ಮಕ್ಕಳ ಕೈಯಲ್ಲಿ ಮೊಬೈಲ್ ಕೊಡುವ ಮುನ್ನ ಎಚ್ಚರವಿರಲಿ

Chandrashekhara Kulamarva
0

 


ಮೊಬೈಲ್ ಎಷ್ಟು ಪ್ರಯೋಜನಕಾರಿಯೋ ಅಷ್ಟೇ ಅಪಾಯಕಾರಿ. ಮೊಬೈಲ್ ನ ಬಲೆಗೆ ಬಿದ್ದ ಮಕ್ಕಳು ತಮ್ಮ ಜೀವವನ್ನೇ ಕಳೆದುಕೊಂಡಿದ್ದಾರೆ. ಮಕ್ಕಳ ಕೈಯಲ್ಲಿ ಮೊಬೈಲ್ ಕೊಡುವ ಮುನ್ನ ಒಂದು ಬಾರಿ ಯೋಚನೆ ಮಾಡಿ ಪೋಷಕರೇ, ನನ್ನ ಮಗು, ನನ್ನ ಆಸ್ತಿ.ಆ ಆಸ್ತಿಗೆ ಈ ಮೊಬೈಲ್ ಎಂಬ ಮಾಣಿಕ್ಯ ಕೊಟ್ಟರೆ ಆ ಮಗುವಿನ ಭವಿಷ್ಯ ಏನಗಬಹುದೆಂದು? ಇತ್ತೀಚಿನ ದಿನಗಳಲ್ಲಿ ಮಕ್ಕಳು ಬದಲಾವಣೆ ಈ ಮೊಬೈಲಿನಿಂದಲೇ ಎಂದು ಹೇಳಬಹುದು. ನನ್ನ ಪ್ರಕಾರ ಹೆತ್ತವರು ದೊಡ್ಡ ತಪ್ಪು ಮಾಡುವುದೇನೆಂದರೆ ಮಕ್ಕಳು ಹಠ, ಕೋಪಗೊಂಡಗ ಆಗೂ ಊಟ ಮಾಡದೆ ಇದ್ದಾಗ ಮೊಬೈಲ್ ಕೊಟ್ಟು ಸಮಾಧಾನ ಮಾಡುವುದರ ಬದಲು ಬೈದು ಬುದ್ಧಿ ಹೇಳಿ. ಮೊಬೈಲ್ ಮಕ್ಕಳ ಆರೋಗ್ಯಕ್ಕೆ ತುಂಬಾ ಹಾನಿಕರ.


ಮೊಬೈಲ್ ಬಳಸುವುದು ನಾನು ತಪ್ಪೆಂದು ಹೇಳುತ್ತಿಲ್ಲ, ಆದರೆ ಅತಿಯಾದ ಬಳಕೆ ಸರಿಯಲ್ಲ. ಈ ಮೊಬೈಲ್, ಕಂಪ್ಯೂಟರ್ ಟಿವಿ ಇವೆಲ್ಲಾ ಮಕ್ಕಳ ಕಣ್ಣಿನ ದೃಷ್ಟಿಗೆ ಅಪಾಯಕಾರಿ. ಹಾಗೂ ಕಣ್ಣಿನ ದೃಷ್ಟಿ ಮಸುಕಾಗಬಹುದು. ಈ ಮೊಬೈಲಲ್ಲಿ ಆಟವಾಡುವುದರ ಬದಲು ಪ್ರಕೃತಿಯ ಮಡಿಲಲ್ಲಿ ಆಟವಾಡಿ. ಆರೋಗ್ಯಕ್ಕೂ ಒಳ್ಳೆದು ಮನಸ್ಸಿಗೂ ನೆಮ್ಮದಿ.


ಈಗಿನ ದಿನಗಳಲ್ಲಿ ಮಕ್ಕಳು ಸಂಜೆ ಶಾಲೆ ಬಿಟ್ಟ ಕೊಡಲೇ ಮನೆಗೆ ತಲುಪಿದ ತಕ್ಷಣ ಬ್ಯಾಗ್ ಅನ್ನೂ ಎಸೆದು ಅಮ್ಮ ಮೊಬೈಲ್ ಎಲ್ಲಿ ಇಟ್ಟಿದ್ದಿಯಾ? ಕೊಡು ಬೇಗ ನನಗೆ ಟೀಚರ್ ಬರೆಲಿಕೆ ಕೊಟ್ಟಿದ್ದಾರೆ ಎಂದು ಅಮ್ಮನಲ್ಲಿ ಸುಳ್ಳು ಹೇಳಿ ಹಾಗೂ ಗದರಿಸಿ ಕೇಳುವಷ್ಟು ಮಕ್ಕಳು ಮುಂದುವರೆದಿದ್ದಾರೆ.


ಈ ಮೊಬೈಲ್ ನಿಂದ ಮಕ್ಕಳ ಬದಲಾವಣೆ ಎಷ್ಟು ಆಗಿದೆ ಅಂದರೆ ಹೇಳಲು ಸಾಧ್ಯವಿಲ್ಲ. ಅತಿ ಹೆಚ್ಚಿನ ಮನೆಗಳಲ್ಲಿ ತಂದೆ ತಾಯಿ ಕೆಲಸಕ್ಕೆ ಹೋಗುತ್ತಾರೆ. ಮನೆಗೆ ಬರುವಾಗ ಸಂಜೆ ಆದಾಗ ಮಕ್ಕಳಲ್ಲಿ ಮಾತಾಡುವಷ್ಟು ಸಮಯ ಇರುವುದಿಲ್ಲ. ಆಗ ಮೊಬೈಲ್ ಕೊಟ್ಟು ಬಿಡ್ತೀರಿ. ದಯವಿಟ್ಟು ಹಾಗೆ ಮಾಡಬೇಡಿ ನಿಮ್ಮಾ ಮಕ್ಕಳನ್ನು ನೀವೇ ಅಪಾಯಕ್ಕೆ ಸಿಲುಕಿಸುತ್ತಿರಿ. ಒಮ್ಮೆ ತಲೆ ಬಾಗಿಸಿದರೆ, ತಲೆ ಎತ್ತದ ಹಾಗೆ ಮಾಡುತ್ತೆ ಈ ಮೊಬೈಲ್. ದಯವಿಟ್ಟು ನಿಮ್ಮ ಮಕ್ಕಳಿಗೆ ಮೊಬೈಲ್ ಕೊಡದೆ ಅದನ್ನು ದೂರ ಇಟ್ಟು, ನೀವು ಅವರ ಜೊತೆ ಇರಿ. ನಿಮ್ಮ ಮಕ್ಕಳು ನಿಮ್ಮ ಜವಾಬ್ದಾರಿ.


- ದೀಕ್ಷಿತ. ಜೆ 

ದ್ವಿತೀಯ ವಾಣಿಜ್ಯ ವಿಭಾಗ,

ವಿವೇಕಾನಂದ ಕಾಲೇಜು, ಪುತ್ತೂರು

إرسال تعليق

0 تعليقات
إرسال تعليق (0)
To Top