|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಉದ್ಯಮ ಕೌಶಲ್ಯ ಅಭಿವೃದ್ದಿ ಫೆಸ್ಟ್ ನಿಂದ ಸಾಧ್ಯ

ಉದ್ಯಮ ಕೌಶಲ್ಯ ಅಭಿವೃದ್ದಿ ಫೆಸ್ಟ್ ನಿಂದ ಸಾಧ್ಯ

ಆಳ್ವಾಸ್ ಕಾಲೇಜಿನಲ್ಲಿ ವ್ಯವಹಾರ ನಿರ್ವಹಣೆ ಹಾಗೂ ಸಾಂಸ್ಕೃತಿಕ ಸಮಾವೇಶ  ‘ಎಂತೂಸಿಯಾ 2024'



ವಿದ್ಯಾಗಿರಿ: ಫೆಸ್ಟ್ (ಶೈಕ್ಷಣಿಕ ಹಬ್ಬ) ಗಳಿಂದ ವಿದ್ಯಾರ್ಥಿಗಳ ವೈಯಕ್ತಿಕ ಕೌಶಲ ವೃದ್ಧಿಸಿ, ಉದ್ಯಮದಲ್ಲಿ ಔದ್ಯೋಗಿಕ ಅಂಶಗಳನ್ನು ಕಲಿಯಲು ಸಹಕಾರಿ    ಎಂದು ಜೆ. ವಿ. ಸಮೂಹ ಸಂಸ್ಥೆಯ ನಿರ್ದೇಶಕಿ ಆತ್ಮಿಕಾ ಅಮೀನ್ ಹೇಳಿದರು. 


ಆಳ್ವಾಸ್ ಕಾಲೇಜಿನ ಮೋಹಿನಿ ಅಪ್ಪಾಜಿ ಸ್ಮಾರಕ ಸಭಾಂಗಣದಲ್ಲಿ ವ್ಯವಹಾರ ನಿರ್ವಹಣಾ ವಿಭಾಗವು ಹಮ್ಮಿಕೊಂಡ ವ್ಯವಹಾರ ನಿರ್ವಹಣೆ ಹಾಗೂ ಸಾಂಸ್ಕೃತಿಕ ಸಮಾವೇಶ ‘ಎಂತೂಸಿಯಾ 2024'ದಲ್ಲಿ ಅವರು ಮಾತನಾಡಿದರು. 


ಸ್ಪರ್ಧಾತ್ಮಕ ಗುಣವನ್ನು ಹೆಚ್ಚಿಸುವ ಜೊತೆಗೆ, ಸ್ಪರ್ಧೆಯಲ್ಲಿ ಭಾಗವಹಿಸುವ ಇತರರ ಜತೆ ಕಲಿಯುವುದು ಮುಖ್ಯ. ಇದರಿಂದ ಅನೇಕ ರೀತಿಯ ವಿಷಯಗಳನ್ನು ತಿಳಿಯಲು ಸಾಧ್ಯ ಎಂದರು. 


ವ್ಯವಹಾರ ನಿರ್ವಹಣಾ ವಿದ್ಯಾರ್ಥಿಗಳಿಗೆ ಸಂವಹನವೂ ಅವಶ್ಯಕವಾಗಿದ್ದು, ಈ ರೀತಿಯ ಸ್ಪರ್ಧೆಗಳನ್ನು ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಸಹಕಾರಿಯಾಗುತ್ತದೆ ಎಂದು ಹೇಳಿದರು. 


ದಕ್ಷಿಣ ಕನ್ನಡದಿಂದ ಹೆಚ್ಚು ಉದ್ಯಮಿಗಳು ಮುನ್ನಲೆಗೆ ಬರಬೇಕಿದೆ. ಇದರಿಂದ ಜಿಲ್ಲೆಯಲ್ಲಿ ಹೆಚ್ಚು ಉದ್ಯಮವೂ ಸೃಷ್ಟಿಯಾಗಿ ಆರ್ಥಿಕತೆಯ ಬೆಳವಣಿಗೆಯಾಗುತ್ತದೆ ಎಂದರು. 


