ಕಾನೂನಿಗೆ ತಲೆ ಬಾಗಿ ರೇವಣ್ಣ ಎಸ್‌ಐಟಿಗೆ ಶರಣಾಗಿದ್ದಾರೆ: ಯಡಿಯೂರಪ್ಪ

Upayuktha
0



ಬೆಂಗಳೂರು: ಮಹಿಳೆ ಅಪಹರಣ ಮತ್ತು ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣದಲ್ಲಿ ಎಸ್‌ಐಟಿಯಿಂದ ಬಂಧನಕ್ಕೆ ಒಳಗಾಗಿರುವ ಮಾಜಿ ಸಚಿವ ಎಚ್‌.ಡಿ.ರೇವಣ್ಣ ಹಾಗೂ ಅವರ ಮಗ ಪ್ರಜ್ವಲ್‌ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿದ ಮಾಜಿ ಸಿಎಂ ಯಡಿಯೂರಪ್ಪ, ಕಾನೂನಿನ ಪ್ರಕಾರವೇ ಎಲ್ಲ ಕ್ರಮಗಳು ಜರುಗುತ್ತವೆ, ಕಾನೂನಿಗೆ ತಲೆ ಬಾಗಿ ರೇವಣ್ಣ ಎಸ್‌ಐಟಿಗೆ ಶರಣಾಗಿದ್ದಾರೆ ಎಂದು ತಿಳಿಸಿದ್ದಾರೆ.


ಕಾನೂನಿಗಿಂತ ಯಾರೂ ದೊಡ್ಡವರಲ್ಲ. ತಪ್ಪು ಮಾಡಿದ್ದರೆ ಶಿಕ್ಷೆಯಾಗಬೇಕೆಂದು ಸ್ವತಃ ಕುಮಾರಸ್ವಾಮಿಯವರೇ ಹೇಳಿದ್ದಾರೆ. ಕಾನೂನಿಗೆ ತಲೆ ಬಾಗಿ ರೇವಣ್ಣ ಎಸ್‌ಐಟಿಗೆ ಶರಣಾಗಿದ್ದಾರೆ.ಮುಂದೆ ಕಾನೂನು ಪ್ರಕ್ರಿಯೆಗಳು ನಡೆಯುತ್ತವೆ ಎಂದರು.


ಇಂತಹ ಇಳಿ ವಯಸ್ಸಿನಲ್ಲಿ ಮಾಜಿ ಪ್ರಧಾನಿ ದೇವೇಗೌಡರಿಗೆ ನೋವು ತರಿಸುವ ಘಟನೆ ನಡೆದಿದ್ದು ತುಂಬಾ ಬೇಸರ ತಂದಿದೆ ಎಂದ ಯಡಿಯೂರಪ್ಪ. ಆದಷ್ಟು ಬೇಗ ಸತ್ಯಾಂಶ ಹೊರಬರಬೇಕು. ಗೌಡರು ಇದರ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳಬಾರದು. ಅವರು ತಮ್ಮ ಆರೋಗ್ಯದ ಕಡೆ ಗಮನಹರಿಸಲಿ ಎಂದು ಮನವಿ ಮಾಡಿದರು.


  ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter   

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top