ವಾತಾವರಣ ಬದಲಾವಣೆಯ ನಿರ್ಲಕ್ಷ್ಯ ಸಲ್ಲದು: ಪ್ರಶಾಂತ್ ನಾಯಕ್

Upayuktha
0


ಮಂಗಳೂರು: ಮನುಷ್ಯನ ವಿಕೃತ ಮನಸ್ಥಿತಿಯಿಂದಾಗಿ ಇಂದು ವಾತಾವರಣದಲ್ಲಿ ಬದಲಾವಣೆಯಾಗುತ್ತಿದೆ. ಜೊತೆಗೆ ವಾತಾವರಣದ ಬದಲಾವಣೆಯನ್ನು ನಿರ್ಲಕ್ಷ್ಯ ಮಾಡಿದರೆ ಮನುಷ್ಯ ಮುಂದೆ ಖಂಡಿತವಾಗಿಯೂ ಪಶ್ಚಾತ್ತಾಪ ಪಡಬೇಕಾಗುತ್ತದೆ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಜೀವವಿಜ್ಞಾನ ಪ್ರಾಧ್ಯಾಪಕ ಪ್ರೊ. ಪ್ರಶಾಂತ್‌ ನಾಯಕ್‌ ಕಳವಳ ವ್ಯಕ್ತಪಡಿಸಿದರು.


ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ಶಿವರಾಮ ಕಾರಂತ ಸಭಾಭವನದಲ್ಲಿ ಆಂತರಿಕ ಗುಣಮಟ್ಟ ಖಾತರಿ ಕೋಶದ ವತಿಯಿಂದ ಆಯೋಜಿಸಿದ್ದ ಪರಿಸರ ಮತ್ತು ಆರೋಗ್ಯ ಕುರಿತಾದ ವಿಶೇಷ ಉಪನ್ಯಾಸ ಹಾಗೂ ಪರಿಸರ ವಿಜ್ಞಾನ ಅಧ್ಯಯನ ಕುರಿತಾದ ಗ್ರಂಥ ಲೋಕಾರ್ಪಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.


ಭೂಮಿ ಮೇಲೆ ಕೋಟ್ಯಾಂತರ ಜೀವಿಗಳು ವಾಸವಾಗಿರುವುದು ಎಲ್ಲರಿಗೂ ಇಳಿದ ವಿಷಯವೇ ಆಗಿದೆ. ಆದರೆ ಭೂಮಿಯ ಜೊತೆಗೆ ನಂಟು ಹೊಂದಿರುವ ಜೀವರಾಶಿಗಳ ನಾಶಕ್ಕೆ ಮನುಷ್ಯನೇ ಕಾರಣವಾಗುತ್ತಿರುವುದು ವಿಷಾದನೀಯ. ಉತ್ತಮ ಆರೋಗ್ಯಯುತ ಸಮಾಜಕ್ಕಾಗಿ ಪರಿಸರ ಸ್ನೇಹಿ ಜೀವನಶೈಲಿ ಅತ್ಯಗತ್ಯ ಎಂದರು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲೆ ಡಾ. ಅನಸೂಯಾ ರೈ ವಹಿಸಿದ್ದರು. ಐಕ್ಯೂಏಸಿ ಸಂಯೋಜಕ ಡಾ. ಸಿದ್ಧರಾಜು ಎಂ. ಎನ್‌. ಉಪಸ್ಥಿತರಿದ್ದರು. 


إرسال تعليق

0 تعليقات
إرسال تعليق (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top