ಶ್ರೀನಿಧಿ, ರಿಷಿಕಾಗೆ ಅನಂತ ಮಿತ್ರ ಕಲ್ಬಾವಿ ಯುವ ಸಾಧಕ ಪ್ರಶಸ್ತಿ

Chandrashekhara Kulamarva
0


ಮಂಗಳೂರು: ಮಂಗಳೂರು ಸಿಟಿ ರೋಟರಿ ಕ್ಲಬ್ ನ ಅನಂತಮಿತ್ರ ಕಲ್ಬಾವಿ ಯುವ ಸಾಧಕ ಪ್ರಶಸ್ತಿಗೆ ( ಯಂಗ್ ಅಚೀವರ್ ಅವಾರ್ಡ್ಸ್) ಡ್ರಾಮಾ ಜೂನಿಯರ್ಸ್ ವಿಜೇತೆ ರಿಷಿಕಾ ಕುಂದೇಶ್ವರ ಮತ್ತು ಶಿಕ್ಷಣ ಅ್ಯಪ್ ಡೆವೆಲೆಪರ್ ಶ್ರೀನಿಧಿ ಆಯ್ಕೆಯಾಗಿದ್ದಾರೆ.


ಕೊಡಿಯಾಲಬೈಲ್ ಉತ್ಸವ ಹೋಟೇಲ್ ಸಭಾಂಗಣದಲ್ಲಿ ಮೇ 22 ರಂದು ರಾತ್ರಿ‌ 8 ಗಂಟೆಗೆ ದಕ್ಷಿಣ ಕನ್ನಡ ಜಿಲ್ಲಾ ನಿರ್ಮಿತಿ ಕೇಂದ್ರದ ಕಾರ್ಯನಿರ್ವಾಹಕ ನಿರ್ದೇಶಕ ರಾಜೇಂದ್ರ ಕಲ್ಬಾವಿ ಪ್ರಶಸ್ತಿ ಪ್ರದಾನ ಮಾಡುವರು. ರೋಟರಿ ಅಧ್ಯಕ್ಷ ಪ್ರಶಾಂತ್ ರೈ, ಪ್ರಧಾನ ಕಾರ್ಯದರ್ಶಿ ಗಣೇಶ್,  ಸ್ಥಾಪಕಾಧ್ಯಕ್ಷ ಡಾ.ರಂಜನ್ ಶೆಟ್ಟಿ ಉಪಸ್ಥಿತರಿರುವರು. 


ಮೇ ತಿಂಗಳು ಯುವ ಸೇವಾ ಮಾಸ ಹಿನ್ನೆಲೆಯಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ.


ರಾಜೇಂದ್ರ ಕಲ್ಬಾವಿ ಅವರು ತಮ್ಮ ಹೆತ್ತವರಾದ ಅನಂತ ಕಲ್ಬಾವಿ ಸುಮಿತ್ರಾ ಕಲ್ಬಾವಿ ಹೆಸರಲ್ಲಿ ಪ್ರಶಸ್ತಿ  ನಿಧಿ ಸ್ಥಾಪಿಸಿದ್ದರು.



   ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
To Top