ಕಿಳಿಂಗಾರು ಸಾಯಿರಾಂ ಕೃಷ್ಣ ಭಟ್ಟರಿಂದ ಬಡಜನತೆಗೆ ಆರ್ಥಿಕ ನೆರವು

Upayuktha
0


ಬದಿಯಡ್ಕ: ಕಿಳಿಂಗಾರು ಸಾಯಿರಾಂ ಗೋಪಾಲಕೃಷ್ಣ ಭಟ್ ಅವರ ನಂತರ ಪುತ್ರ ಸಾಯಿರಾಂ ಕೃಷ್ಣ ಭಟ್ ಅವರು ತಂದೆಯ ಸೇವಾಕಾರ್ಯವನ್ನು ಮುಂದುವರಿಸಿಕೊಂಡಿದ್ದಾರೆ. ಈ ನಿಟ್ಟಿನಲ್ಲಿ ಭಾನುವಾರ ತಮ್ಮ ಮನೆಯಲ್ಲಿ ಜರಗಿದ ಪೂಜಾದಿ ಕಾರ್ಯಗಳ ಸಂದರ್ಭದಲ್ಲಿ ಬಡಜನತೆಗೆ ಆರ್ಥಿಕ ಸಹಕಾರವನ್ನು ನೀಡಿದ್ದಾರೆ.


ಯೋಗೀಶ್ ಆಚಾರ್ಯ ವರ್ಕಾಡಿ ಅವರಿಗೆ ಚಿಕಿತ್ಸೆಗೆ, ಲೀಲಾ ಬಾಡೂರುಪದವು ಅವರ ಮಕ್ಕಳ ವಿದ್ಯಾಭ್ಯಾಸಕ್ಕೆ, ಆಯಿಶತ್ ಮಾಜಿದಾ ಮಜಿರ್ಪಳ್ಳಕಟ್ಟೆ ಇವರ ವಿದ್ಯಾಭ್ಯಾಸಕ್ಕೆ ಹಾಗೂ ಸವಿತಾ ಕಿದೂರು ಎಂಬವರಿಗೆ ಧನಸಹಾಯವನ್ನು ನೀಡಲಾಗಿದೆ.


ಹಿರಿಯರಾದ ಕಿಳಿಂಗಾರು ನಡುಮನೆ ವೇದಮೂರ್ತಿ ಗೋಪಾಲಕೃಷ್ಣ ಭಟ್, ವೇದಮೂರ್ತಿ ಮಹಾಲಿಂಗೇಶ್ವರ ಭಟ್ ಮಣಿಮುಂಡ, ವಿಷ್ಣುಭಟ್ ಮಂಗಳೂರು, ಶಾರದಾ ಸಾಯಿರಾಂ ಭಟ್, ನಿವೃತ್ತ ಅಧ್ಯಾಪಕ ಈಶ್ವರ ಭಟ್ ಕಾನ, ವೇಣುಗೋಪಾಲ ಕಿಳಿಂಗಾರು, ಸಂದೇಶ ವಾರಣಾಸಿ, ಶಿವಕುಮಾರ, ಸಂಜೀವ ರೈ ಮಾವಿನಕಟ್ಟೆ ಉಪಸ್ಥಿತರಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

 

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top