ಮಂಗಳೂರು: ಭಾರತದ ಪ್ರಮುಖ ಎಸ್‍ಯುವಿ ತಯಾರಕರಾದ ಮಹೀಂದ್ರಾ & ಮಹೀಂದ್ರಾ ಲಿಮಿಟೆಡ್ ಕಂಪನಿ ಇಂದು ಎಕ್ಸ್ ಯು ವಿ 3ಎಕ್ಸ್ ಓ ಅತ್ಯಾಧುನಿಕ ವಾಹನವನ್ನು ಮಂಗಳೂರು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಇದರ ಬೆಲೆ ರೂ. 7.49 ಲಕ್ಷದಿಂದ ಪ್ರಾರಂಭವಾಗುತ್ತದೆ.
ಕಾಂಪ್ಯಾಕ್ಟ್ ಎಸ್‍ಯುವಿ ವಿಭಾಗದಲ್ಲಿ ಹೊಸ ಮಾನದಂಡವನ್ನು ಸ್ಥಾಪಿಸುವಂತೆ ರೂಪಿತಗೊಂಡಿರುವ ಎಕ್ಸ್ ಯು ವಿ 3ಎಕ್ಸ್ ಓ ಅತ್ಯುತ್ತಮ ವಿನ್ಯಾಸ, ಪ್ರೀಮಿಯಂ ಇಂಟೀರಿಯರ್, ಆರಾಮದಾಯಕ ರೈಡ್, ಅತ್ಯಾಧುನಿಕ ತಂತ್ರಜ್ಞಾನ, ಅಪೂರ್ವ ಕಾರ್ಯಕ್ಷಮತೆ ಮತ್ತು ಅತ್ಯುತ್ತಮ ಸುರಕ್ಷತಾ ಸೌಕರ್ಯವನ್ನು ಹೊಂದಿದೆ. ಎಕ್ಸ್ ಯು ವಿ 3ಎಕ್ಸ್ ಓ ಮಹೀಂದ್ರಾದ ಹೊಸತನ ಮತ್ತು ಉತ್ಕೃಷ್ಟತೆಯೆಡೆಗಿನ ಬದ್ಧತೆಗೆ ಸಾಕ್ಷಿಯಾಗಿದೆ ಎಂದು ಎಂ & ಎಂ ಆಟೋಮೋಟಿವ್ ವಿಭಾಗದ ಅಧ್ಯಕ್ಷ ವಿಜಯ್ ನಕ್ರಾ ಪ್ರಕಟಣೆಯಲ್ಲಿ ಹೇಳಿದ್ದಾರೆ.
ಇದನ್ನು ಮುಂಬೈನ ಮಹೀಂದ್ರಾ ಇಂಡಿಯಾ ಡಿಸೈನ್ ಸ್ಟುಡಿಯೋದಲ್ಲಿ ಪರಿಕಲ್ಪಿಸಲಾದ್ದು, ಚೆನ್ನೈ ಬಳಿ ಇರುವ ಮಹೀಂದ್ರಾ ರಿಸರ್ಚ್ ವ್ಯಾಲಿ (ಎಂಆರ್‍ವಿ) ನಲ್ಲಿ ವಿನ್ಯಾಸಗೊಳಿಸಿ ಅಭಿವೃದ್ಧಿಪಡಿಸಲಾಗಿದೆ. ಎಕ್ಸ್ ಯು ವಿ 3ಎಕ್ಸ್ ಓ ಮಹೀಂದ್ರಾದ ಅತ್ಯುತ್ತಮ ಜಾಗತಿಕ ವಿನ್ಯಾಸ ತಂಡ ಮತ್ತು ಎಂಜಿನಿಯರಿಂಗ್ ತಂಡದ ವಿಶ್ವದರ್ಜೆಯ ಸಾಮರ್ಥ್ಯಕ್ಕೆ ಪುರಾವೆಯಾಗಿದೆ.
ಪ್ರತಿಯೊಂದು ವೇರಿಯಂಟ್ ಕೂಡ ಆಯಾ ವಿಭಾಗದ ನಿರ್ದಿಷ್ಟ ಅಗತ್ಯಗಳು ಮತ್ತು ಆದ್ಯತೆಗಳನ್ನು ಪೂರೈಸಲು ಅನುಗುಣವಾಗಿ ವಿನ್ಯಾಸಗೊಂಡಿದೆ. ಆ ನಿಟ್ಟಿನಲ್ಲಿ ಎಕ್ಸ್ ಯು ವಿ 3ಎಕ್ಸ್ ಓ ಮಹತ್ವದ ಎಸ್ ಯು ವಿ ಆಗಿದೆ.
ಎಕ್ಸ್ ಯು ವಿ 3ಎಕ್ಸ್ ಓ ಬುಕಿಂಗ್‍ಗಳು ಆನ್‍ಲೈನ್‍ನಲ್ಲಿ ಮತ್ತು ಮಹೀಂದ್ರಾ ಡೀಲರ್ ಶಿಪ್‍ಗಳಲ್ಲಿ ಮೇ 15 ರಿಂದ ಆರಂಭವಾಗುತ್ತವೆ. ಮೇ 26ರಿಂದ ವಿತರಣೆ ನಡೆಯಲಿದೆ ಎಂದು ಪ್ರಕಟಣೆ ವಿವರಿಸಿದೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