ಅಂದು ಆಕೆ ಯಾವುದೋ ಕಾರಣಕ್ಕಾಗಿ ಬೆಂಗಳೂರಿಗೆ ತೆರಳಬೇಕಿತ್ತು. ಆದ ಕಾರಣ ರಾತ್ರಿ ಹೊರಡುವ ಬಸ್ಸಲ್ಲಿ ಟಿಕೆಟ್ ಪಡೆದು ಪ್ರಯಾಣ ಮುಂದುವರಿಸುವಳು. ಒಂದು ಕಡೆ ಕಿಟಕಿಯ ಬದಿಯ ಸೀಟು ಇನ್ನೊಂದೆಡೆ ತಂಪಾದ ತಂಗಾಳಿ ಬೀಸತೊಡಗಿದವು. ಗಾಳಿಗೆ ಆಕೆಯ ಕೂದಲುಗಳು ಮುಖದ ಮೇಲೆ ಸ್ವಚಂದವಾಗಿ ಹಾರಾಡುತ್ತಿತ್ತು, ಪ್ರಯಾಣ ಮುಂದೆ ದಾರಿ ಸಾಗುತ್ತಲಿತ್ತು, ಸ್ವಲ್ಪ ಸಮಯದ ಬಳಿಕ ಒಂದು ಹೋಟೆಲ್ ಬಳಿ ಬಸ್ಸು ನಿಂತಿತ್ತು. ಎಲ್ಲರೂ ಬಸ್ಸಿನಿಂದ ಇಳಿದು ಕೆಲವರು ಹೋಟೆಲ್‌ಗೆ, ಇನ್ನೂ ಕೆಲವರೂ ಅಲ್ಲಿ ಇಲ್ಲಿ ಇದ್ದ ಸಣ್ಣ ಪುಟ್ಟ ಅಂಗಡಿಗಳಲ್ಲಿ ತಮಗೆ ಬೇಕಾದ ತಿಂಡಿ ತಿನಿಸುಗಳನ್ನು ಖರೀದಿಸಿ ಬಸ್ಸನ್ನೇರಿದರು.
ಸ್ವಲ್ಪ ಸಮಯದ ಬಳಿಕ ಪ್ರಯಾಣ ಮುಂದುವರಿದು ಕೊನೆಗೂ ಅಂತು ಇಂತು ಬೆಂಗಳೂರು ಸಿಟಿ ಬೆಳಗಿನ ಮುಂಜಾವಿನ ವೇಳೆ ತಲುಪಿತು. ಆಕೆಗೆ ಆ ಸಿಟಿ ಹೊಸದು, ಪರಿಚಯದವರು ಯಾರಿಲ್ಲ, ಮುಂದೆ ತಾನು ಅಲ್ಲಿಂದ ಇನ್ನೊಂದು ಊರಿಗೆ ಹೋಗಲು ಅಲ್ಲಿ ಇದ್ದವರ ಬಳಿ ಕೇಳಲು ಯಾಕೋ ಮನಸ್ಸಿಗೆ ಸಂಕೋಚದ ಜೊತೆ ಒಂದಷ್ಟು ಭಯ, ಈ ಮುಂಜಾವಿನ ವೇಳೆ ಸ್ವಲ್ಪ ಸಮಯ ಇಲ್ಲೇ ಕಳೆದು ಇನ್ನೇನೂ ಸೂರ್ಯ ಉದಯಿಸಿದ ನಂತರ ತೆರಳುವ ಎಂದು ಮನಸ್ಸಿನೊಳಗೆ ಅಂದುಕೊಂಡು ಅಲ್ಲೇ ಒಂದು ಬಸ್ಟ್ಯಾಂಡ್ ನ ಹತ್ತಿರ ಇರುವ ಸೀಟಿನ ಬಳಿ ಕುಳಿತು ಮೊಬೈಲ್ ನೋಡುತ್ತಾ ಸಮಯವನ್ನು ಕಳೆಯತೊಡಗಿದಳು.
