ಸಂಸಾರ ಸೂತ್ರ: ಉತ್ತಮ ಸ್ನೇಹಿತರಾದರೆ ಮಾತ್ರ ಆದರ್ಶ ದಂಪತಿಗಳಾಗಲು ಸಾಧ್ಯ

Upayuktha
0


ಸುಖ ಸಂಸಾರಕ್ಕೆ ಕೆಲವು ಸೂತ್ರಗಳು ಅಗತ್ಯ. ಹಾಗಂತ ಎಲ್ಲವನ್ನು ಪುಸ್ತಕದಲ್ಲೇ ಓದಿ ತಿಳಿಯಬೇಕಿಲ್ಲ. ಹಳೆ ಕಾಲದಲ್ಲಿ ಯಾವ ಪುಸ್ತಕ, ಲೇಖನ, ಸಿನಿಮಾ ನೋಡದಿದ್ದರೂ ಅನ್ಯೋನ್ಯವಾಗಿ ನೂರ್ಕಾಲ ಸಂಸಾರ ಮಾಡಿದನ್ನು ಕಂಡಿದ್ದೀವೆ. ಆದರ್ಶ ದಂಪತಿಗಳಾಗಲು ಮೂಲ ಬುನಾದಿ ಅಂದ್ರೆ ನಂಬಿಕೆ. ಒಬ್ಬರನ್ನೊಬ್ಬರು ಪ್ರೀತಿಸುವದರ ಜೊತೆಗೆ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡು ನಂಬಿಕೆ, ಕಾಳಜಿ, ವಿಶ್ವಾಸದಿಂದ ಜೊತೆ ಜೊತೆಯಾಗಿ ಹೆಜ್ಜೆ ಹಾಕಿದರೆ ಅದೇ ಸುಖಿ ಸಂಸಾರ. ಅವರೇ ಆದರ್ಶ ದಂಪತಿಗಳು. ದಾಂಪತ್ಯದಲ್ಲಿ ಹೊಂದಾಣಿಕೆ ಬರಲು ಮೊದಲು ಗಂಡ ಹೆಂಡತಿ ಉತ್ತಮ ಸ್ನೇಹಿತರಗಬೇಕು. ದಾಂಪತ್ಯ ಎಂಬುದು ಬದುಕಿನ ಒಂದು ಮುಖ್ಯವಾದ ಮತ್ತು ಅಮೂಲ್ಯವಾದ ಘಟ್ಟ. ಪ್ರತಿ ಸಂಧರ್ಭದಲ್ಲೂ ಗಂಡ ಹೆಂಡತಿ ಹೊಂದಾಣಿಕೆಯಿಂದ ನಡೆದರೆ ಆಗ ಸಂಸಾರ ಸುಂದರವಾಗಿ, ಸುಗಮವಾಗಿ ಸಾಗುತ್ತೆ. ದಾಂಪತ್ಯದಲ್ಲಿ ಒಬ್ಬರನ್ನೊಬ್ಬರು ಹೊಂದುಕೊಂಡು ನಡೆಯುವದು ಅಷ್ಟು ಸುಲಭ ಮಾತಲ್ಲ. ಹಲವಾರು ಅಡ್ಡಿ ಆತಂಕಗಳು ಬರುತ್ತವೆ. ಅದೆಲ್ಲವನ್ನೂ ಸ್ವೀಕರಿಸಿ, ಎದುರಿಸಿ ಜೀವನವೆಂಬ ಹಾದಿಯಲ್ಲಿ ನಡೆಯಬೇಕಾಗುತ್ತೆ. ಆಗ ಮಾತ್ರ ನೆಮ್ಮದಿಯ ಜೀವನ ನಡೆಸಲು ಸಾಧ್ಯ.


