ಆಳ್ವಾಸ್ ಚಿಗುರು ವಿದ್ಯಾರ್ಥಿ ವೇದಿಕೆಯ ಸ್ವಚ್ಛ ಮನಸ್ಸು ಉಪನ್ಯಾಸ ಕಾರ್ಯಕ್ರಮ
ವಿದ್ಯಾಗಿರಿ: ಮನಸ್ಸು ಸ್ವಚ್ಛವಾದರೆ ಮಾತ್ರ ನಮ್ಮ ಸಮಾಜ ಸ್ವಚ್ಛವಾಗಲು ಸಾಧ್ಯ ಎಂದು ಮಂಗಳೂರಿನ ರಾಮಕೃಷ್ಣ ಮಿಷನ್‌ನ ‘ಸ್ವಚ್ಛ ಭಾರತ’ ಮಿಷನ್‌ನ ಸಂಯೋಜಕ ರಂಜನ್ ಬೆಳ್ಳರ್ಪಾಡಿ ನುಡಿದರು.
ಆಳ್ವಾಸ್ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ನಡೆದ ಚಿಗುರು ವಿದ್ಯಾರ್ಥಿ ವೇದಿಕೆಯ ವತಿಯಿಂದ ‘ಸ್ವಚ್ಛ ಭಾರತ ನಿರ್ಮಾಣದಲ್ಲಿ ಸ್ವಚ್ಛ ಮನಸ್ಸು’’ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸ್ವಚ್ಛತೆಯ ಕೆಲಸದಲ್ಲಿ ನಮ್ಮನ್ನು ನಾವು ತೊಡಗಿಸಿಕೊಂಡಾಗ, ಇತರರು ಎಸೆದ ಕಸವನ್ನು ಎತ್ತುವುದರಿಂದ ನಮ್ಮಲ್ಲಿ ನಾವು ಕಸ ಎಸೆಯುವ ಪ್ರವೃತ್ತಿಯನ್ನು ಕಡಿಮೆ ಮಾಡಿಕೊಳ್ಳಬಹುದು. ಪ್ರತಿ ನಾಗರೀಕ, ಸಮಾಜದಲ್ಲಿ ಸ್ವಚ್ಛತೆಗೆ ಅತೀ ಹೆಚ್ಚು ಮಹತ್ವವನ್ನು ನೀಡಬೇಕಿದೆ. ಪುರಾತನ ನಾಗರೀಕತೆಗಳಾದ ಹರಪ್ಪ ಹಾಗೂ ಮೊಹೆಂಜೊದಾರೋದಲ್ಲಿ ಸ್ವಚ್ಛತೆಗೆ ನೀಡಿದ ಮಹತ್ವವನ್ನು ಕಾಣಬಹುದು ಎಂದರು.
ಎಲ್ಲರೂ ನಮ್ಮವರು ಎನ್ನುವ ವಿವೇಚನೆ ನಮ್ಮಲ್ಲಿ ಮೂಡಿದರೆ ಮಾತ್ರ ನಮ್ಮ ಮನಸ್ಸು ಸ್ವಚ್ಛವಾಗಲು ಸಾಧ್ಯ. ಈ ಕಾರ್ಯಕ್ರಮವೂ ಬಸವಣ್ಣನವರ ಜಯಂತಿಯAದೇ ನಡೆದಿರುವುದು ಅತ್ಯಂತ ಸಂತಸ ಉಂಟುಮಾಡಿದೆ. ರಜೆಯನ್ನು ತ್ಯಜಿಸಿ ಕಾರ್ಯಕ್ರಮದಲ್ಲಿ ಸೇರುವ ಮೂಲಕ ಬಸವಣ್ಣನವರ ಕಾಯಕವೇ ಕೈಲಾಸ ತತ್ವಕ್ಕೆ ಈ ಕಾರ್ಯಕ್ರಮವೂ ಸಾಕ್ಷಿಯಾಗಿದೆ ಎಂದು ಹೇಳಿದರು.
