ಸೇವೆಯಲ್ಲಿ ಸಾರ್ಥಕ್ಯ ಕಂಡ ಅಶೋಕ್ ಕುಮಾರ್: ಡಾ|| ಮುರಲೀ ಮೋಹನ್ ಚೂಂತಾರು

Upayuktha
0

 


ಮಂಗಳೂರು: ಸತತವಾಗಿ 38 ವರ್ಷಗಳ ಕಾಲ ಗೃಹರಕ್ಷಕ ಇಲಾಖೆಯಲ್ಲಿ 1985ರಿಂದ ನಿಷ್ಕಾಮ ಸೇವೆ ಸಲ್ಲಿಸಿ ಒಬ್ಬ ಮಾದರಿ ಗೃಹರಕ್ಷಕನಾಗಿ ಇತರರಿಗೆ ರೋಲ್ ಮೊಡೆಲ್ ಆಗಿ ಕಾರ್ಯ ನಿರ್ವಹಿಸಿರುವ ಶ್ರೀ ಅಶೋಕ್ ಕುಮಾರ್ ಅವರು ನಿಜವಾಗಿಯೂ ದಕ್ಷಿಣ ಕನ್ನಡ ಗೃಹರಕ್ಷಕದ ಬಹು ದೊಡ್ಡ ಆಸ್ತಿಯಾಗಿದ್ದರು. ಯಾವುದೇ ವಿವಾದ ಮತ್ತು ಕಪ್ಪು ಚುಕ್ಕೆ ಇಲ್ಲದೆ ನಿಷ್ಕಾಮ ಸೇವೆ ಸಲ್ಲಿಸಿರುವ ಶ್ರೀ ಅಶೋಕ್ ಅವರಿಂದ ಕಲಿಯಲು ಬೇಕಾದಷ್ಟಿದೆ. ಪ್ರಾಮಾಣಿೆಕ ಮತ್ತು ಸರಳ ಸಜ್ಜನಿಕೆಯ ಅಶೋಕ್ ಅವರು ಎಂತಹಾ ಸಂದಿಗ್ದದ ಪರಿಸ್ಥಿತಿಯಲ್ಲೂ ಸಹನೆ ಕಳೆದುಕೊಳ್ಳದೆ ಜನರೊಂದಿಗೆ ಬೆರೆತು ಸಮಾಜದ ಸ್ವಾಥ್ಯವನ್ನು ಕಾಪಾಡುವಲ್ಲಿ ಮುತುವರ್ಜಿ ವಹಿಸಿ ಕೆಲಸ ಮಾಡಿದ್ದಾರೆ. ಇತರರ ಸೇವೆಯಲ್ಲಿಯೂ ಸಾರ್ಥಕ್ಯ ಮತ್ತು ಸಂತೃಪ್ತಿ  ಪಡೆದು ಶ್ರೀ ಅಶೋಕ್ ಕುಮಾರ್ ಅವರು ನಿವೃತ್ತಿ ಹೊಂದಿ ಇದೀಗ ನೇಫಥ್ಯಕ್ಷೆ ಸರಿಯುತ್ತಿರುವುದು ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕದಳಕ್ಕೆ ತುಂಬಲಾರದ ನಷ್ಟ ಎಂದು ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕದಳದ ಸಮಾದೇಷ್ಟರಾದ ಡಾ. ಮುರಲೀ ಮೋಹನ್ ಚೂಂತಾರು ಅಭಿಪ್ರಾಯ ವ್ಯಕ್ತಪಡಿಸಿದರು.

 

ಗುರುವಾರದಂದು ನಡೆದ ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕದಳದ ಘಟಕದ ವಾರದ ಕವಾಯತಿನ ಸಂದರ್ಭದಲ್ಲಿ ಪೊಲೀಸ್ ಪರೇಡ್ ಮೈದಾನದಲ್ಲಿ ಅಶೋಕ್ ಕುಮಾರ್ ಅವರಿಗೆ ಸನ್ಮಾನ ಸಮಾರಂಭ ಜರುಗಿತು. ಶಾಲು ಹೊದಿಸಿ, ಹಾರ ಹಾಕಿ ಫಲ ಪುಷ್ಪ ನೀಡಿ ಸಮಾದೇಷ್ಟರು ಸನ್ಮಾನಿಸಿದರು. ಸುಮಾರು 50 ಮಂದಿ ಗೃಹರಕ್ಷಕರು, ಘಟಕಾಧಿಕಾರಿ ಮಾರ್ಕ್ ಶೇರ್, ಬೋಧಕರಾದ ಎನ್.ಮಹೇಶ ಉಪಸ್ಥಿತರಿದ್ದರು. ಸನ್ಮಾನದ ಬಳಿಕ ಅಶೋಕ್ ಕುಮಾರ್ ಅವರನ್ನು ಸಮಾದೇಷ್ಡರಾದ ಡಾ. ಮುರಲೀ ಮೋಹನ್ ಚೂಂತಾರು ಅವರು ತಮ್ಮ ಸರ್ಕಾರಿ ವಾಹನ ಜೀಪಿನಲ್ಲಿ ಅವರ ಮನೆತನಕ ಹೋಗಿ ಸಕಲ ಮರ್ಯಾದೆಯಿಂದ ಕಳುಹಿಸಿ ಕೊಟ್ಟು ಅವರ ನಿಷ್ಕಾಮ ಸೇವೆಗೆ ರಾಜಮರ್ಯಾದೆ ನೀಡಿದರು. ಪ್ರತಿಯೊಬ್ಬ ನಿಷ್ಠಾವಂತ, ಪ್ರಾಮಾಣಿಕ ಗೃಹರಕ್ಷಕರಿಗೂ ಈ ರೀತಿ ಗೌರವ ಸಿಗಲಿ ಮತ್ತು ಹೊಸತಾಗಿ ಸೇರಿದ  ಗೃಹರಕ್ಷಕರು ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಸೇವೆ ಮಾಡಿ ಎಂದು ಸನ್ಮಾನಕ್ಕೆ ಉತ್ತರಿಸುತ್ತಾ ಅಶೋಕ್ ಕುಮಾರ್ ಅವರು ನುಡಿದರು.


  ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top