ಕೇರಳ ಎಸ್‌ಎಸ್‌ಎಲ್‌ಸಿ ಫಲಿತಾಂಶ: ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠದಲ್ಲಿ 15 ಮಂದಿಗೆ ಎ ಪ್ಲಸ್

Upayuktha
0

62% ವಿದ್ಯಾರ್ಥಿಗಳಿಗೆ ಎಲ್ಲಾ 10 ವಿಷಯಗಳಲ್ಲೂ 90 ಕ್ಕಿಂತ ಅಧಿಕ ಅಂಕ



ಬದಿಯಡ್ಕ: 2023-24ನೇ ಸಾಲಿ ಕೇರಳ ರಾಜ್ಯ ಎಸ್.ಎಸ್.ಎಲ್.ಸಿ. ಪರೀಕ್ಷಾ ಫಲಿತಾಂಶ ಪ್ರಕಟಗೊಂಡಿದ್ದು, ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠದ ಎಲ್ಲಾ 24 ವಿದ್ಯಾರ್ಥಿಗಳೂ ಉತ್ತಮ ಶ್ರೇಣಿಯಲ್ಲಿ ತೇರ್ಗಡೆಗೊಂಡಿದ್ದಾರೆ. ಹದಿನೈದು ಮಂದಿ ವಿದ್ಯಾರ್ಥಿಗಳು 10 ವಿಷಯಗಳಲ್ಲಿಯೂ ಎ ಪ್ಲಸ್ ಅಂಕ, 2 ವಿದ್ಯಾರ್ಥಿಗಳು 9 ವಿಷಯಗಳಲ್ಲಿ ಎ ಪ್ಲಸ್ ಅಂಕ ಪಡೆದು ಶಾಲೆಗೆ ಹಾಗೂ ಹೆತ್ತವರಿಗೆ ಕೀರ್ತಿಯನ್ನು ತಂದಿರುತ್ತಾರೆ.


ಹತ್ತನೇ ತರಗತಿಯ ಹೆಮ್ಮೆಯ ವಿದ್ಯಾರ್ಥಿಗಳ ಭವಿಷ್ಯ ಉತ್ತಮವಾಗಿರಲಿ ಎಂದು ಶಾಲಾ ಮುಖ್ಯೋಪಾಧ್ಯಾಯರು, ಶಿಕ್ಷಕ ವೃಂದ, ಆಡಳಿತ ಮಂಡಳಿ ಹಾಗೂ ರಕ್ಷಕ ಶಿಕ್ಷಕ ಸಂಘ ಅಭಿನಂದನೆಯನ್ನು ಸಲ್ಲಿಸಿದೆ. ಎಲ್ಲಾ ಹತ್ತು ವಿಷಯಗಳಲ್ಲಿಯೂ ಎ ಪ್ಲಸ್ ಅಂಕ ಪಡೆದವರು ಎ ಬ್ರಿಜೇಶ್ ಮೋಹನ್, ಶ್ರೀಕೃಷ್ಣ ಶರ್ಮ ಎ, ಶ್ರೀಶ ಎಮ್, ಶ್ರೀವತ್ಸ ಎಮ್ ಜೆ, ತನುಶ್ ರೈ ಜಿ, ತೇಜಸ್ ರೈ, ತೇಜಸ್ವಿ ಕೆ, ಎ ಸ್ಮೃತಿ, ಆರಾಧ್ಯ ರೈ ಕೆ, ಧರಣಿ ಎಸ್, ಧೃತಿ ಭಟ್ ಕೆ, ಲಕ್ಷ್ಯ ಎಂ ಶೆಟ್ಟಿ, ಸುಮೇಧಾ ಕೆ, ಸ್ವಸ್ತಿ ಕುಳೂರು, ವೈಶಾಲಿ ವಿ ಹಾಗೂ ಪೂಜಶ್ರೀ ಮತ್ತು ಪ್ರಣವಿ ಕೆ. 9 ವಿಷಯಗಳಲ್ಲಿ ಎಪ್ಲಸ್ ಅಂಕ ಪಡೆದಿರುತ್ತಾರೆ.


ಮುಜುಂಗಾವು ಶ್ರೀ ಭಾರತೀ ವಿದ್ಯಾಪೀಠಕ್ಕೆ 100 ಶೇಕಡಾ ಫಲಿತಾಂಶ

ಮುಜುಂಗಾವು: 2023-24 ನೆಯ ಸಾಲಿನ ಕೇರಳ ರಾಜ್ಯ ಎಸ್.ಎಸ್.ಎಲ್.ಸಿ ಫಲಿತಾಂಶ ಪ್ರಕಟಗೊಂಡಿದ್ದು ಮುಜುಂಗಾವು ಶ್ರೀ ಭಾರತೀ ವಿದ್ಯಾಪೀಠದ ಎಲ್ಲಾ ವಿದ್ಯಾರ್ಥಿಗಳು ಯಾವುದೇ ಗ್ರೇಸ್ ಮಾರ್ಕ್ ಇಲ್ಲದೆ ಉತ್ತಮ ಶ್ರೇಣಿಯಲ್ಲಿ ಉತ್ತೀರ್ಣಗೊಂಡು ಶಾಲೆಗೆ ಹಾಗೂ ಹೆತ್ತವರಿಗೆ ಕೀರ್ತಿ ತಂದಿರುತ್ತಾರೆ. ಶಾಲೆಯ ಹೆಮ್ಮೆಯ ಸಾಧಕ ವಿದ್ಯಾರ್ಥಿಗಳಿಗೆ ಮುಖ್ಯೋಪಾಧ್ಯಾಯರು, ಶಿಕ್ಷಕ ವೃಂದ, ಆಡಳಿತ ಮಂಡಳಿ, ಹಾಗೂ ರಕ್ಷಕ ಶಿಕ್ಷಕ ಸಂಘ ಅಭಿನಂದನೆ ಸಲ್ಲಿಸಿರುತ್ತಾರೆ.



Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top