ಪರಿಷತ್ ಚುನಾವಣೆ: ಪ್ರಾದೇಶಿಕ ನ್ಯಾಯ ಒದಗಿಸದ ಬಿಜೆಪಿ

Upayuktha
0

ಸದ್ಯದಲ್ಲೇ ನಡೆಯಲಿರುವ ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿಯು ಈ ಹಿಂದೆ ಪಾಲಿಸಿಕೊಂಡು ಬರಲಾಗುತ್ತಿದ್ದ ಪ್ರಾದೇಶಿಕ ನ್ಯಾಯ ವ್ಯವಸ್ಥೆಗೆ ಅನ್ಯಾಯ ಮಾಡಿರುವುದು ಸ್ಪಷ್ಟ.


ನೈಋತ್ಯ ಪದವೀಧರ ಮತ್ತು ಶಿಕ್ಷಕರ ಕ್ಷೇತ್ರಗಳ ಪೈಕಿ ಒಂದನ್ನು ಕರಾವಳಿ ಜಿಲ್ಲೆಗಳಿಗೆ ಮತ್ತೊಂದನ್ನು ಮಲೆನಾಡಿಗೆ ನೀಡಲಾಗುತ್ತಿತ್ತು. ಆದರೆ ಈ ಬಾರಿ ಜೆಡಿಎಸ್ ನೊಂದಿಗೆ ಮೈತ್ರಿಯನ್ನು ನೆಪವಾಗಿಟ್ಟುಕೊಂಡು ಎರಡೂ ಕ್ಷೇತ್ರಗಳು ಮಲೆನಾಡಿನ ಪಾಲಾಗಿರುವುದು. ಪಕ್ಷವನ್ನು ನಿರಂತರ ಬೆಂಬಲಿಸಿಕೊಂಡು ಬಂದ ಸುಶಿಕ್ಷಿತ ಜನತೆಗೆ ಮಾಡಿದ ಅನ್ಯಾಯವಾದಂತಾಗಿದೆ. ಈ ಬಗ್ಗೆ ಯಾವ ಹಿರಿಯರನ್ನು ಪ್ರಶ್ನಿಸಿದರೂ ಯಡಿಯೂರಪ್ಪನವರ ಕಡೆಗೇ ಕೈತೋರಿಸುತ್ತಿರುವುದನ್ನು ಗಮನಿಸಿದರೆ ಇಡೀ ಪಕ್ಷವನ್ನು ಒಬ್ಬ ವ್ಯಕ್ತಿಯ ಕಾಲಕೆಳಗೆ ಇಟ್ಟು ಬಿಟ್ಟರೋ ಎಂದನಿಸುವುದು ಸಹಜ.


ಒಂದು ವೇಳೆ ಶಿಕ್ಷಕರ ಕ್ಷೇತ್ರವನ್ನು ಮೈತ್ರಿ ಪಕ್ಷಕ್ಕೆ ನೀಡುವ ಅನಿವಾರ್ಯತೆ ಇದ್ದರೆ ಪದವೀಧರ ಕ್ಷೇತ್ರಕ್ಕೆ ಕರಾವಳಿಯಿಂದ ಯೋಗ್ಯ  ಆಕಾಂಕ್ಷಿಗಳಾಗಿದ್ದ ಮಾಜಿ ಶಾಸಕ ರಘುಪತಿ ಭಟ್ ಅಥವಾ ಹೊಸಮುಖವಾಗಿ ಸಕ್ರಿಯರಾಗಿದ್ದ ವಿಕಾಸ್ ಪುತ್ತೂರನ್ನಾದರೂ ಗಮನಿಸಬೇಕಿತ್ತು.

 

ಕೋಟ ಶ್ರೀನಿವಾಸ ಪೂಜಾರಿಯವರು ಸಂಸದರಾದರೆ ತೆರವಾಗುವ ಸ್ಥಾನವನ್ನು ಕರಾವಳಿಗೆ ನೀಡ್ತೇವೆ ಅನ್ನುವ ಪಕ್ಷದ ಸಮಜಾಯಿಷಿ ಅರ್ಥಹೀನ. ಕರಾವಳಿದ್ದೇ ಸ್ಥಾನ  ಕರಾವಳಿಗಲ್ಲದೆ ಮತ್ಯಾರಿಗೆ ಕೊಡೋಕೆ ಸಾಧ್ಯ ಹೇಳಿ? ಅದರಲ್ಲೇನು ಹೆಚ್ಚುಗಾರಿಕೆ? 


ಏನು ಮಾಡಿದ್ರೂ ಕರಾವಳಿ ಮತದಾರರನ್ನು ಸಮಾಧಾನ ಪಡಿಸೋದು ಸುಲಭ ಅನ್ನೋ ಬಿಜೆಪಿ ನಾಯಕರ take it as granted ಧೋರಣೆ ನೂರಕ್ಕೆ ನೂರು ತಪ್ಪು.


