ಮೇ 19 ರಂದು ಎಡನೀರಿನಲ್ಲಿ ಕೃತಿಗಳ ಅನಾವರಣ ಮತ್ತು ಸಂವಾದಗೋಷ್ಠಿ

Upayuktha
0


ಕಾಸರಗೋಡು: ಕಾಸರಗೋಡು ಜಿಲ್ಲಾ ಕನ್ನಡ ಲೇಖಕರ ಸಂಘ ಮತ್ತು ಬನಾರಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾ ಸಂಘ ದೇಲಂಪಾಡಿ ಇವರ ಸಂಯುಕ್ತಾಶ್ರಯದಲ್ಲಿ ಮೇ 19ರಂದು ಅಪರಾಹ್ನ 2 ಗಂಟೆಗೆ ಎಡನೀರು ಮಠದ ಭಾರತೀ ಸದನದಲ್ಲಿ 'ಕರ್ನಾಟಕದೊಂದಿಗೆ ಕಾಸರಗೋಡಿನ ಸಾಂಸ್ಕೃತಿಕ ವಿಲಿನೀಕರಣ' ಎಂಬ ವಿಷಯದ ಕುರಿತು ಸಂವಾದ ಗೋಷ್ಠಿ, ಕೃತಿಗಳ ಬಿಡುಗಡೆ ಮತ್ತು ಕಾವ್ಯವಾಚನ ಕಾರ್ಯಕ್ರಮ ನಡೆಯುವುದು.


'ಕರ್ನಾಟಕದೊಂದಿಗೆ ಕಾಸರಗೋಡಿನ ಸಾಂಸ್ಕೃತಿಕ ವಿಲಿನೀಕರಣ'ಎಂಬ ಸಂವಾದಗೋಷ್ಠಿಯಲ್ಲಿ ಮಾಧ್ಯಮ ತಜ್ಞ ಭಾಸ್ಕರ ರೈ ಕುಕ್ಕುವಳ್ಳಿ, ಡಾ.ರಮಾನಂದ ಬನಾರಿ, ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕದ ಅಧ್ಯಕ್ಷ ಡಾ. ಜಯಪ್ರಕಾಶ ನಾರಾಯಣ ತೊಟ್ಟೆತ್ತೋಡಿ, ಆಕಾಶವಾಣಿಯ ನಿವೃತ್ತ ಕಾರ್ಯಕ್ರಮ ನಿರ್ವಾಹಕ ಡಾ. ವಸಂತ ಕುಮಾರ ಪೆರ್ಲ, ಸಾಹಿತಿ ಟಿ.ಎ.ಎನ್ ಖಂಡಿಗೆ ಭಾಗವಹಿಸುವರು.


ಬಳಿಕ ಡಾ. ರಮಾನಂದ ಬನಾರಿ, ಗಣರಾಜ ಕುಂಬ್ಳೆ ರಚಿಸಿರುವ 'ತಾಳಮದ್ದಳೆ ಒಂದು ಐತಿಹಾಸಿಕ ಅಧ್ಯಯನ' ಮತ್ತು ಪ್ರೊ. ಪಿ.ಎನ್ ಮೂಡಿತ್ತಾಯರು ಸಂಪಾದಿಸಿದ 'ಸಂಸ್ಕೃತಿಯ ಸೂತ್ರಧಾರಿ ಡಾ.ರಮಾನಂದ ಬನಾರಿ' ಎಂಬ ಕೃತಿಗಳ ಅನಾವರಣ ನಡೆಯುವುದು. ಎಡನೀರು ಮಠಾಧೀಶ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿಯವರು ಕೃತಿಗಳನ್ನು ಅನಾವರಣಗೊಳಿಸಿ ಆಶೀರ್ವಚನಗೈಯುವರು. ಸಂಶೋಧಕ ಡಾ.  ಕಬ್ಬಿನಾಲೆ ವಸಂತ ಭಾರಧ್ವಾಜ ಮೈಸೂರು ಅಧ್ಯಕ್ಷತೆ ವಹಿಸುವರು. ಡಾ.ಸಿಬಂತಿ ಪದ್ಮನಾಭ ತುಮಕೂರು, ಡಾ. ಬಾಲಕೃಷ್ಣ ಹೊಸಂಗಡಿ ಕೃತಿ ಪರಿಚಯ ಮಾಡುವರು.


ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಾ.ಎಂ.ಪಿ ಶ್ರೀನಾಥ್, ಸುಳ್ಯದ ಸ್ನೇಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ಚಂದ್ರಶೇಖರ ದಾಮ್ಲೆ ಮುಖ್ಯ ಅತಿಥಿಗಳಾಗಿರುವರು.


ಡಾ. ಎಂ ಪ್ರಭಾಕರ ಜೋಶಿ, ಪ್ರೊ. ಪಿ.ಎನ್ ಮೂಡಿತ್ತಾಯ, ರಾಧಾಕೃಷ್ಣ ಕೆ. ಉಳಿಯತ್ತಡ್ಕ, ಡಾ. ಪ್ರಮೀಳ ಮಾಧವ, ಡಾ. ಮುರಲಿ ಮೋಹನ ಚೂಂತಾರು, ಗಣರಾಜ ಕುಂಬ್ಳೆ, ವೆಂಕಟರಾಮ ಭಟ್ ಸುಳ್ಯ, ವಿಶಾಲಾಕ್ಷ ಪುತ್ರಕಳ, ದಿವ್ಯಾ ಗಟ್ಟಿ ಪರಕ್ಕಿಲ, ವೆಂಕಟ್ ಭಟ್ ಎಡನೀರು, ನಾರಾಯಣ ದೇಲಂಪಾಡಿ ಉಪಸ್ಥಿತರಿರುವರು. ಕಾರ್ಯಕ್ರಮದಂಗವಾಗಿ ಡಾ.ರಮಾನಂದ ಬನಾರಿಯವರ ಕಾವ್ಯಗಳ ವಾಚನ ಮತ್ತು ಗಾಯನ ನಡೆಯುವುದು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

إرسال تعليق

0 تعليقات
إرسال تعليق (0)
Maruti Suzuki Festival of Colours
Maruti Suzuki Festival of Colours
To Top