ಕಾಡು ಪ್ರಾಣಿ, ಪಕ್ಷಿಗಳಿಗೆ ನೀರುಣಿಸಿ

Upayuktha
0


ನೀರು ನಮ್ಮೆಲ್ಲರ ಜೀವನ ಪ್ರತಿಯೊಂದು ಹನಿ ಹನಿ ನೀರು ತುಂಬಾ ಮುಖ್ಯ ಗಿಡ ಮರ ಪ್ರಾಣಿ ಪಕ್ಷಿ ಹಾಗೂ ಮಾನವರಿಗೆ ನೀರು ಬೇಕೇ ಬೇಕು ದಿನೇ ದಿನೇ ಜಿಲ್ಲೆಯಲ್ಲಿ ಹೆಚ್ಚುತ್ತಿರುವ ತಾಪಮಾನ ಹಕ್ಕಿಗಳಿಗೆ ಬಿಸಿಲಿನ ಶಾಖದ ಹೊಡೆತದಿಂದ ರಕ್ಷಿಸಲು ಅವುಗಳಿಗೆ ಕುಡಿಯುವ ನೀರು ಒದಗಿಸುವುದು ಅತ್ಯವಶ್ಯಕ. ಹಿಂದೆ ಕೆರೆ ಕಟ್ಟೆಗಳಲ್ಲಿ ಸಾಕಷ್ಟು ನೀರಿದ್ದು ಇದೀಗ ಅವೆಲ್ಲ ಮಾಯವಾಗಿದೆ. ಬೋರ್ವೆಲ್‌ಗಳ ಹನಿ ಹನಿ ಸಿಂಚನ ಬಿಸಿಲಿನ ತೀವ್ರತೆಗೆ ಜನಸಾಮಾನ್ಯರಿಗೆ ಮಾತ್ರವಲ್ಲದೆ ಹಕ್ಕಿಗಳಿಗೆ ಕೂಡ ನೀರಿನ ಅಭಾವ ತೊಂದರೆಗಳಾಗುವ ಸಾಧ್ಯತೆ ಇದೆ.


ದಿನೇ ದಿನೇ ಎಲ್ಲೆಡೆ ನೀರಿಗಾಗಿ ಹಾಹಾಕಾರ. ಮನುಷ್ಯ ಮಾತ್ರ ಅಲ್ಲ ಪ್ರಾಣಿ ಪಕ್ಷಿಗಳು ನೀರಿಲ್ಲದೆ ಸೊರಗುತ್ತಿವೆ. ಎಲ್ಲೆಡೆ ಬತ್ತಿದ ನದಿ ತೊರೆಗಳು ಕೆರೆಕಟ್ಟೆಗಳು. ಕಾದ ಇಳೆಗೆ ತಂಪೆರೆಯಲು ವರುಣನೇ ಬರಬೇಕು. ಆದರೂ ಟಬ್ ಪಾತ್ರ ಮತ್ತು ಮಡಕೆಗಳಲ್ಲಿ ನೀರು ತುಂಬಿಸಿ ಇಡುವ ಮೂಲಕ ಪಕ್ಷಿಗಳು ಪ್ರಾಣಿಗಳಿಗೆ ನೀರುಣಿಸಿ ನಮ್ಮಿಂದ ಸಾಧ್ಯವಾದ ಮಟ್ಟಿಗೆ ನಮ್ಮಲ್ಲಿ ವೇಸ್ಟ್ ಎಂಬುದೇ ಇಲ್ಲ. ಗೆರಟೆ ಬಾಟಲ್ ಇವುಗಳನ್ನು ಸದ್ಬಳಕೆ ಮಾಡಿ ತಮ್ಮಿಂದಾಗುವ ಸಹಾಯ ಮಾಡಿ ನೀರುಣಿಸಿ. ಹೀಗೆ ಪ್ರಾಣಿ  ಪಕ್ಷಿಗಳಿಗೆ ದಣಿವಾರಿಸಿಕೊಳ್ಳಲು ವ್ಯವಸ್ಥೆ ಮಾಡಬೇಕು. ನಮ್ಮ ಬಿಡುವಿನ ವೇಳೆಯಲ್ಲಿ ನಾವು ಮಾಡುವ ಕೆಲಸವನ್ನು ನೋಡಿ ನಮ್ಮ ಮಕ್ಕಳು ಮಾಡುವಂತೆ ಪ್ರೇರೇಪಿಸುತ್ತದೆ. 


- ಕುಮಾರ ಪೆರ್ನಾಜೆ ಪುತ್ತೂರು


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  


إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top