ಮಂಗಳೂರು: ಮಂಗಳೂರಿನ ಶಬರಿ ಜ್ಞಾನ ವಿಕಾಸ ಕೇಂದ್ರ ಅಸೈಗೋಳಿಯಲ್ಲಿ ಇಂದು (ಮೇ 19) ಸರ್ವ ಸದಸ್ಯರಿಗಾಗಿ ಆರೋಗ್ಯ ಮಾಹಿತಿ ಉಪನ್ಯಾಸ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಸಂಸ್ಥೆಯ ಸೇವಾ ಪ್ರಮುಖ ನೌಷಾದ್‌ರವರ ಸಾರಥ್ಯದಲ್ಲಿ ನಡೆದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾರ್ಯಕರ್ತೆ ವೀಣಾರವರು ವಹಿಸಿದ್ದರು.
ಕಣಚೂರು ಆಯುರ್ವೇದ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಹಾಗೂ ಮೂಲವ್ಯಾಧಿ ಕ್ಷಾರ ಚಿಕಿತ್ಸಾ ತಜ್ಞ ಡಾ. ಸುರೇಶ ನೆಗಳಗುಳಿಯವರು ದೀಪ ಬೆಳಗಿಸಿ ಉದ್ಘಾಟಿಸುವ ಮೂಲಕ ಕಾರ್ಯಕ್ರಮ ಚಾಲನೆಗೊಂಡಿತು.
ಅನಂತರ ಅವರು ಮಾತನಾಡುತ್ತಾ ಆರೋಗ್ಯ ಇಲ್ಲದಿದ್ದರೆ ಎಷ್ಟು ಸಂಪತ್ತಿದ್ದರೂ ಅಪ್ರಯೋಜಕ ಅಂತಹ ಸೌಖ್ಯ ಪಡೆಯಲು ದಿನಚರಿ ಹಾಗೂ ಗೊತ್ತಿದ್ದೂ ಮಾಡುವ ತಪ್ಪುಗಳನ್ನು ದೂರ ಮಾಡ ಬೇಕು ಹಾಗೂ ಕಾಯಾ ವಾಚಾ ಮನಸಾ ಪರಿಶುದ್ಧತೆ ಕಾಪಾಡಿಕೊಳ್ಳಬೇಕು. ಆಹಾರ, ವಿಹಾರ, ಆಚಾರ, ವಿಚಾರಗಳು ಇಂದ್ರಿಯದ ಪರಿಧಿ ಮೀರಿ ಹೋಗಬಾರದು, ರಕ್ತ ಹೀನತೆ, ತಲೆನೋವು ಇತ್ಯಾದಿಗಳು ರೋಗವಿರುವ ಸೂಚಕಗಳು. ಬಿ.ಪಿ, ಕೊಲೆಸ್ಟರಾಲ್, ಮಧುಮೇಹಗಳೆಂಬ ಮೂರರ ಕಟ್ಟು ನಮ್ಮ ಶರೀರದಲ್ಲಿರದಂತೆ ಮಾಡಲು ಅವರವರೇ ಜಾಗ್ರತೆ ವಹಿಸಬೇಕು ಎನ್ನುತ್ತಾ ಮೈಗ್ರೇನ್ ಹಾಗೂ ಅನಿಮಿಯಾ ಬಗ್ಗೆ ವಿಸ್ತಾರವಾಗಿ ವಿವರಿಸಿದರು.
ಬಳಿಕ ಸದಸ್ಯರೊಡನೆ ಸಂವಾದ ಕಾರ್ಯಕ್ರಮದಲ್ಲಿ ಬಿ.ಪಿ, ಮಧುಮೇಹ ಇತ್ಯಾದಿಗಳ ಬಗೆಗೆ ಇದ್ದ ಸಂಶಯಗಳನ್ನು ನಿವಾರಿಸಿದರು.
ವೇದಾವತಿಯವರು ಕಾರ್ಯಕ್ರಮ ನಿರೂಪಿಸಿದರು. ಚಂಚಲಾಕ್ಷಿಯವರು ವಂದಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