ಮಂಗಳೂರು: ಅಮೆಜಾನ್ ಇಂಡಿಯಾ ಕಂಪನಿಯು ಪ್ರೊಪೆಲ್ ಕಾರ್ಯಕ್ರಮದ ನಾಲ್ಕನೆಯ ಆವೃತ್ತಿಯನ್ನು ಇಂದು ಘೋಷಿಸಿದೆ. ಈ ಕಾರ್ಯಕ್ರಮವು ಗ್ರಾಹಕ ಉತ್ಪನ್ನಗಳ ವಲಯದ ನವೋದ್ಯಮಗಳಿಗೆ ಜಾಗತಿಕ ಮಟ್ಟದಲ್ಲಿ ಉತ್ತೇಜನ ಒದಗಿಸುವ ಉದ್ದೇಶ ಹೊಂದಿದೆ.
ಪ್ರೊಪೆಲ್ ಎಸ್4 ಕಾರ್ಯಕ್ರಮವು ಗರಿಷ್ಠ 50 ನವೋದ್ಯಮಗಳಿಗೆ ಅಂತರರಾಷ್ಟ್ರೀಯ ಮಾರುಕಟ್ಟೆಯನ್ನು ಪ್ರವೇಶಿಸಲು, ಭಾರತದ ಬ್ರ್ಯಾಂಡ್‍ಗಳನ್ನು ಜಾಗತಿಕ ಮಟ್ಟದಲ್ಲಿ ಬೆಳೆಸಲು ನೆರವು ಒದಗಿಸಲಿದೆ. ಈ ಕಾರ್ಯಕ್ರಮದಲ್ಲಿ ಭಾಗಿಯಾಗುವ ನವೋದ್ಯಮಗಳು 1.5 ಮಿಲಿಯನ್ ಡಾಲರ್‍ಗಿಂತ ಹೆಚ್ಚಿನ ಮೊತ್ತದ ಬಹುಮಾನ ಪಡೆಯಲು ಅವಕಾಶ ಇದೆ. ಎಡಬ್ಲ್ಯೂಎಸ್ ಕ್ರೆಡಿಟ್‍ಗಳು, ಆರು ತಿಂಗಳ ಅವಧಿಗೆ ಉಚಿತವಾಗಿ ಸರಕು ಸಾಗಣೆ ಸೌಲಭ್ಯ ಹಾಗೂ ಖಾತೆ ನಿರ್ವಹಣೆಗೆ ನೆರವು, ಮೊದಲ ಮೂವರು ವಿಜಯಿಗಳಿಗೆ ಅಮೆಜಾನ್ ಕಡೆಯಿಂದ ಒಟ್ಟು 1,00,000 ಡಾಲರ್ ನೆರವು ಇದರಲ್ಲಿ ಸೇರಿವೆ ಎಂದು ಅಮೆಜಾನ್ ಇಂಡಿಯಾ ಕಂಪನಿಯ ಜಾಗತಿಕ ವ್ಯಾಪಾರದ ನಿರ್ದೇಶಕ ಭೂಪೆನ್ ವಕಾಂಕರ್ ಹೇಳಿದ್ದಾರೆ.
ಈ ಕಾರ್ಯಕ್ರಮಕ್ಕೆ ಅರ್ಜಿಯನ್ನು ಇಂದಿನಿಂದ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಕಡೆಯ ದಿನ ಜೂನ್ 14, 2024. ಕಾರ್ಯಕ್ರಮದಲ್ಲಿ ಭಾಗಿಯಾಗಲು ಬಯಸುವವರು ತಮ್ಮ ಉದ್ಯಮದ ಸ್ವರೂಪದ ಬಗ್ಗೆ ಮಾಹಿತಿ ಒದಗಿಸಬೇಕಾಗುತ್ತದೆ.
ಗ್ರಾಹಕ ಬಳಕೆಯ ಉತ್ಪನ್ನಗಳ ವಲಯದಲ್ಲಿ ಇರುವ, ತಮ್ಮ ಉತ್ಪನ್ನಗಳನ್ನು ಜಾಗತಿಕ ಮಾರುಕಟ್ಟೆಗೆ ತಲುಪಿಸಬೇಕು ಎಂಬ ಬಯಕೆ ಹೊಂದಿರುವ ನವೋದ್ಯಮಗಳು ಈ ಕಾರ್ಯಕ್ರಮಕ್ಕೆ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ www.amazon.in/propel ಗೆ ಭೇಟಿ ನೀಡಬಹುದು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