ಗೋವಾ ಭಾರತ ಮಾತೆಯ ಹಣೆಯ ಬಿಂದಿಯಂತೆ: ಅಮಿತ್ ಶಾ

Upayuktha
0

ಪಣಜಿ: ಗೋವಾ ರಾಜ್ಯವು ಭಾರತ ಮಾತೆಯ ಹಣೆಯ ಮೇಲಿನ ಬಿಂದಿಯಿದ್ದಂತೆ, ರಾಜ್ಯವು ಎಷ್ಟೇ ಚಿಕ್ಕದಾಗಿದ್ದರೂ ಅದು ಭಾರತದ ಒಂದು ಭಾಗವೇ ಆಗಿದೆ. ಗೋವಾ ರಾಜ್ಯವು ಚಿಕ್ಕ ರಾಜ್ಯವಾಗಿದ್ದರೂ ಕೂಡ ಭಾರತದ ಹೃದಯವಾಗಿದೆ. ಕಾಂಗ್ರೆಸ್‍ನ ಖರ್ಗೆ ಅವರು ಚಿಕ್ಕ ರಾಜ್ಯಕ್ಕೆ ಮಹತ್ವ ನೀಡುವುದಿಲ್ಲ ಎಂದು ಕೇಂದ್ರ ಗೃಹಮಂತ್ರಿ ಅಮಿತ್ ಶಾ ನುಡಿದರು.


ಉತ್ತರ ಗೋವಾದ ಮಾಪ್ಸಾದಲ್ಲಿ ಆಯೋಜಿಸಿದ್ದ ಬಿಜೆಪಿ ಬೃಹತ್ ಪ್ರಚಾರ ಸಭೆಯನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರು. ಉತ್ತರ ಗೋವಾದಲ್ಲಿ ಹಾಲಿ ಕೇಂದ್ರ ಸಂಸದ ಶ್ರೀಪಾದ ನಾಯ್ಕ ರವರು ಬಿಜೆಪಿಯಿಂದ ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ ಸ್ಫರ್ಧಿಸಿದ್ದಾರೆ. ಗೋವಾದಲ್ಲಿ ಕಳೆದ ಹಲವು ವರ್ಷಗಳಿಂದ ಶ್ರೀಪಾದ ನಾಯ್ಕ ರವರು ಹಲವು ಅಭಿವೃದ್ಧಿ ಯೋಜನೆಗಳನ್ನು ಕೈಗೊಂಡಿದ್ದಾರೆ. ಅಂತೆಯೇ ದಕ್ಷಿಣ ಗೋವಾದಲ್ಲಿ ಪಲ್ಲವಿ ದೆಂಪೊ ರವರು ಬಿಜೆಪಿಯಿಂದ ಸ್ಫರ್ಧಿಸಿದ್ದಾರೆ. ಈ ಎರಡೂ ಅಭ್ಯರ್ಥಿಗಳನ್ನು ಬಹುಮತ ನೀಡಿ ಆಯ್ಕೆ ಮಾಡಿ ಮೂರನೇ ಬಾರಿ ನರೇಂದ್ರ ಮೋದಿಯವರು ಪ್ರಧಾನಿಯಾಗಲು ನಿಮ್ಮ ಮತ ನೀಡಿ. ಈ ಮೂಲಕ ಪ್ರಸಕ್ತ ಬಾರಿ ಬಿಜೆಪಿ 405 ಸ್ಥಾನ ಗೆದ್ದು ಮತ್ತೊಮ್ಮೆ ಅಧಿಕಾರಕ್ಕೆ ಬರುವಂತೆ ಮಾಡಿ ಅಂದು ಅಮಿತ್ ಶಾ ಗೋವಾ ಮತದಾರರ ಬಳಿ ಮನವಿ ಮಾಡಿದರು.


