ಕಾವೂರು ಶ್ರೀ ಗುರು ರಾಘವೇಂದ್ರ ಮಠದಲ್ಲಿ ವಸಂತ ವೇದಶಿಬಿರ ಉದ್ಘಾಟನೆ

Upayuktha
0


ಮಂಗಳೂರು: ಶಿವಳ್ಳಿ ಸ್ಪಂದನ ವತಿಯಿಂದ ಕಾವೂರು ವಲಯದ ಸಹಯೋಗದೊಂದಿಗೆ ಅಂಬಿಕಾ ನಗರ ಕಾವೂರಿನ ಶ್ರೀ ಗುರು ರಾಘವೇಂದ್ರ ಮಠದಲ್ಲಿ ಆಯೋಜಿಸಲಾದ ವಸಂತ ವೇದ ಶಿಬಿರವನ್ನು ಪಲಿಮಾರು ಮಠಾಧೀಶ ಶ್ರೀ ಶ್ರೀ ವಿದ್ಯಾಧೀಶ ಸ್ವಾಮೀಜಿ ಉದ್ಘಾಟಿಸಿದರು.

ಎಲ್ಲರೂ ಎಳವೆಯಿಂದಲೇ ಸಂಸ್ಕಾರವನ್ನು ರೂಢಿಸಿಕೊಂಡು ಬಲವರ್ಧಿತವಾಗಬೇಕು ಎಂದು ಸ್ವಾಮೀಜಿ ಹೇಳಿದರು.

ಉದ್ಘಾಟನಾ ಸಮಾರಂಭದಲ್ಲಿ ಕಾವೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಅರ್ಚಕ ವೇದಮೂರ್ತಿ ಶ್ರೀನಿವಾಸ್ ಭಟ್, ವಿದ್ವಾನ್ ಶ್ರೀಕರ ಭಟ್, ನವೀನ್ ಚಂದ್ರ ಭಟ್ ಕೊಂಚಾಡಿ, ಕೆ ಸುದರ್ಶನ ಬನ್ನಿಂತಾಯ, ವಿದ್ವಾನ್ ಶೇಷಗಿರಿ ಆಚಾರ್ಯ, ಶಿವಳ್ಳಿ ಸ್ಪಂದನದ ಅಧ್ಯಕ್ಷ ಕೆ ಕೃಷ್ಣ ಭಟ್, ಕಾರ್ಯದರ್ಶಿ ಉದಯಶಂಕರ ಬಿ, ಉಪಾಧ್ಯಕ್ಷ ಕೆ ವಾಸುದೇವ ಭಟ್, ಸಂಘಟನಾ ಕಾರ್ಯದರ್ಶಿಗಳಾದ ರವೀಶ್ ನಾರ್ಷ, ಪ್ರದೀಪ್ ಕುಮಾರ್, ಜತೆ ಕಾರ್ಯದರ್ಶಿ ಸುಬ್ರಹ್ಮಣ್ಯ ಭಟ್ ಉಪಸ್ಥಿತರಿದ್ದರು‌.


ಕಾವೂರು ವಲಯದ ಅಧ್ಯಕ್ಷ ಅರವಿಂದ ಹೆಬ್ಬಾರ್ ಸ್ವಾಗತಿಸಿದರು.  ಚಂದ್ರಿಕಾ ಸುರೇಶ್ ವಂದಿಸಿದರು. ಕಾವೂರು ವಲಯದ ಕೋಶಾಧಿಕಾರಿ ದಾಮೋದರ ಆಚಾರ್ಯ ಮತ್ರು ರಂಗನಾಥ ಅಂಗಿತಾಯ  ನಿರೂಪಿಸಿದರು.

ನೂರಕ್ಕೂ ಹೆಚ್ಚು ಬಾಲಕ ಬಾಲಕಿಯರು ಈ ಶಿಬಿರದಲ್ಲಿ ಭಾಗವಹಿಸುತ್ತಿದ್ದಾರೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top