ವೃತ್ತಿ ಪ್ರವೃತ್ತಿ ಒಂದೇ ಆದಾಗ ರಜೆಯ ಪ್ರಶ್ನೆಯೇ ಬರುವುದಿಲ್ಲ. ಆದರೆ, ಇವೆರಡು ಬೇರೆಯದಾಗ ಮಾತ್ರ ನಾವು ವಾರಾಂತ್ಯದ ಬಯಕೆಯಲ್ಲಿ ಇರುತ್ತೇವೆ. ಯುಜನತೆಯೂ ತಮ್ಮ ಮುಂದಿನ ಗುರಿಯನ್ನು ಸಾಧಿಸಲು ಅವಶ್ಯಕವಾದ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು ಎಂದರು.
ಕೃತಕ ಬುದ್ದಿಮತ್ತೆಯ (ಎಐ) ಬೆಳವಣಿಗೆಯಿಂದಾಗಿ ಮುಂದೆ ವಿದ್ಯಾರ್ಥಿಗಳಿಗೆ ದೊಡ್ಡ ಮಟ್ಟದ ಸವಾಲುಗಳು ಎದುರಾಗುತ್ತವೆ, ಸ್ವಬುದ್ಧಿಯಿಂದ ಕೆಲಸ ಮಾಡದೆ ಹೋದರೆ ಕೃತಕ ಬುದ್ದಿಮತ್ತೆಯೂ ನಮ್ಮ ಉದ್ಯೋಗವನ್ನು ಕಸಿದುಕೊಳ್ಳಬಹುದು ಎಂಬ ಸೂಚನೆ ನೀಡಿದರು.
ವಿವೇಕಾನಂದರ ಆ ಕಾಲದ ಆಲೋಚನೆಯಿಂದಾಗಿ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಸ್ಥಾಪನೆಗೊಂಡಿತು, ಇದರಿಂದಾಗಿ ಇಂದು ಭಾರತದ ಮಂಗಳಯಾನ ಹಾಗೂ ಇತರ ಸಾಧನೆಗಳಿಗೆ ಕಾರಣವಾಯಿತು ಎಂದರು.
ಆಳ್ವಾಸ್ ಪದವಿಪೂರ್ವ ಕಾಲೇಜಿನ ಕನ್ನಡ ವಿಭಾಗದ ಉಪನ್ಯಾಸಕಿ ಡಾ. ಸುಲತಾ, ಭೂಮಿ ಕಲುಷಿತವಾಗಿ ಮಾಲಿನ್ಯ ಹೆಚ್ಚಾಗಿದೆ. ದೇಶ ಸ್ವಚ್ಛವಾಗಬೇಕಾದರೆ ನಮ್ಮ ಮನೆಯ ಅಂಗಳ ಸ್ವಚ್ಛವಾಗಬೇಕಿದೆ ಹಾಗೂ ಇದರ ಜೊತೆಗೆ ನಮ್ಮ ಮನಸ್ಸನ್ನು ಕೂಡ ನಾವು ಶುಚಿಗೊಳಿಸಬೇಕಿದೆ ಎಂದರು.
ದೇಶವನ್ನು ಕಟ್ಟಲು ನಮ್ಮಲ್ಲಿನ ಸಂಕಲ್ಪ ಶಕ್ತಿಯು ಅವಶ್ಯಕ. ನಮಗೆ ನಾವು ಗುರುಗಳಾಗಿ ನಮ್ಮನ್ನು ನಾವು ತಿದ್ದಿಕೊಂಡು ನಮ್ಮ ಜೀವನದ ಸರ್ವತೋಮುಖ ಅಭಿವೃದ್ಧಿ ಮಾಡಿಕೊಳ್ಳಬಹುದು ಎಂದು ಹೇಳಿದರು.
ವಿದ್ಯಾರ್ಥಿ ವೈಭವ್ ಯು ಕಾರ್ಯಕ್ರಮ ನಿರೂಪಿಸಿ, ವಿದ್ಯಾರ್ಥಿನಿ ಕೃತಿಕ್ಷಾ ವಂದಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