2021ರಲ್ಲಿ "ಪುಷ್ಪ ದಿ ರೈಸ್" ಚಿತ್ರವು ತೆರೆಕಂಡಿತ್ತು. ಆ ಚಲನಚಿತ್ರವು ಜನಮನ ಗೆದ್ದಿತ್ತು. ಪುಷ್ಪ ಚಲನಚಿತ್ರದ ನಂತರ ಇದರ ಎರಡನೇ ಭಾಗದ ಕುರಿತು ದಿನಕಳೆದಂತೆ ಕುತೂಹಲ ಹೆಚ್ಚಾಗುತ್ತಿದೆ. ಇನ್ನೇನು ಕೆಲವೇ ತಿಂಗಳಲ್ಲಿ ಬಿಗ್ ಸ್ಕ್ರೀನ್ ಮೇಲೆ ಸಿನಿಮಾ ಅಪ್ಪಳಿಸಲಿದೆ. ಶೂಟಿಂಗ್ ಹಂತದಲ್ಲಿರುವ ಸಿನಿಮಾ ಪೋಸ್ಟರ್, ಬರ್ತ್ ಡೇ ಟೀಸರ್, ಹಾಗೂ ಮೊದಲ ಹಾಡು ಜನರ ಕುತೂಹಲವನ್ನು ಹೆಚ್ಚುವಂತೆ ಮಾಡಿದೆ. ಪುಷ್ಪನ ಹೊಸ ಲುಕ್ ಜನರನ್ನು ದಂಗಾಗಿಸಿದೆ.
ಇತ್ತೀಚೆಗೆ ಬಂದ "ಪುಷ್ಪ ಪುಷ್ಪ ಪುಷ್ಪರಾಜ್" ಇದೀಗ ಯೂಟ್ಯೂಬ್ ಶಾರ್ಟ್ (ರೀಲ್ಸ್)ಗಳ ಟ್ರೆಂಡಿಂಗ್ ಪೇಜ್‌ಗಳಲ್ಲಿ ಬರುತ್ತಿದೆ. ಈ ಹಾಡು ಸಖತ್ ಸೌಂಡ್ ಮಾಡಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಯೂಟ್ಯೂಬ್ ಸರ್ಚ್ ಬಾರ್‌ನಲ್ಲಿ ಪುಷ್ಪರಾಜ್ ದಿ ರೂಲ್ ಟ್ರೈಲರ್ ಹುಡುಕಿದವರು ಅದೆಷ್ಟೋ ಮಂದಿ. ಯೂಟ್ಯೂಬ್ ರೀಲ್ಸ್ (ಶಾರ್ಟ್), ಫೇಸ್ಬುಕ್ ರೀಲ್ಸ್, ಇನ್ಸ್ಟಾಗ್ರಾಂ ರೀಲ್ಸ್‌ಗಳಲ್ಲಿ ಮುಂತಾದ ಯಾವುದೇ ಸಾಮಾಜಿಕ ಜಾಲತಾಣ ತೆಗೆದು ನೋಡಿದರೂ ಕಾಣಸಿಗುವುದು ಇದೇ ಹಾಡಿಗೆ ಹೆಜ್ಜೆ ಹಾಕುತ್ತಿರುವ ಯುವಕ ಯುವತಿಯರು, ಈ ಹಾಡು ಇಷ್ಟು ವೈರಲ್ ಆದರೆ ಇನ್ನು ಈ ಚಲನಚಿತ್ರ ರಿಲೀಸ್ ಆದ ಮೇಲೆ ಈ ಚಲನಚಿತ್ರ ನೋಡಲು ಎಲ್ಲಾ ಸಿನಿಮಾ ಥೀಯೇಟರ್ ಹೌಸ್‌ಫುಲ್ ಆಗುವುದಂತೂ ಖಚಿತ.
ಸುಕುಮಾರ್ ನಿರ್ದೇಶನದ ಈ ಸಿನಿಮಾದಲ್ಲಿ ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ, ಫಾಹದ್ ಫಾಸಿಲ್ ಮುಂತಾದವರು ನಟಿಸಿದ್ದಾರೆ. ಇದೇ ಬರುವ 2024ರ ಅ.15ರಂದು ಚಲನಚಿತ್ರ ಪುಷ್ಪ-2 ತೆರೆಕಾಣಲಿದೆ. ಈ ಸಿನಿಮಾದ ಟ್ರೈಲರ್ ಎಲ್ಲಾ ಭಾಷೆಗಳಲ್ಲೂ ರಿಲೀಸ್ ಆಗಿದೆ. (ಹಿಂದಿ, ಮಲಯಾಳಂ, ಕನ್ನಡ,) ಮೊದಲಾದ ಭಾಷೆಗಳಲ್ಲಿ ರಿಲೀಸ್ ಆಗಿದೆ. ರಶ್ಮಿಕಾ ಮಂದಣ್ಣನ ಹೊಸ ಲುಕ್ ಸಿನಿಮಾಕ್ಕೆ ಇನ್ನಷ್ಟು ಖಳೆಯನ್ನು ನೀಡುವುದಲ್ಲದೆ, ಜನರಲ್ಲಿ ಸಿನಿಮಾ ನೋಡುವ ಕುತೂಹಲವನ್ನು ಇನ್ನಷ್ಟು ಹೆಚ್ಚಿಸಿದೆ. ಪುಷ್ಪನ ಹೊಸ ಲುಕ್ ಜನರನ್ನು ತಮ್ಮನ್ನು ತಾವೇ ಪ್ರಶ್ನಿಸಿಕೊಳ್ಳುವಂತೆ ಮಾಡಿದೆ.
- ಕಾರ್ತಿಕ್ ಕುಮಾರ್ ಕೆ.
ದುರ್ಗಾನಿಲಯ ಕಡೆಕಲ್ಲು, ಏತಡ್ಕ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