ಪರಿಚಯ: ಯಕ್ಷಾದಿತ್ಯ ಪ್ರಭೆ

Upayuktha
0


ರಾವಳಿಯ ಸರ್ವಶ್ರೇಷ್ಠ ಕಲೆ ಯಕ್ಷಗಾನ, ಆಕರ್ಷಕ ವೇಷಭೂಷಣ, ಸಂಗೀತ, ನಾಟ್ಯ, ಅಭಿನಯ , ಮಾತುಗಾರಿಕೆಯಿಂದ ಕೂಡಿದ ಸರ್ವಾಂಗ ಸುಂದರ ಕಲೆಗೆ ವಿಶ್ವದೆಲ್ಲೆಡೆಯ ಜನ ಮಾರು ಹೋಗಿದ್ದಾರೆ. ಇಂತಹ ಮಹೋನ್ನತ ಕಲೆಯ ತಮ್ಮ ಪ್ರತಿಭೆಯನ್ನು ಪ್ರದರ್ಶನ ನೀಡಿತ್ತಿರುವ ಕಲಾವಿದ ಆದಿತ್ಯ ಹೆಗಡೆ ಯಡೂರು.


ಹೊಸನಗರ ತಾಲೂಕು ನಿಟ್ಟೂರಿನ ಮಹಾಬಲಗಿರಿ ಹಾಗೂ ಶ್ರೀದೇವಿ ಇವರ ಮಗನಾಗಿ 16.05.1996 ರಂದು ಜನನ. ಕರೆಸ್ಪಾಂಡೆನ್ಸ್ ನಲ್ಲಿ ದ್ವಿತೀಯ ವರ್ಷದ B.A ವ್ಯಾಸಂಗವನ್ನು ಮಾಡುತ್ತಿದ್ದಾರೆ. ಮಾವ, ಅಜ್ಜ, ಚಿಕ್ಕಪ್ಪಂದಿರಿಂದ ಹವ್ಯಾಸಿ ಯಕ್ಷಗಾನ ಕಲಾವಿದರಾದದಿಂದ ಆದಿತ್ಯ ಅವರು ಯಕ್ಷಗಾನ ರಂಗಕ್ಕೆ ಬರಲು ಪ್ರೇರಣೆಯಾಯಿತು.


ಡಿ.ಎಸ್ ಸುಬ್ರಹ್ಮಣ್ಯ ಮೂರ್ತಿ ನಿಟ್ಟೂರು, ಸತ್ಯನಾರಾಯಣ ಆಚಾರ್ ಮೇಳಿಗೆ(ಹೆಜ್ಜೆ), ಉದಯ ಹೊಸಾಳ, ಸದಾನಂದ ಐತಾಳ್ ಇವರ ಯಕ್ಷಗಾನ ಗುರುಗಳು.

ಯಕ್ಷಗಾನ ರಂಗದ ಎಲ್ಲಾ ಪ್ರಸಂಗ ಹಾಗೂ ವೇಷಗಳು ಇವರ ನೆಚ್ಚಿನನದು.

ಹಿರಿಯ ಕಲಾವಿದರಲ್ಲಿ ಕೇಳಿ ರಂಗಕ್ಕೆ ಹೋಗುವ ಮೊದಲು ಪಾತ್ರದ ಬಗ್ಗೆ ತಯಾರಿಯನ್ನು ಮಾಡಿಕೊಳ್ಳುತ್ತೇನೆ ಎಂದು ಹೇಳುತ್ತಾರೆ ಆದಿತ್ಯ ಹೆಗಡೆ ಯಡೂರು.


ಯಕ್ಷಗಾನದ ಇಂದಿನ ಸ್ಥಿತಿ ಗತಿ ಹಾಗೂ ಪ್ರೇಕ್ಷಕರ ಬಗ್ಗೆ ಅಭಿಪ್ರಾಯ:-

ಇಂದಿನ ಸ್ಥಿತಿ ಗತಿ ಹಾಗೂ ಪ್ರೇಕ್ಷಕರ ಬಗ್ಗೆ ಹೇಳುವಷ್ಟು ಅಧ್ಯಯನ ಹಾಗೂ ಅನುಭವ ಎರಡೂ ನನಗೆ ಇಲ್ಲ  ಎಂದು ಹೇಳುತ್ತಾರೆ ಆದಿತ್ಯ ಹೆಗಡೆ ಯಡೂರು.


ಯಕ್ಷಗಾನ ಪರಂಪರೆಯ ಶುದ್ಧತೆಯನ್ನು ಉಳಿಸಿ ಬೆಳೆಸುವುದು, ರಂಗದಲ್ಲಿ ಅನೇಕ ರೀತಿಯ ಪಾತ್ರವನ್ನು ಯಶಸ್ವಿಯಾಗಿ ನಿರ್ವಹಿಸುವುದು ಹಾಗೂ ಎರಡು ವರ್ಷದಿಂದ ಉಚಿತ ಹೆಜ್ಜೆ ತರಬೇತಿಯನ್ನು ನೀಡುತ್ತಿದ್ದೇನೆ ಅದನ್ನು ಮುಂದುವರೆಸಿ ಇನ್ನು ಅನೇಕ ಮಕ್ಕಳಿಗೆ ತರಬೇತಿಯನ್ನು ನೀಡಬೇಕು ಎಂಬ ಯೋಜನೆ ಇದೆ ಎಂದು ಹೇಳುತ್ತಾರೆ ಆದಿತ್ಯ ಹೆಗಡೆ ಯಡೂರು.


ಬರವಣಿಗೆ, ಚಿತ್ರ, ಸಿನಿಮಾ, ತಾಳಮದ್ದಳೆ, ಓದು ಇತ್ಯಾದಿ ಇವರ ಹವ್ಯಾಸಗಳು.

ಗುತ್ಯಮ್ಮ, ಮಾರಣಕಟ್ಟೆ, ಪೆರ್ಡೂರು, ಗೋಳಿಗರಡಿ ಮೇಳದಲ್ಲಿ ತಿರುಗಾಟ ಮಾಡಿದ ಅನುಭವ.


ತಂದೆ, ತಾಯಿಯ ಪ್ರೋತ್ಸಾಹ ಹಾಗೂ ಪ್ರೇರಣೆ, ಗುರುಗಳ ಮಾರ್ಗದರ್ಶನದಿಂದ ಯಕ್ಷಗಾನ ರಂಗದಲ್ಲಿ ಇಂದು ಸಾಧನೆ ಮಾಡಲು ಸಾಧ್ಯವಾಯಿತು ಎಂದು ಹೇಳುತ್ತಾರೆ ಆದಿತ್ಯ ಹೆಗಡೆ ಯಡೂರು.


ಇವರಿಗೆ ಇವರು ನಂಬಿರುವ ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು‌ ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ ಹಾಗೂ ಕಲಾಮಾತೆಯು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರೈಕೆಗಳು.

-ಶ್ರವಣ್ ಕಾರಂತ್ ಕೆ.


 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top