ಹೀಗೆ ಸಂಸಾರ ಯಾವ ಅಡೆ ತಡೆ ಇಲ್ಲದೆ ನೆಮ್ಮದಿ ಇಂದ ಸಾಗಬೇಕು ಅಂದ್ರೆ ದಂಪತಿಗಳು ತಮ್ಮಲ್ಲೇ ಕೆಲವು ಸಣ್ಣ ಪುಟ್ಟ ಬದಲಾವಣೆಗಳನ್ನ ಮಾಡ್ಕೊಳ್ಬೇಕಾಗುತ್ತೆ. ಹಾಗಂತ ದೊಡ್ಡ ಸಾಧನೆ ಏನು ಮಾಡ್ಬೇಕಾಗಿಲ್ಲ. ದಿನಚರಿಯಲ್ಲಿ ಸ್ವಲ್ಪ ಬದಲಾವಣೆ ಮಾಡಿಕೊಂಡ್ರೆ ಸಾಕು. ಒಬ್ಬರ ಇಷ್ಟ ಮತ್ತೊಬ್ಬರು ಅರ್ಥ ಮಾಡ್ಕೊಂಡು ನಡೆದರೆ ಸಾಕು. ಆ ಬದಲಾವಣೆ ಹೇಗಿರಬೇಕು ಈ ಕೆಳಗೆ ಓದಿ. ಇದು ನನ್ನ ಅನುಭವದ ಮಾತು ಕೂಡ ಹೌದು.


1: ಆಗಾಗ ಅವರಿಷ್ಟದ ಅಡುಗೆ ಮಾಡಿ ಬಡಿಸಿ:

ಅಡುಗೆ ಮನೆ ಎಂದ ತಕ್ಷಣ ಈ ಕೋಣೆ ಹೆಣ್ಣುಮಕ್ಕಳಿಗೆ ಮಾತ್ರ ಸೀಮಿತ ಎನ್ನುವ ಕಾಂನ್ಸೆಪ್ಟ್ ಮೊದಲು ಗಂಡಂದಿರು ತಲೆಯಿಂದ ತಗೆದು ಹಾಕಿ. ಹೆಂಡತಿ ಆದವಳು ಗಂಡನ ಸರಿ ಸಮಾನ ಹೊರಗೆ ಹೋಗಿ ಕೆಲಸ ಮಾಡುವದಾದ್ರೆ ಗಂಡ ಯಾಕೆ ಅಡುಗೆ ಮನೆಲಿ ಸಹಾಯ ಮಾಡಬಾರದು ಅಲ್ವಾ? ಯಾವಾಗಾದ್ರೂ ಅಡುಗೆ ಮನೆಗೆ ಗಂಡಂದಿರು ಹೋಗಿದ್ದೀರಾ ನಿಮಗೆ ನೀವೇ ಪ್ರಶ್ನಿಸಿಕೊಳ್ಳಿ ಕೆಲವರು ಹೋಗಿರಬಹುದು ಆದ್ರೆ ಬಹುತೇಕ ಜನರು ಅಡುಗೆ ಕೋಣೆ ಹೆಂಡತಿಗೆ ಸೀಮಿತ ಮಾಡಿ ಬಿಟ್ಟಿದ್ದಾರೆ. ಆ ಕಡೆ ತಲೆಕೂಡ ಹಾಕಲ್ಲ. ಇನ್ಮೇಲಾದ್ರೂ ಆಗಾಗ ಅಡುಗೆ ಮನೆಯಲ್ಲಿ ಹೆಂಡತಿ ಜೊತೆ ಕೈ ಜೋಡಿಸಿ, ಅವಳಿಗೆ ಇಷ್ಟವಾದ ಯಾವದಾದ್ರು ಒಂದು ಬಗೆಯ ಅಡುಗೆ, ತಿಂಡಿ ಮಾಡಿ ಬಡಿಸಿ. 

ಆಗ ಇಬ್ಬರ ಮದ್ದೆ ಬರುವ ಚಿಕ್ಕ ಪುಟ್ಟ ಮಿಸ್ ಅಂಡರ್ಸ್ಟ್ಯಾಂಡಿಂಗ್ ದೂರ ಆಗುತ್ತೆ. ಇದು ತುಂಬಾ ಎಫೆಕ್ಟ್ ಆಗುವಂತಹ ಸೂತ್ರ.



