ಬೆಂಗಳೂರು: ಬಸವನಗುಡಿ ರಸ್ತೆಯಲ್ಲಿರುವ ಪುತ್ತಿಗೆ ಮಠ ಶ್ರೀ ಗೋವರ್ಧನಗಿರಿಯಲ್ಲಿ ಪರಮಪೂಜ್ಯ ಶ್ರೀ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದಂಗಳವರ ಆದೇಶಾನುಸಾರ ಏಪ್ರಿಲ್ 13 ರಿಂದ 28ರ ವರೆಗೆ ಒಟ್ಟು 15 ದಿನಗಳ "ವಸಂತ ಧಾರ್ಮಿಕ ಶಿಬಿರ-2024" ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.
ಈ ಶಿಬಿರದಲ್ಲಿ ಬಾಲಕರಿಗೆ ದೇವತಾ ಪೂಜೆ, ಅಗ್ನಿಕಾರ್ಯ, ವಿವಿಧ ಸ್ತೋತ್ರಗಳು, ಯೋಗ ಮುಂತಾದವುಗಳನ್ನು ಕಲೆಸಿಕೊಟ್ಟರೆ, ಬಾಲಕಿಯರಿಗೆ ರಂಗೋಲಿ ಬಿಡಿಸುವುದು, ಹೊಸ್ತಿಲು ಪೂಜೆ ಮಾಡುವುದು, ಲಕ್ಷ್ಮೀ ಶೋಬಾನೆ, ದೇವರ ನಾಮಗಳು, ಯೋಗ ಮತ್ತು ಇನ್ನಿತರ ಸಂಪ್ರದಾಯಗಳನ್ನು ಕಲೆಸಿಕೊಡಲಾಯಿತು.
ಈ ಕಾರ್ಯಕ್ರಮದ ಸಮಾರೋಪ ಸಮಾರಂಭವು ಏಪ್ರಿಲ್ 28, ಭಾನುವಾರ ಜರುಗಿತು. ಇದರ ಅಧ್ಯಕ್ಷತೆಯನ್ನು ಪುತ್ತಿಗೆ ಮಠದ ಪ್ರಾಂಶುಪಾಲರಾದ ವಿ|| ಸುನೀಲ್ ಆಚಾರ್ಯ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ವಾದಿರಾಜ ಅಗ್ನಿಹೋತ್ರಿ, ಸಮನಾ ಕೃಷ್ಣರಾಜ ಭಟ್, ಸುಬ್ರಹ್ಮಣ್ಯ ನಕ್ಷತ್ರಿ, ಸೌಮ್ಯಾ ಜೋಶಿ, ಪ್ರತಿಮಾ ಉಡುಪ, ಶ್ರೀಪತಿ ಉಪಾಧ್ಯಾಯ ಮತ್ತು ಶ್ರೀ ಬಾಲಸುಬ್ರಹ್ಮಣ್ಯ ಭಟ್ ಇವರುಗಳು ಆಗಮಿಸಿದ್ದರು. ಶಿಬಿರದ ಕೊನೆಯ ಎರಡು ದಿನಗಳಲ್ಲಿ ಮಕ್ಕಳಿಗೆ ಹಲವಾರು ಸಾಂಸ್ಕೃತಿಕ ಸ್ಪರ್ಧೆಗಳನ್ನು ಏರ್ಪಡಿಸಿ, ವಿಜೇತರಿಗೆ ಬಹುಮಾನ ಮತ್ತು ಪ್ರಶಸ್ತಿ ಪತ್ರಗಳನ್ನೂ ಹಾಗೂ ಶಿಬಿರದಲ್ಲಿ ಭಾಗವಹಿಸಿದ್ದ ಎಲ್ಲಾ ಮಕ್ಕಳಿಗೆ "ಪ್ರಶಸ್ತಿ ಪತ್ರ" ಮತ್ತು ಶ್ರೀಪಾದಂಗಳವರ ಆದೇಶದ ಮೇರೆಗೆ "ಕೋಟಿ ಲೇಖನ ಪುಸ್ತಕ"ಗಳನ್ನು ವಿತರಿಸಲಾಯಿತು.
ಈ ಕಾರ್ಯಕ್ರಮವು ತೌಳವ ಮಾಧ್ವ ಒಕ್ಕೂಟ ಮತ್ತು ಶಶಿಧರ ಆಚಾರ್ಯ ಇವರ ಸಹಯೋಗದಲ್ಲಿ ಜರುಗಿತು. ಈ ವಿಶೇಷ ಶಿಬಿರ ಕಾರ್ಯಕ್ರಮದಲ್ಲಿ ಸಹಕರಿಸಿದ ಎಲ್ಲಾ ಮಹನೀಯರಿಗೆ ಎ.ಬಿ. ಕುಂಜಾರು ಅವರು ಕೃತಜ್ಞತೆಗಳನ್ನು ಸಲ್ಲಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