ಆ ಹೊತ್ತಿನಲ್ಲಿ ಒಂದಷ್ಟು ಪುಂಡ ಯುವಕರ ಗುಂಪು ಆಕೆಯ ಎದುರಿನ ಸೀಟಿನಲ್ಲಿ ಕುಳಿತು ಆಕೆಯನ್ನೇ ದುರುಗುಟ್ಟುತ್ತ ರೇಗಿಸತೊಡಗಿದರು. ತಾನೇನು ಮಾಡಬೇಕು ಎಂದು ಅವಳಿಗೆ ತೋಚಲಿಲ್ಲ. ಅವಸವಸರವಾಗಿ ತನ್ನ ಮೊಬೈಲ್ ನ್ನು ಹಿಡಿದುಕೊಂಡು ಯಾರಿಗಾದರೂ ತನ್ನ ಪರಿಚಿತರಿಗೆ ಫೋನ್ ಮಾಡಿ ಮಾತಾಡಿಕೊಳ್ಳಬೇಕು ಎಂದು ಕರೆ ಮಾಡಿದಳು, ಆಕೆಯ ಗಾಬರಿಗೆ ಆ ಕರೆ ಯಾರಿಗೆ ಹೋಗಿದೆ ಎಂದು ನೋಡುವಷ್ಟು ತಾಳ್ಮೆ ಅವಳಿಗೆ ಇರಲ್ಲಿಲ್ಲ. ಇವಳ ಫೋನ್ ಕರೆ ಸ್ವೀಕರಿಸಿದ ವ್ಯಕ್ತಿ ಹಲೋ...... ಎಂದು ಉತ್ತರಿಸಿದನು, ಈಕೆ ಹಲೋ ದಯವಿಟ್ಟು ಸ್ವಲ್ಪ ಬೆಳಗಾಗುವ ತನಕ ನನ್ನೊಂದಿಗೆ ಮಾತಾಡಿ ಎಂದು ಹೇಳಿದಾಗ, ಸರಿ ಎಂದು ಮುಗುಳು ನಗುತ್ತಾ ಆತ ಹೇಳಿದನು. ಹೀಗೆ ಅವರಿಬ್ಬರ ಮಾತುಕತೆ ಮುಂದುವರಿಯುತ್ತಾ ಸಂಪೂರ್ಣ ಮುಂಜಾನೆ ಆಗೇ ಬಿಟ್ಟಿತ್ತು, ಅಷ್ಟು ಹೊತ್ತು ಮಾತನಾಡಿ ಅವರಿಬ್ಬರು ತಮ್ಮ ಪರಿಚಯವನ್ನು ಮಾಡುವದನ್ನು ಮರೆತು ಬಿಟ್ಟಿದ್ದರು. ಆಕೆಯ ಹೆಸರು ಅವನಿಗಾಗಲಿ, ಅವನ ಹೆಸರು ಇವಳಿಗಾಗಲಿ ಯಾವುದು ಗೊತ್ತಿಲ್ಲ. ಸರಿ ಬೈ... ಎಂದು ಕೊನೆಯಲ್ಲಿ ಮಾತ್ರ ಆಕೆ ನುಡಿದು ಕರೆಯನ್ನು ಕಟ್ ಮಾಡಿ ಇಟ್ಟಳು.
ಮುಂದಿನ ಊರಿಗೆ ತೆರಳಬೇಕಾದ ಆಟೋವನ್ನು ಏರಿದಳು, ಹೀಗೆ ಆಲೋಚನೆ ಮಾಡುತ್ತ ತನ್ನ ಒಮ್ಮೆ ಫೋನ್ ನ್ನು ಗಮನಿಸಿದಳು. ಅವಳಿಗೆ ಒಮ್ಮೆಲೇ ಕುತೂಹಲ ಆವರಿಸಿತು ತಾನು ಆಗ ಅಷ್ಟು ಹೊತ್ತು ಮಾತಾನಾಡಿದ ವ್ಯಕ್ತಿ ಯಾರೋ ಬೇರೆಯವರಾಗಿದ್ದರು. ತಾನು ಯಾರಿಗೋ ಮಾಡಬೇಕಾದ ಕರೆ ಬೈ ಮಿಸ್ಟೇಕ್ ಆಗಿ ಅಲ್ಲಿ ನಂಬರ್ ಬದಲಾವಣೆ ಆಗಿರುವುದನ್ನು ಈಕೆ ಗಮನಿಸಿರಲಿಲ್ಲ. ಹಾಗಾದರೆ ತಾನು ಮಾಡಿದ ಫೋನ್ ಕರೆ ಯಾರಿಗೆ ಹೋದದ್ದು...!? ತನ್ನೊಂದಿಗೆ ಅಷ್ಟು ಹೊತ್ತು ಮಾತನಾಡಿದ ಆ ಯುವಕ ಯಾರು...!? ಎಂದು ಸ್ವಲ ಹೊತ್ತು ಆಕೆಯ ಮನಸ್ಸು ಆಕೆಯನ್ನು ಒಮ್ಮೆಲೇ ಪ್ರಶ್ನೆಯ ಸಾಲುಗಳನ್ನು ತಂದಿಟ್ಟಿತು, ಅಷ್ಟ್ಟು ಹೊತ್ತಿಗೆ ಆಟೋ ಆಕೆ ಹೋಗಬೇಕಾಗಿದ ಊರನ್ನು ತಲುಪಿಸಿತು.