2: ಆಗಾಗ ಲಾಂಗ್ ರೈಡ್‌ ಹೋಗಿ:

ವಾರಗಟ್ಟಲೆ ಅದೇ ಆಫೀಸು, ಅದೇ ಮನೆ, ಅದೇ ಮನೆ ಅಡುಗೆ ಅಂತ ಇಬ್ರಿಗೂ ಬೇಜಾರಾಗಿರುತ್ತೆ. ರಜೆ ದಿನದಲ್ಲಾದ್ರೂ ಎಲ್ಲೂ ಹೊರಗಡೆ ಹೋಗಲ್ಲ ಅಂತ ಒಬ್ಬರ ಮೇಲೆ ಒಬ್ಬರು ಸಿಟ್ಟಾಗುವದು ಮಾಮೂಲಿ. ಇನ್ನು ಹೆಂಡತಿ ಗ್ರಹಿಣಿ ಆಗಿದ್ದರಂತೂ ಮುಗಿತು.  ಅವಳಿಗೆ ಇಡಿ ದಿನ ಮನೆ ಕೆಲಸ, ಮಕ್ಕಳು, ಅತ್ತೆ ಮಾವನಂದಿರ ಸೇವೆ ಮಾಡುವದರಲ್ಲೇ ಸಾಕಾಗಿ ಹೋಗಿರುತ್ತೆ. ಹಾಗಾಗಿ ಆಗಾಗ ವೀಕೆಂಡ್ ಲಾಂಗ್ ರೈಡ್‌ ಹೋಗಿ. ದೇವಸ್ಥಾನ, ಸಿನಿಮಾ, ಹೋಟೆಲ್, ಶಾಪಿಂಗ್ ಅಂತ ಸುತ್ತಾಡಿಕೊಂಡು ಬನ್ನಿ. ಬರ್ತಾ ರೋಡ್ ಸೈಡ್ ಸಿಗೋ ಪಾನಿಪೂರಿ ತಿನ್ನಿಸಿ ನಿಮ್ ಆಗ ಹೆಂಡತಿ ಫೈವ್ ಸ್ಟಾರ್ ಹೋಟೆಲ್ ಅಲ್ಲಿ ಊಟ ಮಾಡಿಸಿದಕ್ಕೂ ಹೆಚ್ಚು ಖುಷಿ ಆಗ್ತಾಳೆ. ಸಂಜೆ ಜೊತೆಗೆ ವಾಕ್ ಮಾಡಿ. ಅಲ್ಲೇ ಇರೋ ಡಬ್ಬಿ ಅಂಗಡಿಯಲ್ಲಿ ಯಾವ ಮುಜುಗರ, ನಾಚಿಕೆ ಪಡದೆ ಜೊತೆಗೆ ಚಹಾ ಕುಡಿಯಿರಿ. ಅದ್ರಲ್ಲಿ ಸಿಗೋ ಖುಷಿ ಮತ್ತೆಲ್ಲೂ ಇಲ್ಲ ನೋಡಿ. ಈ ಸೂತ್ರ ಪಾಲಿಸಿದ ನಂತರ ಇಬ್ಬರ ಮೂಡು ರಿಫ್ರೆಶ್ ಆಗುತ್ತೆ. ಮತ್ತೆ ಮಂಡೇ ಖುಷಿ ಖುಷಿಯಾಗಿ ನಿಮ್ ನಿಮ್ ಕೆಲ್ಸದಲ್ಲಿ ತೋಡಬಹುದು.


3: ಹೆಂಡತಿ ಜೊತೆ ಮನೆ ಸ್ವಚ್ಛಗೊಳಿಸುವಲ್ಲಿ ಕೈ ಜೋಡಿಸಿ:

