ಮಂಗಳೂರು: ಆರೋಗ್ಯ ಎನ್ನುವುದು ಮಾರುಕಟ್ಟೆಯಲ್ಲಿ ಸಿಗುವ ವಸ್ತು ಅಲ್ಲ. ನಮ್ಮ ಆರೋಗ್ಯದ ಗುಟ್ಟು ಮತ್ತು ಜುಟ್ಟು ನಮ್ಮ ಕೈಯಲ್ಲಿಯೇ ಇದೆ. ನಾವು ತಿನ್ನುವ ಆಹಾರದ ಮೇಲೆ ನಿಯಂತ್ರಣ, ನಮ್ಮ ಧನಾತ್ಮಕ ಚಿಂತನಾ ಲಹರಿ ಮತ್ತು ದೈಹಿಕ ಚಟುವಟಿಕೆಗಳಿಂದ ಕೂಡಿದ ಜೀವನ ಶೈಲಿ ಮತ್ತು ಒತ್ತಡ ಮುಕ್ತ ಕೆಲಸದ ವಾತಾವರಣ ನಾವು ಸೃಷ್ಟಿಸಿಕೊಂಡಲ್ಲಿ ನಮಗೆ ಯಾವುದೇ ರೋಗ ಬರುವ ಸಾಧ್ಯತೆ ಇಲ್ಲ. ನಮ್ಮ ಹೆಚ್ಚಿನ ಎಲ್ಲಾ ರೋಗಗಳಾದ ಅಧಿಕ ರಕ್ತದೊತ್ತಡ, ಮಧುಮೇಹ ಮತ್ತು ಹೃದಯಾಘಾತ ಮುಂತಾದ ರೋಗಗಳು ನಮ್ಮ ದೋಷಪೂರಿತ ಆಹಾರ, ಋಣಾತ್ಮಕ ಚಿಂತನೆ, ವ್ಯಾಯಾಮವಿಲ್ಲದ ಜೀವನ ಪದ್ಧತಿ ಮತ್ತು ಅತಿಯಾದ ಒತ್ತಡದ ಜೀವನ ಶೈಲಿಯಿಂದ ಬರುತ್ತದೆ ಎಂದು ಡಾ|| ಮುರಲೀ ಮೋಹನ್ ಚೂಂತಾರು ಅವರು ನುಡಿದರು.
ತಲಪಾಡಿ ಪರಿಸರದ ದೇವಿಪುರದ ಶ್ರೀ ದುರ್ಗಾ ಪರಮೇಶ್ವರಿ ದೇವಾಲಯದಲ್ಲಿ ಆರೋಗ್ಯ ಭಾರತಿ ಮಂಗಳೂರು ಮತ್ತು ಚೂಂತಾರು ಸರೋಜಿನಿ ಭಟ್ ಪ್ರತಿಷ್ಟಾನ ಇದರ ಆಶ್ರಯದಲ್ಲಿ ಆರೋಗ್ಯ ಮಾಹಿತಿ ಶಿಬಿರ ಇದರಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಆರೋಗ್ಯ ಭಾರತಿ ಮಂಗಳೂರು ಇದರ ಗೌರವ ಅಧ್ಯಕ್ಷರಾದ ಡಾ|| ಮುರಲೀ ಮೋಹನ್ ಚೂಂತಾರು ಅವರು ಆರೋಗ್ಯ ಮಾಹಿತಿ ನೀಡಿದರು.*
ಕಾರ್ಯಕ್ರಮದಲ್ಲಿ ಡಾ. ಮೋಹನ್ ದಾಸ್ ರೈ ಶಾಂತಿಗುತ್ತು ಆಡಳಿತ ಮೊಕ್ತೇಸರರು ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನ, ಶ್ರೀ ನಾರಾಯಣ ಕಜೆ ಕೇಶವ ಶಿಶುಮಂದಿರ ವ್ಯವಸ್ಥಾಪಕರು ಮತ್ತು ದೇವಸ್ಥಾನ ಸಮಿತಿಯ ಸದಸ್ಯರು, ಶ್ರೀ ರಾಮಯ್ಯ ಕಿಲ್ಲೆ ಮಾಜಿ ಅಧ್ಯಕ್ಷರು ತಲಪಾಡಿ ಗ್ರಾಮ ಪಂಚಾಯಿತಿ, ಶ್ರೀ ನಿತ್ಯಾನಂದ ಮತ್ತು ಶ್ರೀಮತಿ ನಯನ ಪಾರ್ಥಸಾರಥಿ, ದೇವಸ್ಥಾನ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.
ಸುಮಾರು 100 ಮಂದಿ ಈ ಶಿಬಿರದಲ್ಲಿ ಭಾಗವಹಿಸಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