ಡಾ. ಮಾಧವ ಪೈಯವರ ಮಾನವೀಯತೆಯ ಹೃದಯಶೀಲ ಗುಣ ಆದರ್ಶಪ್ರಾಯ: ಪ್ರೊ.ಶೆಟ್ಟಿ.

Upayuktha
0


ಉಡುಪಿ: ಡಾ.ಮಾಧವ ಪೈಯವರು ತಮ್ಮ  ಬಾಲ್ಯದಿಂದಲೂ ರೂಢಿಸಿ ಕೊಂಡ ಅತೀ ಶ್ರೇಷ್ಠ ಗುಣವೆಂದರೆ ಮಾನವೀಯತೆಯ ಹೃದಯ.ತಮ್ಮ ಸಂಸಾರದೊಂದಿಗೆ ತಮ್ಮ ಸಮಾಜವನ್ನು  ಆರೇೂಗ್ಯ ಪೂಣ೯ ವಾಗಿ ಬೆಳೆಸುವಲ್ಲಿ ಡಾ.ಮಾಧವಪೈ ಅವರ ಕೊಡುಗೆ ಅನನ್ಯವಾದದ್ದು.ಸಾಮಾಜಿಕ ಸಹಭಾಗಿತ್ವದ ಕಲ್ಪನೆಯ ಆಧಾರವಾಗಿಟ್ಟುಕೊಂಡು ತಮ್ಮ ಎಲ್ಲಾ  ಸಂಸ್ಥೆಗಳನ್ನು ಕಟ್ಟಿದ ಮಹಾನ್ ಸಾಧಕ ಡಾ.ಮಾಧವ ಪೈಯವರು. ಹಾಗಾಗಿಯೇ ಅವರು ಕಟ್ಟಿದ ಶಿಕ್ಷಣ ಆರೇೂಗ್ಯ ಬ್ಯಾಂಕಿಂಗ್ ಸಂಸ್ಥೆಗಳು ಇಂದಿನ ಜಾಗತಿಕ ಸ್ಪರ್ಧೆಯನ್ನು ಸಮರ್ಥವಾಗಿ ಎದುರಿಸಿ ಬೆಳೆದು ನಿಲ್ಲಲು ಸಾಧ್ಯವಾಯಿತು ಅನ್ನುವುದು ವೇದ್ಯವಾಗುತ್ತದೆ. ಎಂದು ಎಂ.ಜಿ.ಎಂ. ಕಾಲೇಜಿನ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪ್ರೊ. ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ  ಅಭಿಪ್ರಾಯಿಸಿದರು.


ಉಡುಪಿ ಮಹಾತ್ಮ ಗಾಂಧಿ ಮೆಮೋರಿಯಲ್ ಕಾಲೇಜಿನಲ್ಲಿ ಹಮ್ಮಿಕೊಂಡ ಕಾಲೇಜಿನ  ಸಂಸ್ಥಾಪಕ ಡಾ. ಮಾಧವ ಪೈ ಅವರ 126 ಜನ್ಮ ದಿನಾಚರಣೆ ಸಂದರ್ಭ ಸಂಸ್ಮರಣ ಕಾರ್ಯಕ್ರಮದಲ್ಲಿ ಅಭಿಪ್ರಾಯಿಸಿದರು.


ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಪ್ರೊ. ಲಕ್ಷ್ಮಿನಾರಾಯಣ ಕಾರಂತವಹಿಸಿದರು;  ಎಂ.ಜಿ.ಎಂ. ಪದವಿ ಪೂರ್ವ ವಿಭಾಗದ ಪ್ರಾಂಶುಪಾಲೆ ಮಾಲತಿ ದೇವಿ; ರಸಾಯನ ಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ.ಅರುಣ ಕುಮಾರ್ ಬಿ.ವೇದಿಕೆಯಲ್ಲಿ  ಉಪಸ್ಥಿತರಿದ್ದರು. ಕಂಪ್ಯೂಟರ್  ಸೈನ್ಸ್  ವಿಭಾಗದ  ಮುಖ್ಯಸ್ಥ ಡಾ.ಎಂ. ವಿಶ್ವನಾಥ ಪೈ ವಂದಿಸಿದರು.

 

ಕಾಲೇಜಿನ ಆಡಳಿತ ಸೌಧದ ಮುಂಭಾಗದಲ್ಲಿರುವ ಡಾ.ಮಾಧವ ಪೈ ಅವರ ಪ್ರತಿಮೆಗೆ ಗೌರವಾಪ೯ಣೆ ಮಾಡಲಾಯಿತು.



  ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top