ಕರಾವಳಿ ಬಿಜೆಪಿ ಶಾಸಕರ ಮೌನ ಸರಿಯಲ್ಲ:


ವಿಧಾನ ಪರಿಷತ್ ನೈಋತ್ಯ ಪದವೀಧರ ಮತ್ತು ಶಿಕ್ಷಕರ ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆಯ ವಿಚಾರದಲ್ಲಿ ಕರಾವಳಿ ಜಿಲ್ಲೆಗಳ ಬಿಜೆಪಿ ಶಾಸಕರು ಮತ್ತು ಪರಿಷತ್ ವಿರೋಧ ಪಕ್ಷದ ನಾಯಕರು ಬಹಳ ವರ್ಷಗಳಿಂದ ಬಿಜೆಪಿಯನ್ನು ದೊಡ್ಡ ಸಂಖ್ಯೆಯಲ್ಲಿ ಬೆಂಬಲಿಸುತ್ತ ಬಂದಿರುವ ಈ ಭಾಗದ ಪದವೀಧರರು ಅಥವಾ ಶಿಕ್ಷಕರಿಗೆ ಒಂದು ಪ್ರಾತಿನಿಧ್ಯ ಕೊಡಲೇಬೇಕೆಂದು ಸಮರ್ಥ ವಾದ ಮುಂದಿಟ್ಟು ಪಟ್ಟು ಹಿಡಿಯಬೇಕಿತ್ತು . ಆದರೆ ಹಾಗಾಗದಿರುವುದು ವಿಷಾದನೀಯ.


ಕಳೆದ ಬಾರಿ ಅಭ್ಯರ್ಥಿಯಾಗಿ ಈ ಹಿಂದೆ ಅನೇಕ ಅಧಿಕಾರಗಳನ್ನು ಅನುಭವಿಸಿ ಅಜೀರ್ಣವಾಗಿದ್ದ ಅತ್ಯಂತ ಅಯೋಗ್ಯ ಆಯನೂರುಗೆ ಬಿಜೆಪಿ ಟಿಕೆಟ್ ನೀಡಿತ್ತು. ಎದುರಾಳಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಒಳ್ಳೆಯ ಸಭ್ಯ, ಸಜ್ಜನಿಕೆಯ ಅಯನೂರುಗಿಂತ ನೂರು ಪಾಲು ವಾಸಿ ಎನ್ನಬಹುದಾದ ದಿನೇಶ್ ಕಣದಲ್ಲಿದ್ದರು. ಆದರೂ ಪಕ್ಷದ ಮೇಲಿನ ಅಭಿಮಾನದಿಂದ ಬಿಜೆಪಿಗೇ ಓಟು ಗುದ್ದಿದ್ದೆವು. ಆದರೆ ಜಯಗಳಿಸಿದ ಬಳಿಕ ತಮ್ಮ ಅವಧಿಯಲ್ಲಿ ಎಷ್ಟು ಬಾರಿ ಕರಾವಳಿ ಜಿಲ್ಲೆಗಳಿಗೆ ಉಭಯ ಜಿಲ್ಲೆಗಳ ಕೆಡಿಪಿ ಮೊದಲಾದ ಸಭೆಗಳಿಗೆ ಆ ಪುಣ್ಯಾತ್ಮ‌ ಬಂದಿದ್ರು. ತಮ್ಮ ನಿಧಿಯಿಂದ ಕರಾವಳಿಗೆ ಎಷ್ಡು ಅನುದಾನ‌ ಒದಗಿಸಿದ್ರೋ ದೇವರೇ ಬಲ್ಲ... ಏನನ್ನೂ ನೀಡಿಲ್ಲ. ಆ ಬಗ್ಗೆ ಕರಾವಳಿಯ ಬಿಜೆಪಿ ಮುಖಂಡರೂ ಅವರ ಬೆನ್ನು ಬಿದ್ದಿಲ್ಲ ಅನ್ನೋದು ಬೇರೆ ವಿಚಾರ. ಅಂಥ ಅಯೋಗ್ಯ ವಿಧಾನಸಭೆ ಚುನಾವಣೆ ಹೊತ್ತಿಗೆ ಪಕ್ಷಕ್ಕೆ ಚೊಂಬು ಕೊಟ್ಟು ಆಚೆ ಹೋದ್ರು.


ಈ ಚುನಾವಣೆಯಲ್ಲಾದ್ರೂ ಪರಿಸ್ಥಿತಿ ಸರಿ ಹೋದೀತು ಅಂದ್ಕೊಂಡ್ರೆ ಮತ್ತೊಮ್ಮೆ ಕರಾವಳಿಯ ಪದವೀಧರ ಮತ್ತು ಶಿಕ್ಷಕರಿಗೆ ಪಕ್ಷ ದ್ರೋಹವೇ ಮಾಡಿ ನಿರಾಶೆಯುಂಟುಮಾಡಿದೆ.


ಆದರೆ ಇನ್ನೂ ನಾಮಪತ್ರ ಸಲ್ಲಿಕೆಗೆ ಸಮಯ ಇದೆ. ಕರಾವಳಿ ಗಂಡುಗಲಿ ಬಿಜೆಪಿ ಶಾಸಕರು ಆಗಿರುವ ಅನ್ಯಾಯವನ್ನು ಸರಿಪಡಿಸುವಂತೆ ಪಕ್ಷದ ಹೈಕಮಾಂಡ್ ನ್ನು ಆಗ್ರಹಿಸಬೇಕು. ಇಲ್ಲಾಂದ್ರೆ ಕೆಲವು ಸಾವಿರ ಬಿಜೆಪಿ ಓಟಾದ್ರೂ ಈ ಬಾರಿ ನೋಟಾ ಗ್ಯಾರಂಟಿ ಆದ್ರೆ ಅಚ್ಚರಿ ಇಲ್ಲ.


- ವಾಸುದೇವ ಭಟ್ ಪೆರಂಪಳ್ಳಿ, ಉಡುಪಿ


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top