ಬಿದ್ಕಲ್‌ಕಟ್ಟೆ: ಹೋಂ ಡಾಕ್ಟರ್ ಫೌಂಡೇಶನ್ ವತಿಯಿಂದ ಮನೆ ಹಸ್ತಾಂತರ

Upayuktha
0


ಬಿದ್ಕಲ್ ಕಟ್ಟೆ: ಹೋಂ ಡಾಕ್ಟರ್ ಫೌಂಡೇಶನ್ ಉಡುಪಿ ಇದರ ವತಿಯಿಂದ ಕಳೆದ 8 ವರ್ಷಗಳಿಂದ ಮನೆಯಿಲ್ಲದೆ ಸಣ್ಣ ಜೋಪಡಿಯಲ್ಲಿ ವಾಸವಾಗಿದ್ದ ರಾಮ ಮತ್ತು ಮಗಳಾದ ಸುಮತಿಯವರಿಗೆ ಫೌಂಡೇಶನ್ ವತಿಯಿಂದ ನಿರ್ಮಿಸಲಾದ ರಾಮ ನಿಲಯ ನೂತನ ಮನೆಯ ಉದ್ಘಾಟನೆ ಮೇ 12 ರಂದು ನಡೆಯಿತು.


ಉದ್ಘಾಟನೆ ನೆರವೇರಿಸಿ ಮಾತನಾಡಿದ ಸೇವ್ ಲೈಫ್ ಚಾರಿಟೇಬಲ್ ಟ್ರಸ್ಟ್ ಮುಖ್ಯಸ್ಥರಾದ ಅಜು೯ನ್ ಭoಡಾರ್ಕಾರ್ ಮಾತನಾಡಿ, ಈ ರೀತಿಯ ಸಮಾಜದಲ್ಲಿ ಯಾವುದೇ ಮೂಲಭೂತ ಸೌಕರ್ಯವಿಲ್ಲದೆ ಸಮಾಜದ ಮುಖ್ಯವಾಹಿನಿ ಬರಲಾಗದೆ ಕಷ್ಟ ಪಡುವವರನ್ನು ಗುರುತಿಸಿ ಸೇವೆ ಮಾಡುವುದು ಇoದಿನ ಅಗತ್ಯವಾಗಿದೆ ಎಂದರು. ಮುಂದಿನ ದಿನಗಳಲ್ಲಿ 200 ಕುಟುಂಬಗಳಿಗೆ ಸಹಾಯಧನ ನೀಡುವ ಕಾಯ೯ಕ್ರಮ ನಡೆಯಲಿದೆ ಎಂದರು.


ಹೋಂ ಡಾಕ್ಟರ್ ಫೌಂಡೇಶನ್ ನ ಮುಖ್ಯಸ್ಥರಾದ ಡಾ. ಶಶಿಕಿರಣ್ ಶೆಟ್ಟಿ ಸಂಸ್ಥೆಯ ವಿವಿಧ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು. ಈ ಸಂದರ್ಭ ಬಡ ಪ್ರತಿಭಾನ್ವಿತ ವಿದ್ಯಾರ್ಥಿನಿಯ ಶಾಲಾ ಶುಲ್ಕ ಸೇರಿದಂತೆ ವಿವಿಧ ಸಹಾಯಧನ ನೀಡಲಾಯಿತು.


ಈ ಸಂದಭ೯ದಲ್ಲಿ ಡಾ. ಸುಮಾ ಎಸ್ ಶೆಟ್ಟಿ, ಸೇವ್ ಲೈಫ್ ಚಾರಿಟೇಬಲ್ ಟ್ರಸ್ಟ್ ನ ಭಾಗ್ಯಶ್ರೀ ಭಂಡಾರ್ಕರ್, ರಾಘವೇಂದ್ರ ಪೂಜಾರಿ, ಬಂಗಾರಪ್ಪ, ಉದಯ ನಾಯ್ಕ್, ರಾಘವೇಂದ್ರ ಪ್ರಭು ಕವಾ೯ಲು, ಸುಜಯ ಶೆಟ್ಟಿ, ಸ್ವರೂಪ ಹೆಗ್ಡೆ ಕಿಶೋರ್ ಶೆಟ್ಟಿ, ರಾಮು ಸುಮತಿ ಹಾಗೂ ಫೌಂಡೇಶನ್ ಸದಸ್ಯರು ಉಪಸ್ಥಿತರಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top