ಕೇಂದ್ರದಲ್ಲಿ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಜಗತ್ತಿನಲ್ಲಿ ಭಾರತವು ನಂಬರ್ 1 ಆಗಲಿದೆ. ಯಾರು ದೇಶವನ್ನು ಸುರಕ್ಷಿತವಾಗಿಡುತ್ತಾರೆ ಎಂದು ನೀವು ಕಣ್ಣು ಮುಚ್ಚಿ ಐದು ನಿಮಿಷ ಯೋಚಿಸಿದರೆ ಒಂದೇ ಒಂದು ಉತ್ತರ ಸಿಗುತ್ತದೆ, ಅದು ನರೇಂದ್ರ ಮೋದಿ. ನರೇಂದ್ರ ಮೋದಿ ಎಂಬ ಉತ್ತರ ಲಭಿಸುತ್ತದೆ. ಪ್ರಧಾನಿ ನರೇಂದ್ರ ಮೋದಿಯವರಿಂದ ದೇಶಕ್ಕೆ ಮಾನ ಸಮ್ಮಾನ ಲಭಿಸಿದೆ, ಜನತೆ ಸುರಕ್ಷಿತವಾಗಿರಲಿದ್ದಾರೆ. ಇದರಿಂದಾಗಿ ಗೋವಾದ ಎರಡೂ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಜಯಶಾಲಿಗಳನ್ನಾಗಿಸಿ ಮೋದಿಯವರನ್ನು ಮತ್ತೊಮ್ಮೆ ಪ್ರಧಾನಿಯನ್ನಾಗಿ ಮಾಡಿ ಎಂದು ಅಮಿತ್ ಶಾ ಮನವಿ ಮಾಡಿದರು.  


ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಗೋವಾ ಮುಖ್ಯಮಂತ್ರಿ ಪ್ರಮೋದ ಸಾವಂತ್ ಮಾತನಾಡಿ- ಗೋವಾ ರಾಜ್ಯವನ್ನು ಕಾಂಗ್ರೆಸ್ ಪಕ್ಷವು ಎಂದೂ ಕೂಡ ಗಂಭೀರವಾಗಿ ಪರಿಗಣಿಸಿಲ್ಲ. ಪ್ರಸಕ್ತ ಚುನಾವಣೆಯಲ್ಲಿ ಕಾಂಗ್ರೆಸ್ ನಾಯಕರು ಯಾರೂ ಇಲ್ಲಿ ಆಗಮಿಸಿ ಪ್ರಚಾರ ಸಭೆ ನಡೆಸಿಲ್ಲ. ಕಾಂಗ್ರೆಸ್ ಪಕ್ಷವು ಉತ್ತರ ಗೋವಾಕ್ಕೆ ಬ್ಯಾಂಕ್ ಲೂಟಿಕೋರರಿಗೆ ಟಿಕೇಟ್ ನೀಡಿದೆ ಎಂದು ವಾಗ್ದಾಳಿ ನಡೆಸಿದರು.


ಈ ಸಂದರ್ಭದಲ್ಲಿ ಉತ್ತರ ಗೋವಾ ಬಿಜೆಪಿ ಅಭ್ಯರ್ಥಿ ಶ್ರೀಪಾದ ನಾಯ್ಕ, ದಕ್ಷಿಣ ಗೋವಾ ಅಭ್ಯರ್ಥಿ ಪಲ್ಲವಿ ದೆಂಪೊ, ಬಿಜೆಪಿ ರಾಜ್ಯಾಧ್ಯಕ್ಷ ಸದಾನಂದ ತಾನಾವಡೆ, ಸೇರಿದಂತೆ ಬಿಜೆಪಿ ಸಚಿವರು, ಶಾಸಕರು ವೇದಿಕೆಯ ಮೇಲೆ ಉಪಸ್ಥಿತರಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  


إرسال تعليق

0 تعليقات
إرسال تعليق (0)
Maruti Suzuki Festival of Colours
Maruti Suzuki Festival of Colours
To Top