ಮಂಗಳೂರು: ಭಾರತದ ಪ್ರಮುಖ ಪರಿಸರ ಸ್ನೇಹಿ ಪೇಂಟ್ಸ್ ಕಂಪನಿಯಾಗಿರುವ ಜೆಎಸ್‍ಡಬ್ಲ್ಯೂ ಪೇಂಟ್ಸ್ 2024ರ ಮಾರ್ಚ್ 31ಕ್ಕೆ ಕೊನೆಗೊಂಡ ಹಣಕಾಸು ವರ್ಷದಲ್ಲಿ ಸುಮಾರು 67 ಕೋಟಿ ರೂಪಾಯಿಗಳಷ್ಟು ಮೊದಲ ಪೂರ್ಣ ವರ್ಷದ ಕಾರ್ಯಾಚರಣೆ ಲಾಭವನ್ನು ದಾಖಲಿಸಿದೆ.
ಇದರೊಂದಿಗೆ ಜೆಎಸ್‍ಡಬ್ಲ್ಯೂ ಪೇಂಟ್ಸ್ ತನ್ನ ವ್ಯವಹಾರ ಪ್ರಾರಂಭಿಸಿದ 5 ವರ್ಷಗಳಿಗಿಂತ ಕಡಿಮೆ ಅವಧಿಯಲ್ಲಿ ಕಾರ್ಯಾಚರಣೆಯ ಲಾಭವನ್ನು ದಾಖಲು ಮಾಡಿದ ಮೊದಲ ಮತ್ತು ಅತ್ಯಂತ ಕಿರಿಯ ಭಾರತೀಯ ಬಣ್ಣ ತಯಾರಿಕಾ ಕಂಪನಿಯಾಗಿದೆ. ಕಂಪನಿಯ ಒಟ್ಟು ಆದಾಯವು 2,000 ಕೋಟಿ ರೂಪಾಯಿಗಳ ಮೈಲಿಗಲ್ಲನ್ನು ದಾಟಿ ಉದ್ಯಮದ ಬೆಳವಣಿಗೆ ದರದ ಶೇಕಡ 10ರಷ್ಟು ಪ್ರಗತಿಯನ್ನು ದಾಖಲಿಸಿದೆ ಎಂದು ಜೆಎಸ್‍ಡಬ್ಲ್ಯೂ ಪೇಂಟ್ಸ್‍ನ ಎಂಡಿ ಪಾರ್ಥ್ ಜಿಂದಾಲ್ ಪ್ರಕಟಣೆಯಲ್ಲಿ ಹೇಳಿದ್ದಾರೆ.
ಪ್ರಸ್ತುತ ಬೆಳವಣಿಗೆ ದರವು ಮುಂದಿನ ಎರಡು ವರ್ಷಗಳಲ್ಲಿ (ಅಂದರೆ 26ನೇ ಹಣಕಾಸು ವರ್ಷದ ವೇಳೆಗೆ) 5,000 ಕೋಟಿ ರೂಪಾಯಿಗಳನ್ನು ಸಾಧಿಸುವ ಗುರಿಯನ್ನು ಸಾಧಿಸಲು ಜೆಎಸ್‍ಡಬ್ಲ್ಯೂ ಪೇಂಟ್ಸ್ ಅನ್ನು ದೃಢವಾದ ಪಥದಲ್ಲಿ ಇರಿಸುತ್ತದೆ. ಕಂಪನಿಯು ತನ್ನ ಅಲಂಕಾರಿಕ ಪೇಂಟ್ಸ್ ವ್ಯವಹಾರದಲ್ಲಿ ರೂಪಾಂತರ ಮತ್ತು ಬೆಳವಣಿಗೆಯನ್ನು ಮುನ್ನಡೆಸಲು ಯೂನಿಲಿವರ್‍ನ ಮಾಜಿ ಎಕ್ಸಿಕ್ಯೂಟಿವ್ ಆಶಿಶ್ ರೈ ಅವರನ್ನು ಮುಖ್ಯ ವ್ಯಾಪಾರ ಅಧಿಕಾರಿಯಾಗಿ ನೇಮಿಸಿದೆ ಎಂದು ವಿವರಿಸಿದ್ದಾರೆ.
ಜೆಎಸ್‍ಡಬ್ಲ್ಯೂ ಪೇಂಟ್ಸ್ ಭಾರತೀಯ ಬಣ್ಣಗಳ ಮಾರುಕಟ್ಟೆಯಲ್ಲಿ ವಿಶಿಷ್ಟವಾದ "ಯಾವುದೇ ಬಣ್ಣ ಒಂದು ಬೆಲೆ" ಅನ್ನು ನೀಡುವ ಏಕೈಕ ಕಂಪನಿಯಾಗಿ ಉಳಿದಿದ್ದು, ಕೈಗಾರಿಕಾ ಕೋಟಿಂಗ್‍ಗಳಲ್ಲಿ ಜೆಎಸ್‍ಡಬ್ಲ್ಯೂ ಪೇಂಟ್ಸ್ ಕಾಯಿಲ್ ಕೋಟಿಂಗ್‍ಗಳಲ್ಲಿ ಮುಂಚೂಣಿಯಲ್ಲಿದೆ ಮತ್ತು ರಕ್ಷಣಾತ್ಮಕ, ಪೈಪ್, ವಿಂಡ್‍ಮಿಲ್, ಫ್ಲೋರ್ ಮತ್ತು ಸಾಮಾನ್ಯ ಕೈಗಾರಿಕಾ ಕೋಟಿಂಗ್‍ಗಳಂತಹ ಇತರ ವಿಭಾಗಗಳಿಗೆ ತನ್ನ ಕೊಡುಗೆಯನ್ನು ವಿಸ್ತರಿಸುತ್ತಿದೆ ಎಂದು ಪ್ರಕಟಣೆ ಹೇಳಿದೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