ಮಂಜೇಶ್ವರ: ಧರ್ಮತ್ತಡ್ಕ ಶ್ರೀ ದುರ್ಗಾಪರಮೇಶ್ವರಿ ಪ್ರೌಢಶಾಲೆಯಲ್ಲಿ 2023-24ನೇ ಸಾಲಿನ ಎಸ್ಸೆಸ್‌ಎಲ್‌ಸಿ ಪರೀಕ್ಷೆಗೆ ಹಾಜರಾದ ಎಲ್ಲ ಮಕ್ಕಳೂ ಉತ್ತೀರ್ಣಗೊಂಡಿದ್ದು ಶಾಲೆ ಶೇ 100ರ ಫಲಿತಾಂಶವನ್ನು ದಾಖಲಿಸಿದೆ.
ಮಂಜೇಶ್ವರ ಉಪಜಿಲ್ಲೆಯಲ್ಲಿ ಅತೀ ಹೆಚ್ಚು ಮಕ್ಕಳು (247) ಪರೀಕ್ಷೆಗೆ ಹಾಜರಾಗಿ ಎಲ್ಲ ಮಕ್ಕಳೂ ತೇರ್ಗಡೆ ಹೊಂದಿ, ಅತ್ಯುತ್ತಮ ಅಂಕಗಳನ್ನೂ ಗಳಿಸಿ, ಅದರಲ್ಲೂ 27 ಮಂದಿ ಎಲ್ಲ ವಿಷಯಗಳಲ್ಲೂ A+ grade ಪಡೆದು, 16 ಮಂದಿ 9 ವಿಷಯಗಳಲ್ಲಿ A+ ಪಡೆದು ಶಾಲೆಗೆ ಅತ್ಯುತ್ತಮ ಫಲಿತಾಂಶ ತಂದಿದ್ದಾರೆ. ಇದಕ್ಕಾಗಿ ಶಕ್ತಿ ಮೀರಿ ಪ್ರಯತ್ನಿಸಿದ ಶಾಲಾ ಮುಖ್ಯೋಪಾಧ್ಯಾಯರು, ಅಧ್ಯಾಪಕ, ಅಧ್ಯಾಪಕೇತರ ವೃಂದ, ಪರೀಕ್ಷೆ ಬರೆದ ಮಕ್ಕಳು, ರಕ್ಷಕರು ಹಾಗೂ ಪ್ರೋತ್ಸಾಹಿಸಿದ ಎಲ್ಲರಿಗೂ ಶಾಲಾ ಆಡಳಿತ ಮಂಡಳಿ ಅಭಿನಂದನೆ ಸಲ್ಲಿಸಿದೆ.
ಇದೇ ರೀತಿಯ ಉತ್ತಮ ಫಲಿತಾಂಶ ಮುಂದೆಯೂ ಬರುವಂತಾಗಿ ಮಂಜೇಶ್ವರ ಉಪಜಿಲ್ಲೆಯಲ್ಲಿ No.1 ಶಾಲೆ ಎಂಬ ಖ್ಯಾತಿಯು ಮುಂದುವರಿಯುವಂತಾಗಲಿ ಎಂದು ಆಡಳಿತ ಮಂಡಳಿ ಹಾರೈಸಿದೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