ರಕ್ತದಾನ ಶ್ರೇಷ್ಠ ದಾನ: ಅಮೈ ಶಿವಪ್ರಸಾದ್ ಭಟ್ಟ

Upayuktha
0


ಮಂಗಳೂರು: ಭಾನುವಾರದಂದು ಚೂಂತಾರು ಸರೋಜಿನಿ ಭಟ್ ಪ್ರತಿಷ್ಠಾನ (ರಿ.) ಮತ್ತು ಹವ್ಯಕ ಸಭಾ ಮಂಗಳೂರು ಮತ್ತು ಶ್ರೀ ಭಾರತಿ ಕಾಲೇಜು ನಂತೂರು ಮಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ರಕ್ತನಿಧಿ ತೇಜಸ್ವಿನಿ ಆಸ್ಪತ್ರೆ ಮಂಗಳೂರು ಇದರ ಸಹಕಾರದೊಂದಿಗೆ ಶ್ರೀ ಭಾರತಿ ಕಾಲೇಜು ನಂತೂರಿನಲ್ಲಿ ಬೆಳಗ್ಗೆ 9 ರಿಂದ 1ರ ವರೆಗೆ ರಕ್ತದಾನ ಶಿಬಿರ ಜರುಗಿತು. ವೈದಿಕ ವಿದ್ವಾಂಸ ಅಮೈ ಶಿವಪ್ರಸಾದ್ ಭಟ್ ದೀಪ ಬೆಳಗಿಸಿ, ಸ್ವಯಂ ರಕ್ತದಾನ ಮಾಡಿ ಶಿಬಿರವನ್ನು ಉದ್ಘಾಟಿಸಿದರು.


ವೇದ ಶಿಬಿರದ ವಿದ್ಯಾರ್ಥಿಗಳು ವೇದ ಘೋಷ ಮಾಡಿ ರಕ್ತದಾನದ ಮೆರುಗನ್ನು ಹೆಚ್ಚಿಸಿದರು. ಈ ಸಂದರ್ಭದಲ್ಲಿ ಶ್ರೀಕೃಷ್ಣ ನೀರಮೂಲೆ, ಅನಿತಾ ಬೋಳಂತಕೋಡಿ, ಶಿಬಿರದ ಸಂಯೋಜಕರಾದ ಡಾ ಮುರಲೀ ಮೋಹನ್ ಚೂಂತಾರು, ಡಾ ಶಿರಿನ್, ಬಾಲಕೃಷ್ಣ ಭಟ್ ಕೊಂಚಾಡಿ, ಡಾ ಸದಾಶಿವ ರಾವ್, ಡಾ ಮೋಹನ್ ಭಟ್ ಮುಂತಾದವರು ಉಪಸ್ಥಿತರಿದ್ದರು. ಒಟ್ಟು 22 ಮಂದಿ ರಕ್ತದಾನ ಮಾಡಿದರು.



  ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
To Top