ಇದ್ದು ಅದಲ್ಲದೆ ಜಿಲ್ಲಾಡಳಿತ ನೀಡಿದ ಹಲವು ರಕ್ಷಣಾ ಸಾಮಾಗ್ರಿಗಳು ರಕ್ಷಣಾ ತಂಡದ ಬಳಿ ಇರುತ್ತದೆ.



  ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top