ಹೆಂಡತಿಯನ್ನು ಅರ್ಧಾಂಗಿ ಅಂತ ಕರೆದಾದ್ಮೇಲೆ ಅವರ ಕಷ್ಟ ಸುಖದಲ್ಲೂ ಪಾಲ್ಗೊಳ್ಳುವುದು ಗಂಡನ ಕರ್ತವ್ಯ ಅಲ್ವಾ. ಇಬ್ಬರು ಆಫೀಸ್ ನಿಂದ ಸುಸ್ತಾಗಿ ಬಂದಿರ್ತೀರ ಮಕ್ಕಳು ಮನೇಲಿ ವಸ್ತುಗಳನ್ನ ಚಾಲಂಪಿಲ್ಲಿ ಮಾಡಿರ್ತಾರೆ. ಹೆಂಡತಿ ಒಬ್ಬಳೇ ಯಾವಾಗ ಕ್ಲಿನ್ ಮಾಡೋದು, ಅಡುಗೆ ಮಾಡೋದು, ಮಲಗೋದು ಮತ್ತೆ ಎದ್ದು ಆಫೀಸ್ ಹೋಗುದು, ಕಷ್ಟ ಆಗುತ್ತೆ ಅಲ್ವಾ.  ಆಗ ಗಂಡಂದಿರು ಸ್ವಲ್ಪ ಕೈ ಜೋಡಿಸಿ. ವರ್ಕಿಂಗ್ ವುಮನ್ ಆಗ್ಲಿ ಗ್ರಹಣಿ ಆಗ್ಲಿ ಅವಳ ಕೆಲಸಕ್ಕೆ ನೀವು ಜೊತೆಯಾಗಿ ನಿಲ್ಲಿ. ಹೆಂಡತಿ ಆದವಳು "ಬೇಡ ನೀವು ರೆಸ್ಟ್ ಮಾಡಿ" ಅಂದ್ರು ಕೂಡ "ಒಬ್ಳೆ ಎಷ್ಟು ಅಂತ ಕೆಲಸ ಮಾಡ್ತಿಯಾ ಸ್ವೀಟ್ ಹಾರ್ಟ್ ಅಂತ ಹೇಳಿ" ಆಗ ನಿಮ್ಮ ಮಾತು ಕೇಳಿ ಹೆಂಡತಿ ಕೂಡ ಖುಷಿ ಆಗ್ತಾಳೆ, ಕೆಲಸ ಕೂಡ ಬೇಗ ಮುಗಿಯುತ್ತೆ. ಈ ಸೂತ್ರ ಪಾಲಿಸಿ ಇಬ್ಬರ ನಡುವೆ ಹೊಂದಾಣಿಕೆ ಮತ್ತು ಪ್ರೀತಿ ಕೂಡ ಹೆಚ್ಚಾಗುತ್ತೆ. 


4: ಒಬ್ಬರ ಮಾತಿಗೆ ಒಬ್ಬರು ಬೆಲೆ ಕೊಡಿ:

ಗಂಡ ಹೆಂಡತಿ ಮದ್ದೆ ಪ್ರೀತಿ ಎಷ್ಟು ಮುಖ್ಯನೋ ಅಷ್ಟೇ ಮುಖ್ಯ ಒಬ್ಬರ ಮೇಲೆ ಒಬ್ಬರಿಗೆ ನಂಬಿಕೆ, ಗೌರವ ಅಂತ ಮುಂಚೆ ಹೇಳಿದೀನಿ. ಯಾವದೇ ಒಂದು ಸಂಧರ್ಭದಲ್ಲಿ ಯಾವದೋ ವಿಷಯಕ್ಕೆ ಚರ್ಚೆ ನಡೆದಾಗ ಒಬ್ಬರ ಮಾತು ಒಬ್ಬರು ಮೊದಲು ಸರಿಯಾಗಿ ಕೇಳಿಸಿಕೊಳ್ಳಿ, ಒಬ್ಬರ ಮಾತಿಗೆ ಮತ್ತೊಬ್ಬರು ಪ್ರತಿಕ್ರಿಯಿಸಿ, ಬೆಲೆ ಕೊಡಿ, ಗೌರವಿಸಿ. ನಂದೇ ಸರಿ ನಿನಗೇನು ಗೋತ್ತಾಗಲ್ಲ ಅಂತ ಅವರ ಮಾತನ್ನು ತಗೆದು ಹಾಕಿ ಕುಟುಂಬದವರ ಮುಂದೆ ಸ್ನೇಹಿತರ ಮುಂದೆ ನಿಮ್ಮ ಸಂಗಾತಿಯನ್ನು ಅವಮಾನಿಸಬೇಡಿ. ಅಕಸ್ಮಾತ್ ಅವರ ಅನಿಸಿಕೆ ತಪ್ಪಾಗಿದ್ದರು ಕೂಡ ಯಾರು ಇಲ್ಲದಲ್ಲಿ ಕಡೆದು ಕೊಂಡು ಹೋಗಿ ತಿಳಿಸಿ, ವಿವರಿಸಿ ಹೇಳಿ ಆಗ ಅವರು ಅರ್ಥ ಮಾಡಿಕೊಳ್ಳುತ್ತಾರೆ. ಎಲ್ರು ಮುಂದೆ ನಿಂದಿಸಿಲ್ಲ ಅನ್ನೋ ಸಮಾಧಾನ ಇರುತ್ತೆ ಅವರಿಗೂ ಆಗುತ್ತೆ. ಇದು ಒಂದು ಉದಾಹರಣ ಮಾತ್ರ. ಹೀಗೆ ಯಾವದೇ ಸಂದರ್ಭದಲ್ಲೂ ಸಂಗಾತಿಯ ಜೊತೆ ನಿಲ್ಲಿ. ಈ ಸೂತ್ರ ಬಳಸುವದರಿಂದ ಇರುವದರಿಂದ ಎಂತಾ ಸಮಯದಲ್ಲೂ ನಿಮ್ಮ ಸಂಗಾತಿ ನಿಮ್ಮ ಜೊತೆ ಬಿಡುವದಿಲ್ಲ. ಕಷ್ಟ ಸುಖದಲ್ಲಿ ಜೊತೆಯಾಗಿ ನಿಲ್ಲುತ್ತಾರೆ.


