ಆಳ್ವಾಸ್ ಸೆಂಟ್ರಲ್ ಸ್ಕೂಲ್- ಸಿಬಿಎಸ್‍ಸಿ: ಆಳ್ವಾಸ್‍ನ 73 ವಿದ್ಯಾರ್ಥಿಗಳು 90% ಕ್ಕೂ ಹೆಚ್ಚು ಅಂಕದ ಸಾಧನೆ

Upayuktha
0

ಮೂಡುಬಿದಿರೆ: ಸಿಬಿಎಸ್‍ಸಿ ಈ ಬಾರಿಯ ಹತ್ತನೆ ತರಗತಿಯ ಫಲಿತಾಂಶ ಪ್ರಕಟಿಸಿದ್ದು ಸತತ ನಾಲ್ಕನೇ ವರ್ಷ ಆಳ್ವಾಸ್ ಶಾಲೆಯು 100% ಫಲಿತಾಂಶ ದಾಖಲಿಸಿದೆ. ಆಳ್ವಾಸ್ ಶಾಲೆಯ 17 ವಿದ್ಯಾರ್ಥಿಗಳು 95%ಕ್ಕಿಂತ ಹೆಚ್ಚು ಅಂಕ ಪಡೆಯುವ ಮೂಲಕ ಶ್ರೇಷ್ಠ ಸಾಧನೆ ಮೆರೆದಿದ್ದಾರೆ. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಒಂದು ಶಾಲೆಯಿಂದ 95 ಶೇಕಡಾಕ್ಕಿಂತ ಹೆಚ್ಚು ಅಂಕ ಪಡೆದವರ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಆಳ್ವಾಸ್ ಪ್ರಥಮ ಸ್ಥಾನ ಪಡೆದಿದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಹೇಳಿದರು.


ಪತ್ರಿಕಾಗೋಷ್ಟಿಯಲ್ಲಿ ಮಾತಾಡಿದ ಅವರು ಮನ್ವಿತ್ ಎಸ್ ಪದ್ಮಶಾಲಿ, ಮೆಲ್ವಿನ್ ಜಾನ್ ಡಿ, ಪೂರ್ವಿಕ ಜಿ ರಾವ್ (98%), ನಿಧಿ ಜೆ ಶೆಟ್ಟಿ, ಹರ್ಷದಾ ಬಿ ಎಚ್ (97%), ಸಮೀಕ್ಷ ಎಂ, ನಿಧಿ ಬೆಡೆಕರ್, ಎಮ್‍ಎಸ್ ಪಲ್ಲವಿ, ಕ್ರಿಷ್ ಮಂಜುನಾಥ್ ಶೆಟ್ಟಿ, ಚೇತನ್‍ಎಸ್ ವಿ, ದರ್ಶನ್ ಹೆಚ್ ಜೆ (96%), ಶ್ರವಣ್ ಬೆಳಿರಾಯ, ಮಾನಸೀ ವೆಂಕಟೇಶ್ ದಂಬಾಲ್, ಅನುಶ್ರೀ ಹೆಚ್, ತರಂಗ್ ಸಿ, ಅದೀಶ ಸಿ, ಅಭಯ್‍ಕಿರಣ (95%) ಅಂಕಗಳನ್ನು ಪಡೆಯುವುದರ ಮೂಲಕ ಸಾಧನೆ ಮಾಡಿದ್ದಾರೆ.


73 ವಿದ್ಯಾರ್ಥಿಗಳು 90% ಗಿಂತ ಹೆಚ್ಚು ಅಂಕ ಗಳಿಸಿದ್ದು, 10 ವಿದ್ಯಾರ್ಥಿಗಳು 94%, 10 ವಿದ್ಯಾರ್ಥಿಗಳು 93%, 8 ವಿದ್ಯಾರ್ಥಿಗಳು 92%, 15 ವಿದ್ಯಾರ್ಥಿಗಳು 91%, 13 ವಿದ್ಯಾರ್ಥಿಗಳು 90% ಅಂಕಗಳನ್ನು ಗಳಿಸಿದ್ದಾರೆ.


ಸಂಸ್ಕೃತದಲ್ಲಿ 3 ವಿದ್ಯಾರ್ಥಿಗಳು, ಗಣಿತದಲ್ಲಿ ಒಬ್ಬ ವಿದ್ಯಾರ್ಥಿ, ಸಮಾಜ ವಿಜ್ಞಾನದಲ್ಲಿ ಒಬ್ಬ ವಿದ್ಯಾರ್ಥಿ ಶೇಕಡಾ 100 ಅಂಕ ಪಡೆದಿದ್ದಾರೆ.


ಪತಿಕಾಗೋಷ್ಠಿಯಲ್ಲಿ ಆಳ್ವಾಸ್ ಸಿ.ಬಿ.ಎಸ್.ಸಿ ಶಾಲೆಯ ಮುಖ್ಯ ಶಿಕ್ಷಕ ಮೊಹಮ್ಮದ್ ಶಫಿ ಶೇಖ್, ಆಡಳಿತಾಧಿಕಾರಿ ಪ್ರೀತಂ ಕುಂದರ್ ಉಪಸ್ಥಿತರಿದ್ದರು. 


Post a Comment

0 Comments
Post a Comment (0)
To Top