ಆರೋಗ್ಯದ ಅಪನಂಬಿಕೆಗಳನ್ನು ಹೋಗಲಾಡಿಸಿ: ಡಾ ಆಳ್ವ

Upayuktha
0

ಆಳ್ವಾಸ್‌ನಲ್ಲಿ ಉಚಿತ ಕಣ್ಣಿನ ತಪಾಸಣಾ ಶಿಬಿರ ಮತ್ತು ಕನ್ನಡಕ ವಿತರಣೆ  



ವಿದ್ಯಾಗಿರಿ: ‘ಅನುಭವಿಗಳು ಅಪನಂಬಿಕೆಯನ್ನು ಹೋಗಲಾಡಿಸಬೇಕು’’ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ ಆಳ್ವ ಹೇಳಿದರು.


ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಳ್ವಾಸ್ ಆಯುರ್ವೇದ ವೈದ್ಯಕೀಯ ಕಾಲೇಜು ಮತ್ತು ಆಸತ್ರೆ ಹಾಗೂ ಮಂಗಳೂರಿನ ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ, ಮೂಡುಬಿದಿರೆ ಜಿ.ಎಸ್.ಬಿ ಸಮಾಜ, ಭಾರತೀಯ ಜೈನ್ ಮಿಲನ್, ಬ್ರಾಹ್ಮಣ ಸಭಾ ಟ್ರಸ್ಟ್ ಸಹಯೋಗದಲ್ಲಿ ನಡೆದ ಉಚಿತ ಕಣ್ಣಿನ ತಪಾಸಣಾ ಶಿಬಿರ ಮತ್ತು ಕನ್ನಡಕ ವಿತರಣಾ ಕಾರ್ಯಕ್ರಮವನ್ನು ಮಂಗಳವಾರ ಉದ್ಘಾಟಿಸಿ ಅವರು ಮಾತನಾಡಿದರು.


ಮೂಢನಂಬಿಕೆ ಎಂಬುದು ನಮ್ಮ ಸಮಾಜದಲ್ಲಿ ತಾಂಡವವಾಡುತ್ತಿದೆ. ಇದರಿಂದ ಹೊರಬರಲು ನಾವು ಮೊದಲು ಭಯ ಹಾಗೂ ನಿರ್ಲಕ್ಷö್ಯವನ್ನು ಬಿಡಬೇಕು. 


ನಾನು ಈ ವೃತ್ತಿಗೆ ಬಂದಾಗ ಇದ್ದ ಚಿಕಿತ್ಸೆಗಳಿಗೂ, ಈಗಿನ ಚಿಕಿತ್ಸೆಗಳಿಗಳು ಬಹಳಷ್ಟು ವ್ಯತ್ಯಾಸ ಇವೆ. ಕ್ರಾಂತಿಕಾರಿ ಬದಲಾವಣೆಗಳು ನಡೆದಿವೆ. ಆದರೂ ನಮ್ಮ ಸಮಾಜದಲ್ಲಿ ಕಟ್ಟಕಡೆಯ ಜನ ಹಾಗೂ ಸಮುದಾಯಗಳಿಗೆ ಆರೋಗ್ಯ ಕುರಿತು ಮಾಹಿತಿಯೂ ಇರುವುದಿಲ್ಲ. ಅನುಭವದ ಕೊರತೆ ಇರುತ್ತದೆ ಎಂದರು. 


ನಾವು ಈ ಆರೋಗ್ಯ ತಪಾಸಣೆಯನ್ನು ಯಾವುದೇ ಜಾತಿ, ಊರು, ಭಾಷೆ, ಧರ್ಮಗಳ ಆಧಾರದ ಮೇಲೆ ಮಾಡುತ್ತಿಲ್ಲ. ಈ ಕಾರ್ಯ ಇಡೀ ಸಮುದಾಯದ ಉನ್ನತಿಗಾಗಿ ಹಾಗೂ ಒಳತಿಗಾಗಿ ನಡೆಯಬೇಕು ಎಂಬುದೇ ನಮ್ಮ ಉದ್ದೇಶ ಎಂದರು. 


ನಮ್ಮ ಸುತ್ತಮುತ್ತ ಆರೋಗ್ಯದ ಕಾಳಜಿ ಉಳ್ಳವರು ಹಾಗೂ ಆರೋಗ್ಯವನ್ನು ನಿರ್ಲಕ್ಷಿಸುವವರು ಇದ್ದರೂ ಅವರೆಲ್ಲರ ನಡುವೆ ಕಟ್ಟಕಡೆಯವರು ಇದರ ಮೂಲ ಫಲಾನುಭವಿಗಳಾಗಬೇಕು ಎಂದರು.


