|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಅಕ್ಷಯ ತೃತೀಯ ದಿನದ ಸಂಭ್ರಮದಲ್ಲಿ ಮಾತೆಯರ ದಿನಾಚರಣೆ

ಅಕ್ಷಯ ತೃತೀಯ ದಿನದ ಸಂಭ್ರಮದಲ್ಲಿ ಮಾತೆಯರ ದಿನಾಚರಣೆ



ಹಾಸನ: ಹಾಸನದ ರಂಗೋಲಿ ಹಳ್ಳದಲ್ಲಿ ಬುಧವಾರ (ಮೇ 8) ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ಅದ್ದೂರಿಯಾಗಿ ಅಕ್ಷಯ ತೃತೀಯ ದಿನದ ಸಂಭ್ರಮವನ್ನು ಹಾಗೂ ಮಾತೆಯರ ದಿನಾಚರಣೆಯನ್ನು ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ರಾಜಯೋಗಿನಿ ಬಿ. ಕೆ. ವೀಣಾ ರವರು  ವಹಿಸಿದ್ದು ಮಾತೆಯರಿಗೆ ಭಕ್ತಿ ಮಾರ್ಗ, ಮುಕ್ತಿ ಮಾರ್ಗ, ಹಲವು ಮಾರ್ಗಗಳ ಬಗ್ಗೆ ವಿಚಾರಗಳನ್ನು ತಿಳಿಸಿದರು.


ಶ್ರೀ ದಾದಾ ಲೇಖರಾಜ್ ರವರ ಬಗ್ಗೆ ಮಾಹಿತಿ ನೀಡಿ ಪಾಪ ವಿಮೋಚನೆಯನ್ನು ಯಾವ ರೀತಿ ಧ್ಯಾನದ ಮುಖಾಂತರ, ಭಕ್ತಿಯ ಮುಖಾಂತರ ಪಡೆಯಬಹುದು ಎಂದು ತಿಳಿಸಿದರು.


ಮುಖ್ಯ ಅತಿಥಿಯಾಗಿ ಭಾಗವಹಿಸಿದ ಸಾಹಿತಿ, ಶಿಕ್ಷಕಿ ಹೆಚ್. ಎಸ್. ಪ್ರತಿಮಾ ಹಾಸನ್, ಮಾತೆಯರು ಸರ್ವಶಕ್ತಿಯನ್ನು ಹೊಂದಿರುವವರು. ಅವರು ತಮ್ಮದೇ ಆದ ವ್ಯಕ್ತಿತ್ವವನ್ನು ಒಳಗೊಂಡಿದ್ದು, ಮುಂದಿನ ಪೀಳಿಗೆಗೆ  ಮಾರ್ಗದರ್ಶಕರು ಎಂದು ಹೇಳಿದರು. ನಂತರ ರಾಣಿ ಚರಾಶ್ರೀ ರವರು ನಮ್ಮ ಪಾಪಗಳು ಕಡಿಮೆಯಾದ್ದರಿಂದ ಈ ಸ್ಥಳಕ್ಕೆ ಬಂದಿದ್ದೇವೆ ಎಂದು ತಿಳಿಸಿದರು. ಶ್ರೀಮತಿ ವೀಣಾ ಹರೀಶ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಕಾರ್ಯಕ್ರಮದಲ್ಲಿ ನೃತ್ಯದ ಮುಖಾಂತರ ಕು. ಟೀಷ್ಮಾ ಗೌಡ ಕೆ.ಆರ್., ಮೋಹಲ್ ಗೌಡ ಕೆ. ಆರ್. ಪ್ರಾರ್ಥನೆ ನೆರವೇರಿಸಿದರು. ಹಾಸನದ ಬೆನಕ ಕಲಾ ಸೌರಭ ಪಂಚಭೂತಗಳ ನೃತ್ಯ ಮತ್ತು ಪಂಚ ಯುಗಗಳ ಕೋಲಾಟ ಕಾರ್ಯಕ್ರಮವನ್ನು ನೀಡಿದರು. ಕಾರ್ಯಕ್ರಮದ ನಿರ್ವಹಣೆ, ನಿರೂಪಣೆಯನ್ನು ಹೆಚ್. ಎಸ್. ಪ್ರತಿಮಾ ಹಾಸನ್ ನಡೆಸಿಕೊಟ್ಟರು.

ಕಾರ್ಯಕ್ರಮದ ಆಯೋಜಕರಾದ ಬಿ. ಕೆ.ಸರಳರವರು ಎಲ್ಲರಿಗೂ ಶುಭ ಕೋರಿದರು.  


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

0 Comments

Post a Comment

Post a Comment (0)

Previous Post Next Post