ಅನ್ನಮಾಚಾರ್ಯರ ಕೃತಿಗಳ ಸಾಹಿತ್ಯಕ ಮೌಲ್ಯ ಅಜರಾಮರ

Chandrashekhara Kulamarva
0


ಬೆಂಗಳೂರು: ಶ್ರೀವಾರಿ ಫೌಂಡೇಶನ್ ವತಿಯಿಂದ ಬೆಂಗಳೂರು ನಗರದ ಎಚ್.ಆರ್.ಬಿ.ಆರ್ ಲೇಔಟ್ ನಲ್ಲಿ ನಡೆದ ಶ್ರೀನಿವಾಸ ಕಲ್ಯಾಣ ಮಹೋತ್ಸವದಲ್ಲಿ ಸಂಸ್ಕೃತಿ ಚಿಂತಕ, ಪ್ರಣವ ಮೀಡಿಯಾ ಹೌಸ್ ಪ್ರಕಾಶನದ ಕಾರ್ಯನಿರ್ವಾಹಕ ಡಾ. ಗುರುರಾಜ ಪೋಶೆಟ್ಟಿಹಳ್ಳಿರವರ 'ಬೆಟ್ಟದೊಡೆಯನ ಭಕ್ತಾ ಗ್ರೇಸರ ತಾಳ್ಳಪಾಕ ಅನ್ನಮಾಚಾರ್ಯ' ಕೃತಿಯನ್ನು ಕೆ.ಆರ್ ಪುರಂ ಹರಿದಾಸ ಸಂಘದ ಅಧ್ಯಕ್ಷ ಡಾ ಹ.ರಾ ನಾಗರಾಜ ಆಚಾರ್ಯ (ಜಯರಾಮ ವಿಠಲದಾಸರು) ಬಿಡುಗಡೆಗೊಳಿಸಿದರು.


ಬಳಿಕ ಮಾತನಾಡಿ, ಜನಸಾಮಾನ್ಯರ ಮನವಿಡಿವ ಗ್ರಾಮ್ಯ ಶೈಲಿಯ ತೆಲುಗು ಭಾಷೆಯಲ್ಲಿ ರಚಿತವಾದ ಭಕ್ತಿ ಪ್ರಧಾನವಾದ ಕೀರ್ತನೆಯ ಮೌಲ್ಯಗಳು ಇಂದಿಗೂ ಪ್ರಸ್ತುತ. ತಿರುಮಲೆಯ ಶ್ರೀನಿವಾಸನ ಪರಮಾನುಗ್ರಹಕ್ಕೆ ಪಾತ್ರರಾದ ವಾಗ್ಗೇಯಕಾರ ಅನ್ನಮಯ್ಯ ರವರ ಜಯಂತಿಯ ಸಂದರ್ಭದಲ್ಲಿ ಕನ್ನಡದ ಓದುಗರಿಗೆ ಪರಿಚಯವನ್ನು ಲೇಖಕ ಡಾ.ಗುರುರಾಜ ಪೋಶೆಟ್ಟಿಹಳ್ಳಿರವರ ನಿರೂಪಣೆಯಲ್ಲಿ ಸೊಗಸಾಗಿ ಮೂಡಿ ಬಂದಿದೆ ಎಂದು ತಿಳಿಸಿದರು.


ಶ್ರೀವಾರಿ ಫೌಂಡೇಶನ್ ನ ಎಸ್ ವೆಂಕಟೇಶಮೂರ್ತಿ, ಖ್ಯಾತ ಗಮಕಿ, ದಾಸ ಸಾಹಿತ್ಯ ಸಂಶೋಧಕ ಮೈಸೂರಿನ ಡಾ. ಎನ್. ಕೆ.ರಾಮಶೇಷನ್, ಗೀತಾ ಮಧ್ವರಾಜ್ ಮತ್ತು ಅಸಂಖ್ಯಾತ ಭಕ್ತ ಜನ ಸಾಕ್ಷಿಯಾದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

إرسال تعليق

0 تعليقات
إرسال تعليق (0)
To Top