ಎರಡು ತಿಂಗಳಿಂದ ಆಳ್ವಾಸ್ ನಲ್ಲಿ ಉಚಿತ ನೇತ್ರ ತಪಾಸಣೆ ಶಿಬಿರ ನಡೆಯುತ್ತಿದ್ದು, ಇಂದು ನಡೆದ ಶಿಬಿರವು 7ನೇ ನೇತ್ರ ತಪಾಸಣೆ ಶಿಬಿರವಾಗಿದೆ. 


ಒಂದು ವರ್ಷದಲ್ಲಿ ಮೂಡುಬಿದಿರೆ ಸುತ್ತಮುತ್ತ 5,000 ಜನರಿಗೆ ಉಚಿತ ನೇತ್ರ ತಪಾಸಣೆ, 2,500 ಜನರಿಗೆ ಉಚಿತ ಕನ್ನಡಕ ವಿತರಣೆ ಹಾಗೂ 500 ಜನರಿಗೆ ಕಣ್ಣಿನ ಪೊರೆ ಶಸ್ತ್ರ ಚಿಕಿತ್ಸೆ ಆಗಬೇಕು ಎಂಬ ಉದ್ದೇಶದೊಂದಿಗೆ ನೇತ್ರ ತಪಾಸಣಾ ಶಿಬಿರವನ್ನು ನಡೆಸಲಾಗುತ್ತಿದೆ ಎಂದರು.

ಈ ಕಾರ್ಯಕ್ರಮದ ಯಶಸ್ಸಿಗೆ ವಿವಿಧ ಸಮುದಾಯದ ಪ್ರಮುಖರು ಕಾರಣೀಕರ್ತರಾಗಿದ್ದಾರೆ ಎಂದರು. 


ಮೂಡುಬಿದಿರೆಯ ವೆಂಕಟರಮಣ ಮತ್ತು   ಹನುಮಂತ ದೇವಸ್ಥಾನದ ಆಡಳಿತ ಮೊಕ್ತೇಸರ ಜಿ. ಉಮೇಶ್ ಪೈ, ಎಂ. ಜ್ಞಾನೇಶ್ವರ ಕೆ. ಪೈ, ರಾಜವರ್ಮ ಬೈಲಂಗಡಿ, ವಕೀಲರಾದ ಶ್ವೇತಾ ಜೈನ್, ಧನಲಕ್ಷ್ಮೀ ಗೇರುಬೀಜ ಕಾರ್ಖಾನೆ ಮಾಲಿಕರಾದ    ಶ್ರೀಪತಿ ಭಟ್, ಅಶ್ವತ್ಥಪುರ ಸೀತಾರಾಮಚಂದ್ರ ದೇವಸ್ಥಾನದ ಆಡಳಿತ ಮೊಕ್ತೇಸರ  ರಘುನಾಥ ಒಂಟಿಮಾರು, ಆದಿಶಂಕರ ಬ್ರಾಹ್ಮಣ ಪರಿಷತ್‌ನ ಎಂ. ದೇವಾನಂದ ಭಟ್, ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆಯ ಡಾ.ಲಕ್ಷ್ಮಿ ,  ಆಳ್ವಾಸ್ ಆಯುರ್ವೇದ ವೈದ್ಯಕೀಯ ಕಾಲೇಜು ಪ್ರಾಂಶುಪಾಲ ಡಾ.ಸಜಿತ್ ಎಂ ಇದ್ದರು. ಡಾ.ಮಂಜುನಾಥ್ ಭಟ್ ಸ್ವಾಗತಿಸಿ, ನವೀನ್.ಆರ್ ವಂದಿಸಿದರು.  ಡಾ. ಗೀತಾ.ಬಿ. ಮಾರ್ಕಂಡೆ ಕಾರ್ಯಕ್ರಮ ನಿರೂಪಿಸಿದರು.


ಇಲ್ಲಿವರೆಗೆ ನಡೆದ ಒಟ್ಟು 7 ಉಚಿತ ನೇತ್ರ ತಪಸಣಾ ಶಿಬಿರದಲ್ಲಿ 1192 ಜನ ಪಾಲ್ಗೊಂಡು, 624 ಜನರಿಗೆ ಕನ್ನಡಕ ವ್ಯವಸ್ಥೆ ನಿರ್ಮಿಸಿ, 191 ಜನರು  ಕಣ್ಣಿನ ಪೂರೆ ಶಸ್ತçಚಿಕಿತ್ಸೆಗೆ ಹೆಸರು ನೋಂದಾಯಿಸಿಕೊಂಡರು.


 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top