ಮೂಡುಬಿದಿರೆಯ ನೋವ ಟ್ರೀ ಸಮಾಲೋಚನಾ ಸಂಸ್ಥೆ ಸ್ಥಾಪಕ ನಾಗರಾಜ್ ಬಿ  ಮಾತನಾಡಿ, ವಿದ್ಯಾರ್ಥಿಯಾಗಿ ದಿನ ನಿತ್ಯದ ಚಟುವಟಿಕೆಗಳಿಂದ ಕಲಿಕೆ ಅಗತ್ಯವಿದ್ದು, ಹೊರ ಜಗತ್ತಿನ ಸವಾಲುಗಳನ್ನು ಎದುರಿಸಲು ಸಿದ್ದರಾಗಬೇಕು ಎಂದು ಮಾರ್ಗದರ್ಶನ ನೀಡಿದರು. 


ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ ಆಳ್ವ ಮಾತನಾಡಿ, ವಿದ್ಯಾರ್ಥಿಗಳಿಗೆ ಕಾಲೇಜು ಸುರಕ್ಷಿತ ತಾಣವಾಗಿರುತ್ತದೆ. ಮುಂದೆ ಅವರು ಜೀವನದ ನಿಜವಾದ ಸವಾಲು ಎದುರಿಸಲು ಈ ಸುರಕ್ಷಿತ ತಾಣದಲ್ಲೇ ಸಿದ್ಧತೆ ಮಾಡಿಕೊಳ್ಳಬೇಕು ಎಂದರು. 


ಫೆಸ್ಟ್ಗಳಲ್ಲಿ ಸಾಧಕರ ಮಾತುಗಳಿಗೆ ವಿದ್ಯಾರ್ಥಿಗಳು ಕಿವಿಯಗುವುದರಿಂದ ಅವರ ಅನುಭವದೊಂದಿಗೆ ಜೀವನದ ಮಹತ್ವವನ್ನು ತಿಳಿಯಲು ಸಾಧ್ಯ ಎಂದರು. 


ವ್ಯವಹಾರಿಕ ಕುಟುಂಬದ ಹಿನ್ನಲೆಯಿಂದ ಬಂದ ಉದ್ಯಮಿಗಳಿಗೆ ವ್ಯವಹಾರ ನಡೆಸುವುದು ಸುಲಭ ಎನ್ನುವ ಕಲ್ಪನೆ ಎಲ್ಲರಲ್ಲಿಯೂ ಇರುವುದು ಸಹಜ, ಆದರೆ ಇಂತಹ ಹಿನ್ನಲೆಯೂ ಒಬ್ಬ ಉದ್ಯಮಿಯನ್ನು ಹೆಚ್ಚಿನ ಒತ್ತಡಕ್ಕೆ ಒಡ್ದುತ್ತದೆ ಎಂದರು. 


ಕಲಿಕೆಯ ವಿಷಯ ಯಾವುದೇ ಆಗಲಿ ಅದರಲ್ಲಿ ಪೂರ್ಣ ಪ್ರಯತ್ನದಿಂದ ಯಶಸ್ಸು ಸಾಧ್ಯ ಎಂದರು. 


ಆಳ್ವಾಸ್ ಕಾಲೇಜಿನ ಪ್ರಾಂಶುಪಾಲ ಡಾ. ಕುರಿಯನ್, ಆಡಳಿತಾಧಿಕಾರಿ ಬಾಲಕೃಷ್ಣ ಶೆಟ್ಟಿ ಹಾಗೂ ವ್ಯವಹಾರ ನಿರ್ವಹಣಾ ವಿಭಾಗದ ಡೀನ್ ಹಾಗೂ ಮುಖ್ಯಸ್ಥೆ ಸುರೇಖಾ ರಾವ್, ಫೆಸ್ಟ್ ಬೋಧಕ ಸಂಯೋಜಕಿಯರಾದ ಸೋನಿ ಎಸ್. ರಾಜ್, ಚೈತ್ರ ರಾವ್ ಹಾಗೂ ಶುಭಲಕ್ಷ್ಮಿ ಪಿ. ಬಿ. ಮತ್ತು ವಿದ್ಯಾರ್ಥಿ ಸಂಯೋಜಕರಾದ ಅಕ್ಷತಾ, ಸಾಯಿ ವಿಕಾಸ್ ಹಾಗೂ ಕೌಶಿಕ್ ಇದ್ದರು.

ಸಾದ್ವಿತಾ ದೇವೇಂದ್ರ ನಿರೂಪಿಸಿ, ದೀಪಿಕಾ ಶೆಟ್ಟಿ ಸ್ವಾಗತಿಸಿ, ಲಾವಣ್ಯ ವಂದಿಸಿದರು.


 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

0 Comments

Post a Comment

Post a Comment (0)

Previous Post Next Post