5: ಆಗಾಗ ಸ್ವಲ್ಪ ಹೊಗಳಿಕೆ ಮಾತು ಇರಲಿ:

ಮದ್ವೆ ಹೊಸತ್ರಲ್ಲಿ ಇರುವ ಹೊಗಳಿಕೆ, ಪ್ರೀತಿ ಮಾತು ದಿನೇ ದಿನ ಕೆಲವರಲ್ಲಿ ಕಡಿಮೆ ಆಗುತ್ತಾ ಹೋಗುತ್ತೆ, ಇದು ಜೀವನವನ್ನೇ ಸಪ್ಪೆ ಗೊಳಿಸುತ್ತೆ. ಅಯ್ಯೋ ವಯಸ್ಸಾಯಿತು ಇನ್ನೇನಿದೆ ಬಿಡು ಹೋಗಳ್ಕೊಳೋದು ಅಂತ ಜೀವನದಲ್ಲಿ ಯಾವತ್ತೂ ಜಿಗುಪ್ಸೆ ಹೊಂದಬೇಡಿ.

"ಏಜ್ ಇಸ್ ಎ ಜಸ್ಟ್ ನಂಬರ್" ಅನ್ನೋ ಮಂತ್ರವನ್ನು ನೆನಪಿಸಿಕೊಳ್ಳಿ. ನಾವು ಮಾಡುವ ಕೆಲಸಕ್ಕೆ, ಅಡುಗೆಗೆ ಅಥವಾ ನಮ್ಮ ಉಡುಗೆ ತೋಡಿಗೆ, ಸೌಂದರ್ಯಕ್ಕೆ ಆಗಾಗ ಹೊಗಳಿಕೆ ಸಿಕ್ರೆ ಅದು ಒನ್ ತರ ಎನರ್ಜಿ ಬೂಸ್ಟರ್ ಸಿಕ್ಕ ಹಾಗೆ. ಮತ್ತೆ ಹೆಚೆಚ್ಚು ಕೆಲಸ ಮಾಡಲು, ಅಲಂಕಾರ ಮಾಡಿಕೊಳ್ಳಲು, ರುಚಿ ರುಚಿ ಅಡುಗೆ ಮಾಡಲು ನಮಗೂ ಹುರುಪು ತುಂಬಿದ ಹಾಗೆ. ಕೇವಲ ಗಂಡಮಾತ್ರವಲ್ಲ ಹೆಂಡತಿ ಕೂಡ ಗಂಡನಲ್ಲಿರುವ ಒಳ್ಳೇಗುಣವನ್ನ ಪ್ರಶಂಸೆ ಮಾಡ್ತಾ ಇರ್ಬೇಕು. ನೀವು ತುಂಬಾ ಹ್ಯಾಂಡ್ಸಮ್ ಕಣ್ರೀ ಅಂತ ಅಟ್ಟಕ್ಕೆ ಏರಿಸ್ತಾ ಇರ್ಬೇಕು. ಇದು ಕೇಳೋಕೆ ತಮಾಷೆ ಅನ್ಸಿದ್ರು ಮದ್ವೆ ಆಗಿ ತುಂಬಾ ವರ್ಷಗಳು ಆದ್ರೂ ಇನ್ನು ನವದಂಪತಿ ಅನ್ನೋ ಭಾವನೆ ಮೂಡಿಸುವ ಸೂತ್ರ ಇದಾಗಿದೆ.


ಈ ಮೇಲಿನ ಎಲ್ಲಾ ಸೂತ್ರ ಪಾಲಿಸಿದಾಗ ಮಾತ್ರ ಸಂಸಾರ ಸುಖವಾಗಿ ಸಾಗುತ್ತೆ. ಕೂಡಿ ಬಾಳಿದರೆ ಸ್ವರ್ಗ ಸುಖ ಎನ್ನುವ ಮಾತು ನಿಜವಾಗುತ್ತೆ.


ಯಾವುದೇ ಒಂದು ಸಂದರ್ಭದಲ್ಲಿ ಒಂದು ಗಟ್ಟಿಯಾದ ಸಂಬಂಧದ ಮಧ್ಯೆ ಬಿರುಕು ಮೂಡಲು ಇಬ್ಬರ ಮಧ್ಯೆ ಬರುವ ವೈಮನಸ್ಸು ಕಾರಣವಾಗುತ್ತದೆ. ಕೇವಲ ನೆಗಟಿವ್ ಆಗಿ ಇನ್ನೊಬ್ಬರ ಬಗ್ಗೆ ಯೋಚನೆ ಮಾಡಿ ಅವರು ಏನೇ ಒಳ್ಳೆಯ ಕೆಲಸ ಮಾಡಿದರೂ ಅದರಲ್ಲಿ ತಪ್ಪು ಹುಡುಕಿ ಆರೋಗ್ಯಕರವಾದ ಸಂಬಂಧದ ವಿನಾಶಕ್ಕೆ ಕೆಲವೊಮ್ಮೆ ನಾವೇ ಕಾರಣವಾಗಿ ಬಿಡುತ್ತೇವೆ. ಇದರ ಮಧ್ಯೆ ನಾನು, ನನ್ನಿಂದಲೇ ಎಲ್ಲಾ ಎನ್ನುವ ಭಾವನೆ ಮನಸ್ಸಿನಲ್ಲಿ ಒಮ್ಮೆ ಬಂತೆಂದರೆ ಸಂಬಂಧದಲ್ಲಿ ಸಮಸ್ಯೆಗಳು ಶುರುವಾಯಿತು ಎಂದೇ ಅರ್ಥ.


ಇತ್ತೀಚಿನ ದಾಂಪತ್ಯದಲ್ಲಿ ತುಂಬಾ ಚಿಕ್ಕ ಪುಟ್ಟ ಕಾರಣಕ್ಕೆ ಬಿರುಕು ಮೂಡುತ್ತಿವೆ. ನನ್ನ ಮಾತೇ ನಡೆಯಬೇಕು ಎನ್ನುವ ಅಹಂ ಹೆಚ್ಚಾಗುತ್ತಿದೆ. ಇದರಿಂದ ಎರಡು ಕುಟಂಬದವರು ಮತ್ತೆ ಮಕ್ಕಳು ಕೂಡ ಕಷ್ಟ, ಅವಮಾನ ಅನುಭವಿಸಬೇಕಾಗುತ್ತದೆ. ಅಹಂ ಬಿಟ್ಟು ಪರಸ್ಪರ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡು ಸಂದರ್ಭಕ್ಕೆ ಅನುಸಾರವಾಗಿ ಸರಿಯಾದ ಕ್ರಮದಲ್ಲಿ ಆಲೋಚನೆ ಮಾಡಿ ಪರಿಸ್ಥಿತಿಯನ್ನು ನಿಭಾಯಿಸಿ ಮುಂದೆ ಸಾಗಿದರೆ ಜೀವನದಲ್ಲಿ ಸಮಸ್ಯೆಗಳು ಎನ್ನುವುದಕ್ಕೆ ಜಾಗವೇ ಇರುವುದಿಲ್ಲ.




- ಸರಸ್ವತಿ ವಿಶ್ವನಾಥ್ ಪಾಟೀಲ್, ಕಾರಟಗಿ


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

إرسال تعليق

0 تعليقات
إرسال تعليق (0)
Maruti Suzuki Festival of Colours
Maruti Suzuki Festival of Colours
To Top