ಆದರೂ ಆಕೆಗೆ ಆ ವ್ಯಕ್ತಿಯ ಯೋಚನೆ ಇನ್ನೂ ತಲೆಯೊಳಗೆ ಓಡಾಡುತ್ತಿತ್ತು, ನಾನು ಮತ್ತೊಮ್ಮೆ ಆ ವ್ಯಕ್ತಿಗೆ ಫೋನ್ ಮಾಡಬೇಕೋ ಬೇಡವೋ ಎಂದು ಯೋಚಿಸಿ ಏನೇ ಆಗಲಿ ಮತ್ತೊಮ್ಮೆ ಅದೇ ನಂಬರಿಗೆ ಕರೆ ನೀಡಿದಳು, ಆ ಕಡೆಯಿಂದ ಆ ವ್ಯಕ್ತಿ ಹಲೋ.... ಎಂದು ನುಡಿದನು. ಸಾರಿ ನನಗೆ ನೀವು ಯಾರೆಂದು ಗೊತ್ತಿಲ್ಲ ಆದರೆ ನನ್ನೊಂದಿಗೆ ಅಷ್ಟ್ಟು ಹೊತ್ತು ಮಾತನಾಡಿದ ನಿಮ್ಮ ಪರಿಚಯ ಹೆಸರು ಕೇಳುವುದನ್ನು ನಾನು ಮರೆತು ಬಿಟ್ಟಿದೆ ನಿಮ್ಮ ಪರಿಚಯ ಹೇಳಬಹುದೇ ಎಂದು ಯಾಕೋ ಸಂಕೋಚದಿಂದ ನುಡಿದು, ತನ್ನಿಂದ ನಿಮಗೆ ಮಿಸ್ ಆಗಿ ಕಾಲ್ ಬಂದಿದೆ ದಯವಿಟ್ಟು ಕ್ಷಮಿಸಿ ಎಂದು ಹೇಳಿ ನಡೆದ ಎಲ್ಲಾ ಕಥೆಯನ್ನು ಹೇಳಿದಳು. ಆಗ ಆ ವ್ಯಕ್ತಿಯು ನಾನು ನನಗೆ ಬಂದಂತಹ ಕರೆಯನ್ನು ಸರಿಯಾಗಿ ಗಮನಿಸಲಿಲ್ಲ ನನಗೂ ಈ ನಂಬರ್ ಹೊಸದೆಂದು ತಿಳಿಯುವಷ್ಟು ಜ್ಞಾನ ನನಗೆ ಇರಲಿಲ್ಲ, ನಾನು ನಿದ್ದೆಯ ಅಮಲಿನಲ್ಲಿ ನಿಮ್ಮ ಕರೆಯನ್ನು ಸ್ವೀಕರಿಸಿ ನಿಮ್ಮೊಂದಿಗೆ ಅಷ್ಟು ಹೊತ್ತು ಮಾತಾನಾಡಿದ್ದು ಎಂದು ನನಗೆ ಈಗ ತಿಳಿಯಿತು, ಸರಿ ಬಿಡಿ ಇಟ್ಸ್ ಓಕೆ.... ಮೇಡಂ ಎಂದು ಆತ ನುಡಿದನು. ಕೊನೆಗೆ ಟೆಲಿಫೋನ್ ಮೂಲಕ ತಮ್ಮ ತಮ್ಮ ಪರಿಚಯ ಮಾಡಿಕೊಂಡರು, ಇನ್ನೂ ಮುಖ ಪರಿಚಯವಾಗದ ಇವರಿಬ್ಬರ ಹೊಸ ಸ್ನೇಹಕ್ಕೆ ಟೆಲಿಫೋನ್ ಒಂದು ಸಾಕ್ಷಿಯಾಯಿತು.
- ಶಿಲ್ಪಾ ಜಯಾನಂದ್
ಪ್ರಥಮ ಜೆಎಂಸಿ ವಿಭಾಗ
ವಿವೇಕಾನಂದ ಕಾಲೇಜು, ಪುತ್ತೂರು
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