ಮತದಾನ ಜಾಗೃತಿಗಾಗಿ ಯಕ್ಷಗಾನ ವೇಷ ಧರಿಸಿ ಹೆಜ್ಜೆ ಹಾಕಿದ ಅಧಿಕಾರಿಗಳು

Upayuktha
0


ಉಡುಪಿ: ಪ್ರಸಕ್ತ ಲೋಕಸಭಾ ಚುನಾವಣೆಯ ಮತದಾನದ ಜಾಗೃತಿಗಾಗಿ ಉಡುಪಿ ಜಿಲ್ಲಾ ಸ್ವೀಪ್ ಸಮಿತಿಯು ಬಹಳಷ್ಟು ವಿಭಿನ್ನವಾದ ಜನಜಾಗೃತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಈಗಾಗಲೇ ಜನಜಾಗೃತಿ ಮೂಡಿಸುವಲ್ಲಿ ಸಫಲವಾಗಿರುವ ಜೊತೆಗೆ ಜನರ ಮೆಚ್ಚುಗೆಗೂ ಪಾತ್ರವಾಗಿವೆ.


ಜಿಲ್ಲೆಯೊಂದರ ಹಿರಿಯ ಅಧಿಕಾರಿಗಳ ತಂಡವೇ ಒಟ್ಟಾಗಿ ನಿಂತು ಮತದಾನ ಜಾಗೃತಿಗಾಗಿ ಯಕ್ಷಗಾನದ ವೇಷಗಳನ್ನು ಧರಿಸಿರುವುದು ಇದುವರೆಗೆ ಎಲ್ಲೂ ನಡೆದಿರದಂತಹ ಸನ್ನಿವೇಶ. ಯಕ್ಷಗಾನದ ಮೂಲಕ ಮತದಾನದ ಜಾಗೃತಿಯನ್ನು ಮೂಡಿಸಲು ಅತ್ಯುತ್ಸಾಹದಿಂದ ಪಾಲ್ಗೊಂಡವರು ಸ್ವತಃ ಜಿಲ್ಲಾ ಪಂಚಾಯತ್ ಉಡುಪಿಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳೂ ಹಾಗೂ ಉಡುಪಿ ಜಿಲ್ಲಾ ಸ್ವೀಪ್ ಸಮಿತಿಯ ಅಧ್ಯಕ್ಷರೂ ಆಗಿರುವ ಪ್ರತೀಕ್ ಬಾಯಲ್, ಭಾ.ಆ.ಸೇ. ಅವರಿಗೆ ಜೊತೆಯಾದವರು ಉಡುಪಿ ಜಿಲ್ಲಾ ಅಪರ ಜಿಲ್ಲಾಧಿಕಾರಿಗಳಾಗಿರುವ ಶ್ರೀಮತಿ ಮಮತಾದೇವಿ ಜಿ.ಎಸ್, ಸಹಾಯಕ ಆಯುಕ್ತರಾದ ಶ್ರೀಮತಿ ರಶ್ಮಿ ಎಸ್, ಉಡುಪಿ ಕರಾವಳಿ ಕಾವಲು ಪಡೆಯ ಪೊಲೀಸ್ ಅಧೀಕ್ಷಕರಾದ ಮಿಥುನ್. ಉಡುಪಿ ಜಿಲ್ಲೆಯು ಈ ಅಪೂರ್ವ ಕ್ಷಣಗಳಿಗೆ ಸಾಕ್ಷಿಯಾಯಿತು. 


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top